For Quick Alerts
ALLOW NOTIFICATIONS  
For Daily Alerts
 

Shubman Gill: ಗಿಲ್‌ ನಂಬರ್‌ 1 ಬ್ಯಾಟರ್‌: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾಗೆ "ಶುಭ" ಸುದ್ದಿ

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಮಂದಹಾಸ ಮೂಡಿದೆ. ಭಾರತದ ಭವಿಷ್ಯದ ಸ್ಟಾರ್ ಬ್ಯಾಟರ್‌ ಈ ಸುದ್ದಿಯನ್ನು ಹೊತ್ತು ತಂದಿದ್ದಾರೆ. ಬುಧವಾರ ಬಿಡುಗಡೆಯಾದ ನೂತನ ಐಸಿಸಿ ಶ್ರೇಯಾಂಕದಲ್ಲಿ, ಯಂಗ್ ಪ್ಲೇಯರ್‌ ಶುಭಮನ್‌ ಗಿಲ್‌ ದೊಡ್ಡ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮತ್ತೊಬ್ಬ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಶುಭಮನ್‌ ಗಿಲ್‌ ಅಗ್ರ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚಿಗೆ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಶುಭಮನ್‌ ಗಿಲ್‌ ಅಮೋಘ ಪ್ರದರ್ಶನ ನೀಡಿದ್ದರು. ಇವರ ಅಬ್ಬರದ ಆಟದ ಫಲವಾಗಿ, ಭಾರತ ತವರಿನಲ್ಲಿ ಸರಣಿ ಗೆದ್ದಿತ್ತು. ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಫಲವಾಗಿ ಶುಭಮನ್‌ ಗಿಲ್‌ ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ತಲುಪಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 86.33 ರ ಸರಾಸರಿಯಲ್ಲಿ 259 ರನ್‌ ಕಲೆ ಹಾಕಿ ಮಿಂಚಿದ್ದರು. ಈ ಸಾಧನೆಯ ಮೂಲಕ ಶುಭಮನ್‌ ಗಿಲ್‌, ಬಾಬಾರ್‌ ಅಜಮ್‌ ಅವರನ್ನು ಹಿಂದಿಕ್ಕಿದ್ದಾರೆ.

Shubman Gill Becomes No 1 in ICC ODI Rankings Surpasses Babar Azam

ಭಾರತದ ಪರ ನಾಲ್ಕನೇ ಆಟಗಾರ

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್‌ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ದಿಗ್ಗಜ ಸಚಿನ್‌ ತೆಂಡೂಲ್ಕರ್‌ 1996, 2008ರಲ್ಲಿ, ಮಹೇಂದ್ರ ಸಿಂಗ್ ಧೋನಿ 2006ರಲ್ಲಿ, ವಿರಾಟ್‌ ಕೊಹ್ಲಿ 2013ರಲ್ಲಿ ಈ ಸಾಧನೆಯನ್ನು ಮಾಡಿದ್ದರು. ಈಗ ಶುಭಮನ್‌ ಗಿಲ್‌ ಈ ಸಾಲಿಗೆ ಸೇರಿದ್ದಾರೆ.

ರೋಹಿತ್‌ಗೆ 3ನೇ ಸ್ಥಾನ

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮೂರನೇ ಶ್ರೇಯಾಂಕವನ್ನು ತಲುಪಿದ್ದಾರೆ. ಇವರು ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಲಯಕ್ಕೆ ಮರಳಿದ್ದಾರೆ. ಹೀಗಾಗಿ ಇವರ ಮೇಲೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಎಲ್ಲರ ಚಿತ್ತ ನೆಟ್ಟಿದೆ.

ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಹಮದಾಬಾದ್‌ನಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಲಯಕ್ಕೆ ಮರಳಿದ್ದಾರೆ. ಇವರ ಶ್ರೇಯಾಂಕದಲ್ಲೂ ಸ್ಥಿರತೆ ಕಂಡು ಬಂದಿದ್ದು ಸದ್ಯ ಇವರು ಆರನೇ ಸ್ಥಾನದಲ್ಲಿದ್ದಾರೆ. ವಿರಾಟ್‌ 727 ಅಂಕಗಳನ್ನು ಹೊಂದಿದ್ದಾರೆ.

Shubman Gill Becomes Number 1 Batsmen in ICC ODI Rankings Surpasses Babar Azam

ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್‌ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಇವರು ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿ 181 ರನ್‌ ಕಲೆ ಹಾಕಿದ್ದರು. ಇವರು 679 ಅಂಕಗಳೊಂದಿಗೆ 9ನೇ ಸ್ಥಾನ ತಲುಪಿದ್ದಾರೆ. ಕನ್ನಡಿಗ ಕೆಎಲ್‌ ರಾಹುಲ್ 16ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಟಾಪ್‌ 20ರಲ್ಲಿ ನಾಲ್ವರು ಬೌಲರ್ಸ್‌

ಏಕದಿನ ಶ್ರೇಯಾಂಕದ ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಸ್ಥಿರತೆ ಕಾಯ್ದುಕೊಂಡಿದ್ದಾರೆ. ಕುಲ್‌ದೀಪ್‌ ಯಾದವ್ ಇಂಗ್ಲೆಂಡ್‌ ವಿರುದ್ಧ ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿಕೆಟ್‌ ಬೇಟೆ ನಡೆಸಿದ್ದರು. ಇವರು ಸದ್ಯ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಸ್ಪಿನ್ ಬೌಲರ್ ಮಹೇಶ್‌ ತೀಕ್ಷಣ್‌ ನಂಬರ್‌ 1 ಸ್ಥಾನ ಪಡೆದುಕೊಂಡಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್‌ ಎರಡನೇ ಸ್ಥಾನ, ನಮೀಬಿಯಾದ ಬರ್ನಾರ್ಡ್ ಸ್ಕೋಲ್ಟ್ಜ್ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಭಾರತದ ಮೊಹಮ್ಮದ್‌ ಸಿರಾಜ್ (10), ರವೀಂದ್ರ ಜಡೇಜಾ (13), ಮೊಹಮ್ಮದ್ ಶಮಿ (15) ಟಾಪ್‌ 20ರಲ್ಲಿ ಸ್ಥಾನ ಪಡೆದಿದ್ದಾರೆ.

Story first published: Wednesday, February 19, 2025, 14:10 [IST]
Other articles published on Feb 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+