IPL Auction 2025: ಹರಾಜಿಗೂ ಒಂದು ದಿನ ಮುನ್ನ ಶತಕ ಬಾರಿಸಿ, ಫ್ರಾಂಚೈಸಿಗಳ ಗಮನ ಸೆಳೆದ ಚಾಂಪಿಯನ್ ಪ್ಲೇಯರ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈ ಬಿಟ್ಟ ಪ್ಲೇಯರ್ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿಗೂ ಒಂದು ದಿನ ಮುಂಚಿತವಾಗಿ ಇವರು ಶತಕ ಬಾರಿಸಿದ್ದು, ಮಾಲೀಕರು ಇವರತ್ತ ನೋಡುವಂತೆ ಮಾಡುವುದರಲ್ಲಿ ಸುಳ್ಳಲ್ಲ. ಕೆಕೆಆರ್ ತಂಡಕ್ಕೆ ಚಾಂಪಿಯನ್ ಮುಕುಟ ತೊಡಿಸಿದ ಸ್ಟಾರ್ ಕ್ಯಾಪ್ಟನ್‌ನನ್ನು ಕೆಕೆಆರ್ ರಿಲೀಸ್ ಮಾಡಿತ್ತು. ಇವರು ಈಗ ಐಪಿಎಲ್ ಹರಾಜು ಅಂಗಳ ಪ್ರವೇಶಿಸಿದ್ದಾರೆ. ಹಲವು ತಂಡಗಳಿಗೆ ಒಬ್ಬ ನುರಿತ ನಾಯಕನ ಅವಶ್ಯಕತೆ ಇದೆ. ಈ ವೇಳೆ ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂಬೈ ಪರ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟ್ ಮಾಡಿದರು. ಗೋವಾ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ತಮ್ಮ ನೈಜ ಆಟವನ್ನು ಆಡಿ ಗಮನ ಸೆಳೆದರು. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 250 ರನ್ ಗಳಿಸಿತು. ಈ ಪಂದ್ಯದಲ್ಲಿ ಅಯ್ಯರ್ ಔಟಾಗದೆ ಶತಕ ಬಾರಿಸಿದರು.

ಶತಕದ ಅಬ್ಬರ
ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ 22 ಎಸೆತಗಳಲ್ಲಿ 33 ಸಿಡಿಸಿ ಔಟ್ ಆದರು. ಆರಂಭಿಕ ಯುವ ಆಟಗಾರ ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಜಿಂಕ್ಯ ರಹಾನೆ 13 ರನ್‌ಗಳಿಗೆ ಆಟ ಮುಗಿಸಿದರು. ಶಮ್ಸ್ ಮುಲಾನಿ 41 ರನ್ ಸಿಡಿಸಿ ತಂಡಕ್ಕೆ ನೆರವಾದರು.
ಮುಂಬೈ ತಂಡದ ಪರ ಶ್ರೇಯಸ್ ಅಯ್ಯರ್ ಅಜೇಯ ಶತಕ ಬಾರಿಸಿ ಅಬ್ಬರಿಸಿದರು. ಇವರು 57 ಎಸೆತಗಳಲ್ಲಿ 11 ಬೌಂಡರಿ, 10 ಸಿಕ್ಸರ್ ಸಹಾಯದಿಂದ ಅಜೇಯ 130 ರನ್ ಸಿಡಿಸಿ ಅಬ್ಬರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 228.07 ಆಗಿತ್ತು.

ಐಪಿಎಲ್ ಸಾಧನೆ
ಅಯ್ಯರ್ ಈ ಇನ್ನಿಂಗ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಪರಿಣಾಮ ಬೀರಲಿದೆ. ಐಪಿಎಲ್ ಮೆಗಾ ಹರಾಜಿಗೆ ಒಂದು ದಿನ ಮೊದಲು ಅಯ್ಯರ್ ಈ ಶತಕ ದಾಖಲಿಸಿದ್ದಾರೆ. ಇದರಿಂದಾಗಿ ಐಪಿಎಲ್ ತಂಡಗಳು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಉತ್ತಮ ನೀಡಿ ಖರೀದಿಸಲು ಮುಂದಾಗುವ ಸಾಧ್ಯತೆ ಇದೆ. ಅಯ್ಯರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 116 ಪಂದ್ಯಗಳಲ್ಲಿ 3127 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ ಅದ್ಭುತವಾಗಿದೆ. ಅವರು ಐಪಿಎಲ್‌ನಲ್ಲಿ 127.47 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದಾರೆ.
ನಾಯಕರ ಹುಡುಕಾಟ
ಆರ್‌ಸಿಬಿ, ಡೆಲ್ಲಿ, ಲಕ್ನೋ ಸೂಪರ್ ಜೈಂಟ್ಸ್, ಪಂಜಾ ಕಿಂಗ್ಸ್ ತಂಡಗಳು ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ನಾಯಕನ ಹುಡುಕಾಟ ನಡೆಸಲಿವೆ. ಈ ವೇಳೆ ಶ್ರೇಯಸ್ ಅಯ್ಯರ್ ಉತ್ತಮ ಆಯ್ಕೆ ಆಗಲಿದ್ದಾರೆ. ಇವರ ಮೂಲ ಬೆಲೆ 2 ಕೋಟಿ ಆಗಿದ್ದು, ಇವರು ಎಷ್ಟು ಮೊತ್ತಕ್ಕೆ ಬಿಕರಿ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications