ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ನವದೆಹಲಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ತಮ್ಮ ಅಮೋಘ ಫಾರ್ಮ್ ಮುಂದುವರೆಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನವನ್ನು ಗಿಲ್ ನೀಡಿದ್ದೇ ಆದಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಈ ದಾಖಲೆ ಬರೆಯಲು ಬೇಕಾಗಿರುವ ರನ್ ಏಷ್ಟು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶುಭಮನ್ ಗಿಲ್ ಹಲವು ದಾಖಲೆಗಳನ್ನು ಬರೆದಿದ್ದರು. ಈಗ ಶುಭಮನ್ ಗಿಲ್ ನಾಯಕರಾಗಿ ತವರಿನಲ್ಲಿ ಮೊದಲ ಸರಣಿಯನ್ನು ಎದುರು ನೋಡ್ತಾ ಇದ್ದಾರೆ. ಮೊದಲ ಪಂದ್ಯದಲ್ಲಿ ಗಿಲ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಈಗ ಗಿಲ್ ವಿಂಡೀಸ್ ವಿರುದ್ಧ ಎರಡನೇ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಿದಲ್ಲಿ ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿಯುವ ಕನಸು ಹೊಂದಿದ್ದಾರೆ.

ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವ ಸಿಕ್ಕ ಆರಂಭದಲ್ಲಿ ಅಬ್ಬರ ನಡೆಸಿದ್ದರು. ಇವರು ಆಡಿದ ಮೊದಲ 11 ಟೆಸ್ಟ್ ಇನಿಂಗ್ಸ್‌ಗಳಲ್ಲಿ 1000 ರನ್ ಪೂರ್ಣಗೊಳಿಸಿದ್ದಾರೆ. ಈ ದಾಖಲೆ ಸದ್ಯಕ್ಕಂತೂ ಅಜೇಯವಾಗಿದೆ. ಗಿಲ್ ಈ ದಾಖಲೆ ಮುರಿಯುವ ಸನಿಹದಲ್ಲಿ ಇದ್ದಾರೆ. ಇದಕ್ಕಾಗಿ ಗಿಲ್ ವಿಂಡೀಸ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 196 ರನ್ ಬಾರಿಸುವ ಅವಶ್ಯಕತೆ ಇದೆ. ಈ ಸಾಧನೆಯನ್ನು ಗಿಲ್ ಮಾಡಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನವ ಇತಿಹಾಸ ನಿರ್ಮಿಸಲಿದ್ದಾರೆ.
ಹಲವು ನಾಯಕರು ಈ ದಾಖಲೆಯ ಸನಿಹಕ್ಕೆ ಬಂದಿದ್ದಾರೆ. ಆದರೆ ಯಾರು ಈ ದಾಖಲೆಯನ್ನು ಯಾರು ಮುರಿದಿಲ್ಲ. ಇದೇ ದಾಖಲೆಯ ಹತ್ತಿರಕ್ಕೆ ಶ್ರೀಲಂಕಾ ಕಮೆಂದು ಮೆಂಡಿಸ್ ಸಹ ಬಂದಿದ್ದರು. ಆದರೆ ಮುರಿಯಲು ಸಾಧ್ಯವಾಗಿರಲಿಲ್ಲ. ಈಗ ಈ ದಾಖಲೆಯನ್ನು ಮುರಿಯುವ ಸನಿಹದಲ್ಲಿ ನಿಂತಿದ್ದಾರೆ. ಶುಭಮನ್ ಗಿಲ್ ನಾಯಕರಾಗಿ ಇಂಗ್ಲೆಂಡ್ ಪ್ರವಾಸದಲ್ಲಿ 754 ರನ್ ಗಳಿಸಿದ್ದಾರೆ.

ಇನ್ನು ಶುಭಮನ್ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಮೊದಲ ಟೆಸ್ಟ್‌ಗೆ ಮೈದಾನಕ್ಕಿಳಿದಾಗ, ಅವರು ಇನ್ನೂ 50 ರನ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಇವರು 804 ರನ್ ಕಲೆ ಹಾಕಿದ್ದಾರೆ. ಇವರು ವೇಗವಾಗಿ 1000 ರನ್ ಪೂರ್ಣಗೊಳಿಸಲು ಇನ್ನು 196 ರನ್ ಸಿಡಿಸಬೇಕಿದೆ. ನವದೆಹಲಿಯಲ್ಲಿನ ಪಿಚ್ ಬ್ಯಾಟರ್‌ಗಳಿಗೆ ಅನುಕೂಲ ಮಾಡುತ್ತದೆ ಎಂಬ ಮಾತುಗಳು ಇವೆ. ಹೀಗಾಗಿ ಶುಭಮನ್ ಗಿಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇನ್ನು ಶುಭಮನ್ ಗಿಲ್ ಈ ಅಂಗಳದಲ್ಲಿ ಶುಭಮನ್ ಗಿಲ್ ಇದೇ ಮೊದಲ ಬಾರಿಗೆ ಅಂಗಳದಲ್ಲಿ ಇಳಿಯುತ್ತಿದ್ದಾರೆ. ಅದ್ರಲ್ಲೂ ತಂಡದ ನಾಯಕರಾಗಿ ಕಣಕ್ಕೆ ಇಳಿಯುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಿವೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದ ಸರಣಿಯನ್ನು ವಶಕ್ಕೆ ಪಡೆಯುವ ಆಸೆ ಗಿಲ್ ಪಡೆಯದ್ದಾಗಿದೆ.