Shreyas iyer: ನಿಜಕ್ಕೂ ಶ್ರೇಯಸ್ ಅಯ್ಯರ್‌ಗೆ ಟೆಸ್ಟಿಂಗ್ ಟೈಮ್: ಶಾರ್ಟ್ ಎಸೆತಗಳೇ ಕಂಟಕ
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಭರವಸೆ ಮೂಡಿಸಿದ ಆಟಗಾರ. ತಮ್ಮ ಕ್ಷಮತೆಯಿಂದಲೇ ಮಿಡ್ಲ್ ಆರ್ಡರ್‌ನಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಂಡ ಪ್ಲೇಯರ್. ಸಿಕ್ಕ ಅವಕಾಶದಲ್ಲಿ ಮೂರಂಕಿ ರನ್ ದಾಟಿ ಸಾಧನೆಯ ಶಿಖರ ಎರಿದ ಮುಂಬೈಕರ್. ಆದರೆ ಆ ಒಂದು ಎಸೆತ ನಿಜಕ್ಕೂ ಅವರ ನಿದ್ದೆಗೆಡಿಸಿದೆ.
ಟೀಮ್ ಇಂಡಿಯಾದ ಮೂರು ಫರ್ಮೆಟ್‌ಗಳಲ್ಲಿ ಆಡಿ ಸೈ ಎನಿಸಿಕೊಂಡಿರುವ ಆಟಗಾರನೇ ಶ್ರೇಯಸ್ ಅಯ್ಯರ್.. ಈ ಪ್ಲೇಯರ್ ಏಕದಿನ ವಿಶ್ವಕಪ್‌ನಲ್ಲೂ ತನ್ನ ಸ್ಥಿರ ಪ್ರದರ್ಶನದಿಂದ ಎಲ್ಲರ ಚಿತ್ತ ಕದ್ದ ಪ್ಲೇಯರ್. ಆದರೆ ಆ ಒಂದು ಎಸೆತದಿಂದ ಪರಿಹಾರ ಕಂಡುಕೊಳ್ಳಲು ಇನ್ನು ಅವರಿಗೆ ಸಾಧ್ಯವಾಗಿಲ್ಲ. ಇವರು ಕ್ರೀಸ್‌ಗೆ ಬರುತ್ತಿದ್ದಂತೆ ಎದುರಾಳಿ ಬೌಲರ್‌ಗಳು ಎಸೆಯುವ ಮೊದಲ ಅಸ್ತ್ರವೇ ಶಾರ್ಟ್ ಬೌಲ್.

ಈಗ ಎಲ್ಲರ ಚಿತ್ತ ಶ್ರೇಯಸ್ ಅಯ್ಯರ್ ಮೇಲೆ ನೆಟ್ಟಿದೆ. ಇವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಿಕ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಆಡುವುದು ಪಕ್ಕಾ. ಕೌಟುಂಬಿಕ ಕಾರಣದಿಂದ ವಿರಾಟ್ ಕೊಹ್ಲಿ ಅವರು ಎರಡು ಟೆಸ್ಟ್ ಪಂದ್ಯಗಳಿಂದ ಹೊರ ಗುಳಿದಿದ್ದಾರೆ. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ. ಆಗಲೇ ಎಲ್ಲರ ಚಿತ್ತ ಕದ್ದ ಆಟಗಾರ ಶ್ರೇಯಸ್ ಅಯ್ಯರ್.
ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು?
ಶ್ರೇಯಸ್ ಅಯ್ಯರ್ ಕಳೆದ ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. 2023 ರಿಂದ ಇಲ್ಲಿಯವರೆಗೆ, ಅವರು 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 8 ಇನ್ನಿಂಗ್ಸ್‌ಗಳಲ್ಲಿ ಕೇವಲ 83 ರನ್ ಗಳಿಸಿದ್ದಾರೆ. ಒಂದು ಬಾರಿಯೂ 50 ರನ್ ಗಡಿ ಸಹ ಮುಟ್ಟಲು ಸಾಧ್ಯವಾಗಿಲ್ಲ. ಅವರ ಬ್ಯಾಟಿಂಗ್ ಸರಾಸರಿ 11.85 ರನ್ ಆಗಿದೆ. ಈ ಕಳಪೆ ಬ್ಯಾಟಿಂಗ್ ಸರಾಸರಿ ಹೊರತಾಗಿಯೂ, ಟೆಸ್ಟ್ ತಂಡದಲ್ಲಿ ಅವರ ಆಯ್ಕೆಯು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. 2023 ರ ವಿಶ್ವಕಪ್‌ನಲ್ಲಿ ಅವರ ಪ್ರಬಲ ಪ್ರದರ್ಶನದಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಲ್ಲಿಯೂ ಅವರು ಟೆಸ್ಟ್‌ನಲ್ಲಿ ನಿರಾಸೆ ಅನುಭಿಸಿದ್ದರು.

ಶಾರ್ಟ್ ಬಾಲ್ ಸಮಸ್ಯೆ
ಶ್ರೇಯಸ್ ಅಯ್ಯರ್ ಅವರ ದೊಡ್ಡ ದೌರ್ಬಲ್ಯವೆಂದರೆ ಶಾರ್ಟ್ ಬಾಲ್. ಎದುರಾಳಿ ವೇಗದ ಬೌಲರ್‌ಗಳು ಅವರಿಗೆ ಹೆಚ್ಚಾಗಿ ಶಾರ್ಟ್ ಬಾಲ್‌ಗಳನ್ನು ಬೌಲ್ ಮಾಡುತ್ತಾರೆ. ಈ ಎಸೆತಗಳಲ್ಲಿ ಶ್ರೇಯಸ್ ಕೂಡ ತಮ್ಮ ವಿಕೆಟ್‌ಗಳನ್ನು ನೀಡುತ್ತಿದ್ದಾರೆ. ಈ ದೌರ್ಬಲ್ಯವನ್ನು ಹೋಗಲಾಡಿಸಲು ಇದುವರೆಗೂ ಅವರಿಗೆ ಸಾಧ್ಯವಾಗಿಲ್ಲ. ಇದೀಗ ಅವರ ಈ ದೌರ್ಬಲ್ಯವೇ ಈ ಸಮಯದಲ್ಲಿ ಟೀಂ ಇಂಡಿಯಾಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಶಾರ್ಟ್‌ಬಾಲ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಅಭ್ಯಾಸದಿಂದಾಗಿ, ವೇಗದ ಬೌಲರ್‌ಗಳ ವಿರುದ್ಧ ಶ್ರೇಯಸ್ ಅವರ ಅಬ್ಬರ ಮಂಕಾಗಿದೆ. ವೇಗದ ಬೌಲರ್‌ಗಳ ವಿರುದ್ಧ ಟೆಸ್ಟ್‌ನಲ್ಲಿ ಅವರ ಬ್ಯಾಟಿಂಗ್ ಸರಾಸರಿ ಕೇವಲ 28.11ಕ್ಕೆ ಇಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಶ್ರೇಯಸ್ ಭಾರತದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ವಿಶೇಷವಾಗಿ ಸ್ಪಿನ್ನರ್‌ಗಳ ವಿರುದ್ಧ ಅವರ ದಾಖಲೆ ಬಲವಾಗಿದೆ. ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್‌ಗಳೀವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಅವರಿಗೆ ಉತ್ತಮ ಅವಕಾಶ. ವೇಗದ ಬೌಲರ್‌ಗಳ ಶಾರ್ಟ್ ಬಾಲ್‌ಗಳ ಮುಂದೆ ಅವರು ಸ್ವಲ್ಪ ಎಚ್ಚರದಿಂದಿರಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications