ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ವಿಧ್ವಂಸಕ ಪ್ರದರ್ಶನ ನೀಡಿದ ಭಾರತ ತಂಡ ತನ್ನ ಸಂಘಟಿತ ಆಟದಿಂದಾಗಿ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ. ಶುಬ್ಮನ್ ಗಿಲ್ ಹಾಘೂ ಶ್ರೇಯಸ್ ಐಯ್ಯರ್ ಶತಕ ಸಿಡಿಸಿ ಅಬ್ಬರಿಸಿದ್ದರೆ ಬೌಲಿಂಗ್‌ನಲ್ಲಿ ಅಶ್ವಿನ್ ಹಾಗೂ ಜಡೇಜಾ ತಲಾ ಮೂರು ವಿಕೆಟ್ ಕಿತ್ತು ಅಬ್ಬರಿಸಿದ್ದಾರೆ.
ಇನ್ನು ಗಾಯದಿಂದ ಚೇತರಿಸಿಕೊಂಡ ಬಳಿಕ ಶ್ರೇಯಸ್ ಐಯ್ಯರ್ ಪ್ರದರ್ಶನ ಬಹಳ ನಿರೀಕ್ಷೆ ಮೂಡಿಸಿತ್ತು. ಈ ಪಂದ್ಯದಲ್ಲಿ ಅಯ್ಯರ್ ಅದ್ಭುತ ಆಟವನ್ನಾಡುವ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಈ ಮೂಲಕ ತಾನಿ ವಿಶ್ವಕಪ್‌ಗೆ ಸಿದ್ಧ ಎನ್ನುವ ಸಂದೇಶವನ್ನು ಕೂಡ ಮುಂಬೈ ಮೂಲದ ಈ ಆಟಗಾರ ರವಾನಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಗಾಯದಿಂದಾಗಿ ವಿಶ್ರಾಂತಿ ಪಡೆಯುತ್ತಿದ್ದ ಅವಧಿಯಲ್ಲಿ ತನಗಾದ ಅನುಭವವನ್ನು ಐಯ್ಯರ್ ಹಂಚಿಕೊಂಡಿದ್ದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಗಾಯದಿಂದಾಗಿ ಸುದೀರ್ಘ ಕಾಲದಿಂದ ತಂಡದಿಂದ ಹೊರಗುಳಿದಿದ್ದ ಶ್ರೇಯಸ್ ಐಯ್ಯರ್ ಕಮ್‌ಬ್ಯಾಕ್ ಮಾಡಿದ ಬಳಿಕ ಮೊದಲ ಶತಕವನ್ನು ಸಿಡಿಸಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಐಯ್ಯರ್ 90 ಎಸೆತಗಳಲ್ಲಿ 105 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 399 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಲು ಕಾರಣವಾದರು. ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದ್ದಾರೆ. ಶುಬ್ಮನ್ ಗಿಲ್ ಜೊತೆಗೆ ಸೇರಿಕೊಂಡು ಎರಡನೇ ವಿಕೆಟ್‌ಗೆ 200 ರನ್‌ಗಳ ಜೊತೆಯಾಟದಲ್ಲಿ ಐಯ್ಯರ್ ಭಾಗಿಯಾಗಿದ್ದರು.
ಪಂದ್ಯದ ಮುಗಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಐಯ್ಯರ್ ಗಾಯದಿಂದ ಚೇತರಿಸಿಕೊಂಡ ಬಗ್ಗೆ ಮಾತನಾಡಿದ್ದಾರೆ. ಈ ಅವಧಿ ಸಾಕಷ್ಟು ಏರಿತಗಳಿಂದ ಕೂಡಿತ್ತು ಎಂದ ಐಯ್ಯರ್ ಈಊ ಅವಧಿಯಲ್ಲಿ ತನ್ನ ತನ್ನಲ್ಲಿನ ಸಾಮರ್ಥ್ಯ ಹಾಗೂ ನಂಬಿಕೆ ತನಗೆ ಭರವಸೆ ಮೂಡಿಸಿತ್ತು ಎಂದ ಅವರು ಅದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ. ಆದರೆ ಈ ಅವಧಿಯಲ್ಲಿ ತಾನು ಏಕಾಂಗಿಯ ಎನಿಸುವ ಸಂರ್ಭಗಳು ಕೂಡ ಬಂದಿತ್ತು ಎಂದಿರುವ ಶ್ರೇಯಸ್ ಐಯ್ಯರ್ ಈ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ತರಬೇತಿದಾರರು ಹಾಗೂ ಫಿಸಿಯೋಗಳು ತನಗೆ ಸ್ಪೂರ್ತಿ ತುಂಬಿದರು ಎಂಬುದಾಗಿ ಹೇಳಿಕೊಂಡಿದ್ದಾರೆ.
"ಖಮಡಿತವಾಗಿಯೂ ಅದೊಂದು ಸಾಕಷ್ಟು ಏರಿಳಿತಗಳ ಅವಧಿಯಾಗಿತ್ತು. ಪ್ರಾಮಾಣಿಸಕವಾಗಿ ಹೇಳಬೇಕೆಂದರೆ ನಾನು ನನಗೆ ಇಲ್ಲಿ ಧನ್ಯವಾದ ಸಲ್ಲಿಸಬೇಕು. ಒಂದು ಸಂದರ್ಭದಲ್ಲಿ ನನ್ನ ಸಾಮರ್ಥ್ಯ ಮತ್ತು ಮನಸ್ಥಿತಿಯ ಬಗ್ಗೆ ಮಾತ್ರವೇ ನನಗೆ ನಂಬಿಕೆಯಿತ್ತು. ಒಂದು ಹಂತದಲ್ಲಿ ನಾನು ಏಕಾಂಗಿ ಎನ್ನುವ ಭಾವನರ ಮೂಡಿತ್ತು. ಆದರೆ ನನ್ನ ಫಿಸಿಯೋ, ತರಬೇತಿದಾರರು ಹಾಗೂ ನನ್ನ ಕುಟುಂಬಕ್ಕೆ ನಾನು ಧನ್ಯವಾದ ಹೇಳುತ್ತೇನೆ ಯಾಕೆಂದರೆ ಅವರು ಆ ಭಾವನೆಯಿಂದ ನನ್ನನ್ನು ಹೊರಬರುವಂತೆ ಮಾಡಿದರು. ಅಂಥವರು ನನ್ನ ಸುತ್ತ ಇರುವುದಕ್ಕೆ ನಾನು ಬಹಳ ಧನ್ಯವಾದ ಸಲ್ಲಿಸುತ್ತೇನೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್.
"ಈ ಎಲಲ್ರೂ ನನ್ನ ಸುತ್ತ ಇದ್ದು ನನ್ನ ಹುರುಪನ್ನು ಹೆಚ್ಚಿಸುತ್ತಿದ್ದರು. ಅದು ನನ್ನ ಸ್ಪೂರ್ತಿಯನ್ನು ಹೆಚ್ಚಿಸುತ್ತಿತ್ತು ಮತ್ತು ಸಕಾರಾತ್ಮಕವಾಗೊ ಯೋಚಿಸುವಂತೆ ಮಾಡುತ್ತಿತ್ತು. ಹಾಗಾಗಿ ನಾನು ಬಹಳ ಕೃತಜ್ಞ ಹಾಗೂ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ" ಎಂದಿದ್ದಾರೆ ಟೀಮ್ ಇಂಡಿಯಾದ ಆಟಗಾರ ಶ್ರೇಯಸ್ ಐಯ್ಯರ್.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ವಿಶ್ವಕಪ್‌ಗೂ ಮುನ್ನ ಪ್ರಮುಖ ದ್ವಿಪಕ್ಷೀಯ ಸರಣಿಯನ್ನು ಗೆದ್ದುಕೊಂಡಿದೆ. ಈಗಾಗಲೇ ನಂಬರ್ 1 ಸ್ಥಾನಕ್ಕೇರಿರುವ ಟೀಮ್ ಇಂಡಿಯಾ ಈ ಸರಣಿ ಗೆಲುವಿನೊಂದಿಗೆ ವಿಶ್ವಕಪ್ ಟೂರ್ಬಿಗೂ ನಂಬರ್1 ತಂಡವಾಗಿಯೇ ಕಣಕ್ಕಿಳಿಯುವುದು ಖಚಿತವಾಗಿದೆ.