'ಇದು ಮ್ಯಾಜಿಕ್': ವಿಭಿನ್ನ ವೀಡಿಯೋ ಶೇರ್ ಮಾಡಿದ ಶ್ರೇಯಸ್ ಐಯ್ಯರ್

ನವದೆಹಲಿ, ಮೇ 31: ಕೊರೊನಾವೈರಸ್ ಲಾಕ್‌ಡೌನ್ ಅವಧಿಯಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ತಮ್ಮ ಸೃಜನಶೀಲತೆ ಪ್ರದರ್ಶಿಸುತ್ತಿದ್ದಾರೆ. ಹಿಂದೆಯೂ ಶ್ರೇಯಸ್ ತಮ್ಮ ಮ್ಯಾಜಿಕ್ ಕಲೆಯನ್ನು ಪ್ರದರ್ಶಿಸಿದ್ದರು. ಇತ್ತೀಚಿಗೆ ಮತ್ತೊಂದು ವಿಭಿನ್ನ ವೀಡಿಯೋವನ್ನು ಶ್ರೇಯಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರತ ತಂಡದಲ್ಲಿ ಲಿಮಿಟೆಡ್ ಓವರ್ ಮಾದರಿಯಲ್ಲಿ ನಂ.4ನೇ ಕ್ರಮಾಂಕದಲ್ಲಿ ಗಟ್ಟಿಯಾಗುತ್ತಿರುವ ಶ್ರೇಯಸ್, ತನ್ನ ಮನೆಯಲ್ಲಿ ಟೆನಿಸ್ ಬಾಲ್ ಉಪಯೋಗಿಸಿ ವಿಭಿನ್ನ ವೀಡಿಯೋ ತಯಾರಿಸಿದ್ದಾರೆ. ಬ್ಯಾಟಿಂಗ್ ಮೂಲಕ ಶ್ರೇಯಸ್ ಅಟ್ಟಿದ ಚೆಂಡು ಅವರ ಸಾಕು ನಾಯಿ, ಕುಟುಂಬಸ್ಥರ ಕೈ ದಾಟಿ ಕೊನೆಗೆ ತಾನು ಮೊದಲಿದ್ದ ಜಾಗಕ್ಕೆ ಬಂದು ಕೂರುವ ಈ ವೀಡಿಯೋ ನೋಡೋದಕ್ಕೆ ಚೆನ್ನಾಗಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೋದಲ್ಲಿ, 'ಇದು ಮ್ಯಾಜಿಕ್ಕಾ ಅಥವಾ ನಿಜನಾ? ಎಂದು ಪ್ರಶ್ನಿಸಿರುವ ಶ್ರೇಯಸ್, 'ಬ್ಯಾಟಿಂಗ್ ಪ್ರ್ಯಾಕ್ಟೀಸ್ ಸರಿಯಾಗಿ ಮುಗೀತು' ಅಂತ ಸಾಲನ್ನೂ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಶ್ರೇಯಸ್ ಐಯ್ಯರ್ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿ ಮಾತನಾಡಿದ್ದರು. ಕೊಹ್ಲಿ ತನ್ನ ಸಕಾರಾತ್ಮಕ ಮನೋಭಾವದ ಮೂಲಕ ಎಲ್ಲರನ್ನೂ ಸ್ಫೂರ್ತಿಗೊಳಿಸುತ್ತಿದ್ದಾರೆ. ನೀವು ಬೆಳೆಯುವವರಾಗಿದ್ದರೆ ಅವರ ಹವ್ಯಾಸಗಳಿಂದ ಕೆಲವೊಂದನ್ನು ಕಲಿಯಬಹುದು ಎಂದು ಶ್ರೇಯಸ್ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications