IND vs ZIM: ಜಿಂಬಾಬ್ವೆ ವಿರುದ್ಧ ಕಣಕ್ಕೀಳಿಯಲಿರುವ ರೋಹಿತ್ ಶರ್ಮಾ ಸ್ಥಾನ ತುಂಬಬಲ್ಲ ಬ್ಯಾಟರ್; ಹೆಸರು ಬಹಿರಂಗಪಡಿಸಿದ ಗಿಲ್
ಜುಲೈ 5 ಶುಕ್ರವಾರ, ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂದಿನಿಂದ ಜಿಂಬಾಬ್ವೆ ಮತ್ತು ಭಾರತ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇದಕ್ಕಾಗಿ ಭಾರತ ತಂಡವು, ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ.
ಈ ಸರಣಿಯಲ್ಲಿ ಶುಭಮನ್ ಗಿಲ್ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನೊಂದೆಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಹೀಗಾಗಿ ಭವಿಷ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾ ಕಟ್ಟಲು ಬಿಸಿಸಿಐ ಯುವ ಆಟಗಾರರೇ ತುಂಬುರುವ ಭಾರತ ತಂಡವನ್ನು ಜಿಂಬಾಬ್ವೆ ಪ್ರವಾಸಕ್ಕೆ ಕಳುಹಿಸಿದೆ. ಈ ತಂಡದಲ್ಲಿ ಸ್ಥಾನ ಪಡೆದದಿರುವ ಹಲವು ಆಟಗಾರರು ಟೀಮ್ ಇಂಡಿಯಾ ಪರ ಚೊಚ್ಚಲ ಪಾದರ್ಪಣೆ ಪಂದ್ಯವಾಡಲು ಸಜ್ಜಾಗಿದ್ದಾರೆ.
ಜೊತೆಗೆ ಯಯವ ಆಟಗಾರರು ಬಿಸಿಸಿಐ ನೀಡಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಮೂವರು ದಿಗ್ಗಜ ಆಟಗಾರರ ಸ್ಥಾನವನ್ನು ತುಂಬಲು ರೆಡಿಯಾಗಿದ್ದಾರೆ. 2026ರ ಟಿ20 ವಿಶ್ವಕಪ್‌ಗೆ ಭಾರತ ತಂಡ ಈಗಿನಿಂದಲೇ ಸಿದ್ಧತೆಯನ್ನು ಆರಂಭಿಸಿದೆ. ಅದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಲು ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ.
ಜಿಂಜಾಬ್ವೆ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾದಾಗ ನಾಲ್ವರು ಆರಂಭಿಕರು ಸ್ಥಾನ ಪಡೆದಿರುವುದನ್ನು ನೋಡಿದ ಅಭಿಮಾನಿಗಳಲ್ಲಿ ಯಾರು ಇನ್ನಿಂಗ್ಸ್ ತೆರೆಯುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಇದೀಗ ಈ ಪ್ರಶ್ನೆಗೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಉತ್ತರ ನೀಡಿದ್ದಾರೆ.
ಶುಭಮನ್ ಗಿಲ್ ಹೇಳಿದ್ದೇನು?
ಸರಣಿ ಆರಂಭಕ್ಕೆ ಒಂದು ದಿನ ಮೊದಲು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಗಿಲ್ ಅವರು, ಅಭಿಷೇಕ್ ಶರ್ಮಾ ನನ್ನೊಂದಿಗೆ ಓಪನಿಂಗ್ ಮಾಡಲಿದ್ದು, ಋತುರಾಜ್ ಗಾಯಕ್ವಾಡ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಾಯಕ್ವಾಡ್, ಮೂರನೇ ಕ್ರಮಾಂಕಕ್ಕೆ ಸ್ಥಳಾಂತರಗೊಂಡರೂ ಆಶ್ಚರ್ಯಪಡಬೇಕಾಗಿಲ್ಲ ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಕೂಡ ಈ ವರ್ಷದ ಐಪಿಎಲ್‌ನಲ್ಲಿ ಮೂರನೇ ಸ್ಥಾನದಲ್ಲಿ ಆಡಿದ್ದರು ಎಂದು ಗಿಲ್ ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡಲಿದ್ದು, ಸರಣಿಯ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ತೆರೆಯುವ ಮೂಲಕ ರೋಹಿತ್ ಶರ್ಮಾ ಅವರಿಂದ ತೆರವಾದ ಆಗ್ರ ಕ್ರಮಾಂಕದ ಸ್ಥಾನವನ್ನು ತುಂಬುವ ಎಲ್ಲ ಸಾಮರ್ಥ್ಯವನ್ನು ಅಭಿಷೇಕ್ ಶರ್ಮಾ ಹೊಂದಿದ್ದಾರೆ.
ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ಆರಂಭಿಕನಾಗಿ ಆಡಿದ್ದ ಅಭಿಷೇಕ್ ಶರ್ಮಾ 204.22 ಸ್ಟ್ರೈಕ್‌ರೇಟ್‌ನಲ್ಲಿ 484 ರನ್ ಗಳಿಸಿದ್ದರು. ಇದರ ಆಧಾರದ ಮೇಲೆ ಅವರನ್ನು ಮೊದಲ ಬಾರಿಗೆ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications