Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shreyas Iyer: ಹಿಟ್‌ ಮ್ಯಾನ್‌ ಬ್ಯಾಟ್ ಬಳಿಸಿದ ಮಾಡಿದ ಶ್ರೇಯಸ್ ಅಯ್ಯರ್

ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲೂ ರೋಹಿತ್ ಶರ್ಮಾ ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಆಧಾರವಾದರು. ಈ ವೇಳೆ ರೋಹಿತ್ ಶರ್ಮಾ ಬ್ಯಾಟ್‌ ಸದ್ದು ಮಾಡುತ್ತಿದೆ. ಏನಪ್ಪಾ ಇದು ಅಂದ ಕೇಳಿದ್ರಾ ಇಲ್ಲಿದೆ ವರದಿ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 249 ರನ್‌ ಸೇರಿಸಿತು. ಈ ವೇಳೆ ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಈ ವೇಳೆ ಇವರು 98 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 79 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಶ್ರೇಯಸ್‌ ಅಯ್ಯರ್‌ ಅವರ ಈ ಅಮೋಘ ಇನಿಂಗ್‌ಗಿಂತಲೂ ಅವರು ಬಳಸಿದ ಬ್ಯಾಟ್‌ ಬಹಳ ಚರ್ಚೆಗೆ ಗ್ರಾಸವಾಗಿದೆ.

Shreyas Iyer Shines with Rohit Sharma s Hitman Bat in Champions Trophy Clash Against New Zealand

ಹಿಟ್‌ ಮ್ಯಾನ್‌ ಬ್ಯಾಟ್‌

ಶ್ರೇಯಸ್‌ ಅಯ್ಯರ್‌ ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಬಾರಿಸಿ ಬ್ಯಾಟ್‌ ಎತ್ತಿದಾಗ ಆ ಬ್ಯಾಟ್‌ ಮೇಲೆ ಹಿಟ್ ಮ್ಯಾನ್‌ ಎಂದು ಬರೆದಿದ್ದು ಕಂಡು ಬಂದಿದೆ. ರೋಹಿತ್ ಶರ್ಮಾ ಅವರು ಬಳಸುವ ಬ್ಯಾಟ್‌ಗಳ ಸ್ಟಿಕ್ಕರ್‌ನಲ್ಲಿ 'ಹಿಟ್ ಮ್ಯಾನ್' ಎಂದು ಬರೆಯಲ್ಪಟ್ಟಿರುತ್ತದೆ. ರೋಹಿತ್ ಶರ್ಮಾ ಮತ್ತು ಅಯ್ಯರ್ ಒಂದೇ ಬ್ರಾಂಡ್ ಪ್ರಾಯೋಜಿಸಿದ ಬ್ಯಾಟ್‌ ನಿಂದ ಆಡುತ್ತಾರೆ. ಶ್ರೇಯಸ್‌ ಅಯ್ಯರ್‌ ಅಮೋಘ ಇನಿಂಗ್ಸ್‌ಹಿಂದೆ ರೋಹಿತ್ ಶರ್ಮಾ ಅವರ ಬ್ಯಾಟ್ ಕೆಲಸ ಮಾಡಿದೆ. ಶ್ರೇಯಸ್‌ ಅಯ್ಯರ್ ತಮ್ಮ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕಿವೀಸ್ ತಂಡಕ್ಕೆ ಕಾಟ ನೀಡಿದರು.

Shreyas Iyer Shines with Rohit Sharma s Hitman Bat in Champions Trophy Clash Against New Zealand

ಇತ್ತೀಚಿನ ದಿನಗಳಲ್ಲಿ ತಮ್ಮ ಅಮೋಘ ಬ್ಯಾಟಿಂಗ್‌ನಿಂದ ನಾಲ್ಕನೇ ಕ್ರಮಾಂಕವನ್ನು ತಮ್ಮದಾಗಿಸಿಕೊಂಡಿರುವ ಶ್ರೇಯಸ್‌ ಅಯ್ಯರ್‌ ಅಬ್ಬರಿಸುತ್ತಿದ್ದಾರೆ. ಇವರು 68ನೇ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿದರು. ಈ ವೇಳೆ ತಮ್ಮ ವೃತ್ತಿ ಜೀವನದ 22ನೇ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರ ಈ ಉತ್ತಮ ಆಟದ ನೆರವಿನಿಂದಲೇ ಟೀಮ್ ಇಂಡಿಯಾದ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು.

Story first published: Sunday, March 2, 2025, 20:20 [IST]
Other articles published on Mar 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+