ಏಕದಿನ ವಿಶ್ವಕಪ್ ಗೆಲ್ಲವುದೇ ತಂಡದ ದೊಡ್ಡ ಗುರಿ: ಶುಭ್‌ಮನ್ ಗಿಲ್
ಟೀಮ್ ಇಂಡಿಯಾದ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್ ಗೆಲ್ಲುವುದೇ ದೊಡ್ಡ ಗುರಿ ಎಂದು ತಿಳಿಸಿದ್ದಾರೆ. ಶುಭ್‌ಮನ್ ಗಿಲ್ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಪಡೆ ನಿರಾಸೆ ಅನುಭವಿಸಿತ್ತು.
2023ರ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಆಘಾತ ಅನುಭವಿಸಿತು. ಕಳೆದ ಬಾರಿಯ ಸೋಲಿನಿಂದ ತಂಡ ಪಾಠ ಕಲಿತಿದೆ ಎಂದು ಶುಭ್‌ಮನ್ ಗಿಲ್ ನಮನ್ ಅವರ್ಡ್ ಸಮಾರಂಭದಲ್ಲಿ ತಿಳಿಸಿದ್ದಾರೆ. ಇದೇ ವೇಳೇ ಮುಂದಿನ ವಿಶ್ವಕಪ್ ಬಗ್ಗೆ ಯೋಚಿಸುತ್ತಾ ಇದ್ದೀರಾ ಎಂದು ಕೇಳಿದ್ದಕ್ಕೆ, ಆ ಕಪ್ ಗೆಲ್ಲುವುದೇ ದೊಡ್ಡ ಗುರಿ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಏಕದಿನ ವಿಶ್ವಕಪ್‌ನಲ್ಲಿ ತಂಡ ಟ್ರೋಫಿ ಗೆಲ್ಲುವುದಕ್ಕಿಂತ ಒಂದು ಹೆಜ್ಜೆ ಹಿಂದೆ ನಿಂತಿತ್ತು. ನಮ್ಮ ತಂಡಕ್ಕೆ ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದೆ ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ. ನಾವು ಕಳೆದ ಬಾರಿ ತೀರ ಹತ್ತಿರಕ್ಕೆ ಬಂದು ನಿರಾಸೆ ಅನುಭವಿಸಿದೆವು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಈ ಗುರಿಯನ್ನು ಮುಟ್ಟುವುದೇ ನಮ್ಮ ಗುರಿ ಎಂದಿದ್ದಾರೆ.
ವಿಶ್ವಕಪ್ ಗೆಲ್ಲುವುದೇ ಗುರಿ
ಇದೇ ಸಮಾರಂಭದಲ್ಲಿ ಮಾತನಾಡಿದ ಗಿಲ್, ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ. ತಂಡ ಯಾವುದೇ ಫಾರ್ಮೆಟ್‌ನಲ್ಲಿ ವಿಶ್ವಕಪ್ ಗೆದ್ದರೂ ಸಹ ಅದು ಸಂತಸದ ವಿಷಯ ಎಂದಿದ್ದಾರೆ. ಮುಂದಿನ ಬಾರಿಯ ಏಕದಿನ ವಿಶ್ವಕಪ್‌ನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾಗಳು ಆಯೋಜಿಸಲಿವೆ. ಈ ಟೂರ್ನಿ ಅಕ್ಟೋಬರ್‌ನಿಂದ ನವೆಂಬರ್ ವರೆಗೂ ನಡೆಯುವ ಸಾಧ್ಯತೆ ಇದೆ.

ಭಾರತ ತಂಡ ಇತ್ತೀಚಿಗೆ ನಡೆದ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿದೆ. ಇಷ್ಟೇ ಅಲ್ಲದೆ ಮುಂದಿನ ದಿನಗಳಲ್ಲೂ ಇಂತಹದ್ದೇ ಪ್ರದರ್ಶನ ನೀಡುವ ಇರಾದೆ ತಂಡದ್ದಾಗಿದೆ. 2024ರಲ್ಲೂ ಭಾರತ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. 2026ರಲ್ಲೂ ಟೀಮ್ ಇಂಡಿಯಾ ಈ ಸಾಧನೆ ಮಾಡಿದೆ. ಈ ಮೂಲಕ ಚುಟುಕು ವಿಶ್ವಕಪ್‌ನ್ನು ಸತತ ಎರಡನೇ ಬಾರಿಗೆ ಹಾಗೂ ಒಟ್ಟಾರೆಯಾಗಿ ಮೂರನೇ ಬಾರಿಗೆ ಟ್ರೋಫಿ ಎತ್ತಿದ ಹಿರಿಮೆ ಭಾರತ ತಂಡದ್ದಾಗಿದೆ.
ಮುಂದಿನ ಬಾರಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಭಾರತ ತಂಡಕ್ಕೆ ಇದೆ. ಶುಭ್‌ಮನ್ ಗಿಲ್ ಪಡೆ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಫಲರಾದರೆ, ಐಸಿಸಿ ಪ್ರಾಯೋಜಿತ ಸೀಮಿತ ಓವರ್‌ಗಳ ಎಲ್ಲ ಪ್ರಶಸ್ತಿಗಳನ್ನು ಒಂದೇ ಸೈಕಲ್‌ನಲ್ಲಿ ಪೂರ್ಣಗೊಳಿಸಿದ ಹಿರಿಮೆ ತನ್ನದಾಗಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications