Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ಒಬ್ಬನ ಎಂಟ್ರಿ, ಇಬ್ಬರಲ್ಲಿ ಒಬ್ಬರ ಸ್ಥಾನಕ್ಕೆ ಕುತ್ತು!

ಏಷ್ಯಾ ಕಪ್‌ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಟೂರ್ನಿಗೆ ಯಾರಿಗೆಲ್ಲಾ ಅವಕಾಶ ಸಿಗುವ ಸಾಧ್ಯತೆಗಳ ಇದ್ದವೋ ಅವರಿಗೆಲ್ಲಾ ಶಾಕ್‌ ಕಾದಿದೆ. ಕಳೆದ ಒಂದು ವರ್ಷದಿಂದ ಮೈದಾನಕ್ಕೆ ಇಳಿದಿದ್ದ ಟಿ20 ತಂಡವನ್ನೇ ಬಹುತೇಕವಾಗಿ ಉಳಿಸಿಕೊಳ್ಳಲಾಗಿದೆ. ಆದರೆ ಉಪನಾಯಕನ ಸ್ಥಾನಕ್ಕೆ ಶುಭಮನ್ ಗಿಲ್ ಅವರಿಗೆ ಅವಕಾಶ ನೀಡಲಾಗಿದೆ. ಶುಭಮನ್ ಗಿಲ್‌ ಎಂಟ್ರಿ ಪಡೆದಿದ್ದರಿಂದ ಇವರು ಆಡುವ ಹನ್ನೊಂದರ ಬಳಗದಲ್ಲಿ ಆಡುವುದು ಫಿಕ್ಸ್ ಆದಂತೆ ಆಗಿದೆ. ಆದರೆ ಯಾರನ್ನು ಕೈ ಬಿಡುವುದ ಎಂಬ ಪ್ರಶ್ನೆಗಳು ಎದ್ದಿವೆ.

ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಸ್ಟಾರ್ ಪ್ಲೇಯರ್‌ ಶುಭಮನ್‌ ಗಿಲ್‌ ಅವರಿಗೆ ತಂಡದಲ್ಲಿ ಸ್ಥಾನ ಲಭಿಸುತ್ತದೆ ಎಂಬ ಲೆಕ್ಕಾಚಾರ ಇತ್ತು. ಅಂತೆಯೇ ಇವರಿಗೆ ಆಡುವ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಲ್ಲದೆ ಇಂಗ್ಲೆಂಡ್‌ ಪ್ರವಾಸದಲ್ಲಿ ತಂಡವನ್ನು ಮನ್ನಡೆಸಿದ್ದ ಇವರು, ಈಗ ಏಷ್ಯಾ ಕಪ್‌ ಟಿ20 ತಂಡದಲ್ಲಿ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರು ಎಂಟ್ರಿ ನೀಡಿದ್ದು, ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ ಇಬ್ಬರು ಆಟಗಾರರಿಗೆ ಭಯ ಶುರುವಾಗಿದೆ.

Shubman Gill as Vice-Captain Tilak Varma or Sanju Samson Who Will Be Dropped

ಶುಭಮನ್‌ ಗಿಲ್‌ ಕೊನೆಯಬಾರಿಗೆ ಭಾರತದ ಟಿ20 ಪಂದ್ಯವನ್ನು ಕಳೆದ ವರ್ಷ ಜುಲೈನಲ್ಲಿ ಆಡಿದ್ದರು. ಅಲ್ಲಿಂದ ಇವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಈಗ ಇವರಿಗೆ ತಂಡದಲ್ಲಿ ಸ್ಥಾನ ನೀಡಿ ಉಪನಾಯನ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಇವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಕನ್ಫರ್ಮ್ ಎಂದು ಆಗಿದೆ. ಹೀಗೆ ಆದಲ್ಲಿ ಯಾರ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಗಿಲ್ ಆರಂಭಿಕರಾಗಿ ಆಡಿದರೆ...

ಶಭಮನ್‌ ಗಿಲ್ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಆರಂಭಿಕರಾಗಿ ಮೈದಾನಕ್ಕೆ ಇಳಿದಲ್ಲಿ ಇವರು, ಅಭಿಷೇಕ್ ಶರ್ಮಾ ಅವರೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಆಗ ತಂಡ ಸಂಜು ಸ್ಯಾಮ್ಸನ್‌ ಅವರಿಗೆ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶನ್ನು ನೀಡಬಹುದು. ಇಲ್ಲವೇ ಗೇಟ್ ಪಾಸ್‌ ನೀಡಬಹುದು. ಒಂದು ವೇಳೆ ಸಂಜು ತಂಡದಿಂದ ಹೊರ ನಡೆದಲ್ಲಿ, ಜಿತೇಶ್‌ ಶರ್ಮಾ ವಿಕೆಟ್‌ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಫಿನಿಷರ್ ಪಾತ್ರದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮೂರನೇ ಕ್ರಮಾಂಕದಲ್ಲಿ ಆಡಿದರೆ...

ಸದ್ಯ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರ ಮೇಲೆ ಮ್ಯಾನೇಜ್ಮೆಂಟ್‌ ವಿಶ್ವಾಸವನ್ನು ಇಟ್ಟಲ್ಲಿ, ಶುಭಮನ್‌ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಆಗ ಜಿತೇಶ್‌ ಶರ್ಮಾ ಅವರಿಗೆ ಅವಕಾಶ ಸಿಗುವ ಚಾನ್ಸ್‌ ಕಡಿಮೆ. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ತಿಲಕ್ ವರ್ಮಾ ಅವರು ಬೆಂಚ್ ಕಾಯಬೇಕಾಗುತ್ತದೆ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ಹೇಗಿರಲಿದೆ ಎಂಬ ಬಗ್ಗೆ ದೊಡ್ಡ ಚರ್ಚೆಗಳು ಆರಂಭವಾಗಿವೆ.

Story first published: Tuesday, August 19, 2025, 21:00 [IST]
Other articles published on Aug 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+