Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೇಯಸ್ ಐಯ್ಯರ್‌ಗೆ ಏಪ್ರಿಲ್ 8ರಂದು ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ

Shreyeas Iyer to undergo shoulder surgery in Mumbai on April 8

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಐಯ್ಯರ್‌ಗೆ ಗುರುವಾರ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಭುಜದ ಮೂಳೆ ಭಾಗಶಃ ಸ್ಥಳಾಂತರಿಸಿರುವುದನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗುತ್ತದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದರು.

ಶ್ರೇಯಸ್ ಐಯ್ಯರ್ ಅವರ ಐಪಿಎಲ್ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ಶಸ್ತ್ರಚಿಕಿತ್ಸೆಯ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಜೊತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂಪೂರ್ಣ ಶ್ರೇಯಸ್ ಐಯ್ಯರ್‌ಗೆ ಸಂಪೂರ್ಣ ಬೆಂಬಲವನ್ನು ನೀಡಿದೆ. ಈ ಗಾಯದ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

ಇನ್ನು ಶ್ರೇಯಸ್ ಐಯ್ಯರ್ ಗಾಯದಿಂದಾಗಿ ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿರುವಾಗಲೂ ಸಾಕಷ್ಟು ಹುರುಪಿನಿಂದ ಸಮಯಕಳೆದಿದ್ದಾರೆ. ಮುಂಬೈ ಬೀಚ್‌ನಲ್ಲಿ ತನ್ನ ಮುದ್ದಿನ ನಾಯಿಯೊಂದಿಗೆ ಶ್ರೇಯಸ್ ಐಯ್ಯರ್ ಸಮಯ ಕಳೆದಿದ್ದಲ್ಲದೆ, ಹೇರ್‌ಸ್ಟೈಲ್ ಬದಲಾಯಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ಗೆ ನೂತನ ನಾಯಕನನ್ನು ನೇಮಿಸಿದ್ದು ರಿಷಭ್ ಪಂತ್ ನಾಯಕನಾಗಿ ಈ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಬಾರಿಯ ಫೈನಲಿಸ್ಟ್ ತಂಡವಾಗಿರುವ ಡೆಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಏಪ್ರಿಲ್ 10ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದೆ.

"ನಾನು ಗಾಯಗೊಂಡಿರುವುದರಿಂದಾಗಿ ಈ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಲು ನಾಯಕನ ಅಗತ್ಯವಿದೆ. ಈ ಜವಾಬ್ಧಾರಿಗೆ ರಿಷಭ್ ಪಂತ್ ಸೂಕ್ತ ವ್ಯಕ್ತಿ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ವಿಶೇಷವಾದ ತಂಡದೊಂದಿಗೆ ಅದ್ಭುತವಾದದ್ದನ್ನು ಸಾಧಿಸಲು ನನ್ನ ಶುಭಾಶಯಗಳು ತಂಡದ ಜೊತೆಗಿದೆ" ಎಂದು ಶ್ರೇಯಸ್ ಐಯ್ಯರ್ ಹೊಸ ನಾಯಕನಿಗೆ ಶುಭಕೋರಿದ್ದರು.

Story first published: Thursday, April 8, 2021, 9:58 [IST]
Other articles published on Apr 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+