For Quick Alerts
ALLOW NOTIFICATIONS  
For Daily Alerts
 

Shubman Gill: ವಿರಾಟ್‌ ಕೊಹ್ಲಿ ದಾಖಲೆ ಅಳಿಸಿದ ಗಿಲ್‌: 26 ವರ್ಷದಲ್ಲಿ 12 ಶತಕದ ಸಾಧನೆ

ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್‌ ಗಿಲ್‌ ಚೆನ್ನೈ ಅಂಗಳದಲ್ಲಿ ಮನಮೋಹಕ ಇನಿಂಗ್ಸ್‌ ಕಟ್ಟಿದ್ದಾರೆ. ಈ ಮೂಲಕ ತಮ್ಮ ಆಟದ ಮೇಲೆ ಇದ್ದ ಕೆಲವು ಪ್ರಶ್ನೆಗಳಿಗೆ ಬ್ಯಾಟ್‌ನಿಂದ ಉತ್ತರ ನೀಡಿದ್ದಾರೆ. ಎಂಎ ಚಿದಂಬರಂ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಗಿಲ್‌ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಅಲ್ಲದೆ ಹಲವು ದಾಖಲೆಗಳಿಗೆ ಹೆಸರು ನಮೂದಿಸಿದ್ದಾರೆ.

ದುಲೀಪ್‌ ಟ್ರೋಫಿಯಲ್ಲಿ ರನ್‌ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದಿದ್ದ ಗಿಲ್‌, ಬಾಂಗ್ಲಾದೇಶದ ವಿರುದ್ಧ ಎಡನೇ ಇನಿಂಗ್ಸ್‌ನಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ಇನಿಂಗ್ಸ್‌ ಮೂಲಕ ಮೂರನೇ ಕ್ರಮಾಂಕಕ್ಕೆ ತಾವು ಸೂಕ್ತ ಆಟಗಾರ ಎಂಬುದನ್ನು ಸಾರಿ ಹೇಳಿದ್ದಾರೆ.

Shubman Gill Breaks Virat Kohli s Record Youngest to Score 12 Centuries Across Formats

ಗಿಲ್‌ ಐದನೇ ಶತಕ

ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಗಿಲ್‌ ಕ್ಲಾಸಿಕ್‌ ಆಟವನ್ನು ಆಡಿದರು. ಶನಿವಾರ ಡ್ರೆಸ್ಸಿಂಗ್ ರೂಮ್‌ನಲ್ಲಿ ಸೆಟ್‌ ಆಗಿ ಬಂದಿದ್ದ ಗಿಲ್‌ ಅಬ್ಬರಿಸಿದರು. ಈ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ ಐದನೇ ಶತಕ ಬಾರಿಸಿದರು. ಇವರು 128 ಎಸೆತಗಳನ್ನು ಎದುರಿಸಿ ಅಜೇಯ 109 ರನ್‌ ಸಿಡಿಸಿದರು. ಇವರ ಸೊಬಗಿನ ಇನಿಂಗ್ಸ್‌ನಲ್ಲಿ 13 ಬೌಂಡರಿ, 4 ಸಿಕ್ಸರ್‌ ಸೇರಿವೆ.

ಶುಭಮನ್ ಗಿಲ್ ಚೆನ್ನೈ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಐದನೇ ಶತಕವನ್ನು ಸಿಡಿಸಿದ್ದಾರೆ. ಇದೀಗ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 3 ಶತಕಗಳನ್ನು ಸಿಡಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಗಿಲ್ ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 2 ಶತಕ ಗಳಿಸಿದ್ದರು.

Shubman Gill Breaks Virat Kohli s Record Youngest to Score 12 Centuries Across Formats

ಶುಭಮನ್‌ ಗಿಲ್‌ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.26ನೇ ವಯಸ್ಸಿನಲ್ಲಿ ಗಿಲ್ ಅವರ 12ನೇ ಶತಕ ಸಿಡಿಸಿದ್ದಾರೆ. ಇದರಲ್ಲಿ 5 ಟೆಸ್ಟ್‌, ಏಕದಿನ ಕ್ರಿಕೆಟ್‌ನಲ್ಲಿ 6, ಟಿ20 ಕ್ರಿಕೆಟ್‌ನಲ್ಲಿ 1 ಶತಕದ ಸಾಧನೆ ಮಾಡಿದ್ದಾರೆ. 2020 ರಲ್ಲಿ, ಗಿಲ್ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು.

2022ರಿಂದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಶುಭಮನ್‌ ಗಿಲ್ ಅವರಿಗೆ ಮೊದಲ ಸ್ಥಾನ . ಇವರ 12 ಶತಕ ಬಾರಿಸಿದ್ದಾರೆ. ಇನ್ನು ಪಾಕ್‌ನ ಬಾಬರ್ ಅಜಮ್‌, ಇಂಗ್ಲೆಂಡ್‌ನ ಜೋ ರೂಟ್‌ 11 ಶತಕಗಳ ಮೂಲಕ ಎರಡು, ಮೂರನೇ ಸ್ಥಾನ, ವಿರಾಟ್‌ ಕೊಹ್ಲಿ 10 ಶತಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿರಾಟ್‌ ದಾಖಲೆ ಉಡೀಸ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಶುಭಮನ್‌ ಗಿಲ್‌ ಐದನೇ ಶತಕ ಬಾರಿಸಿದರು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮುಂಚೂಣಿಯಲ್ಲಿದ್ದಾರೆ. ಇವರು 9 ಶತಕ ಸಿಡಿಸಿದ್ದಾರೆ. ಇನ್ನು 26ನೇ ವಯಸ್ಸಿನ ಒಳಗಡೆ 12 ಶತಕ ಬಾರಿಸಿದ ವಿಶೇಷ ಬ್ಯಾಟರ್‌ಗಳ ಪಟ್ಟಿಗೆ ಎಂಟ್ರಿ ನೀಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌, ರವಿ ಶಾಸ್ತ್ರಿ, ದಿಲೀಪ್ ವೆಂಗಸ್ಕರ್‌, ಮೊಹಮ್ಮದ್ ಅಜರುದ್ಧಿನ್, ಮನ್ಸೂರ್ ಅಲಿ ಖಾನ್, ರಿಷಭ್ ಪಂತ್, ಸುನಿಲ್ ಗವಾಸ್ಕರ್‌, ಗಿಲ್‌ ಗಿಂತ ಮುಂದಿದ್ದಾರೆ. ಈ ಪಟ್ಟಿಯಲ್ಲಿರುವ ವಿರಾಟ್‌ ಕೊಹ್ಲಿ ಗಿಲ್‌ ನಂತರದ ಸ್ಥಾನದಲ್ಲಿದ್ದಾರೆ.

ಗಿಲ್‌ 25 ವರ್ಷ 13 ದಿನದಲ್ಲಿ 12 ಶತಕ ಬಾರಿಸಿದ್ದರೆ, ಇದೇ ಸಾಧನೆ ಮಾಡಲು ವಿರಾಟ್ 25 ವರ್ಷ 43 ದಿನಗಳನ್ನು ತೆಗೆದುಕೊಂಡಿದ್ದರು.

Story first published: Saturday, September 21, 2024, 15:31 [IST]
Other articles published on Sep 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+