Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shubman Gill: 19 ವರ್ಷದ ರಿಕ್ಕಿ ಪಾಂಟಿಂಗ್ ದಾಖಲೆಯ ಮೇಲೆ ಗಿಲ್ ಕಣ್ಣು

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ನಾಯಕ ಶುಭಮನ್‌ ಗಿಲ್ ಮೇಲೆ ನೆಟ್ಟಿರಲಿವೆ. ಇವರು ನಾಯಕತ್ವವನ್ನು ವಹಿಸಿಕೊಂಡ ಬಳಿಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಂತೂ ಗಿಲ್‌, ಆರ್ಭಟಿಸಿದ್ದರು. ತವರಿನಲ್ಲೂ ವಿಂಡೀಸ್‌ ವಿರುದ್ದವೂ ಇದೆ ರೀತಿ ಪ್ರದರ್ಶನ ನೀಡಿದ್ದರು. ಈಗ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಕಾಡಲು ಶುಭಮನ್ ಗಿಲ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸರಣಿಯಲ್ಲಿ ಗಿಲ್‌ ನಾಯಕನಾಗಿ ದೊಡ್ಡ ದಾಖಲೆ ಬರೆಯುವ ಕನಸಿನಲ್ಲಿದ್ದಾರೆ.

ನಾಯಕನಾಗಿ ಶುಭಮನ್‌ ಗಿಲ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಸ್ಥಿರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇದೇ ವೇಳೆ ಗಿಲ್‌ ನಾಯಕನಾಗಿ, ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್‌ ಹಾಗೂ ಕ್ಯಾಪ್ಟನ್‌ ರಿಕ್ಕಿ ಪಾಂಟಿಂಗ್ ಸಾಧನೆಯನ್ನು ಮೀರಿ ನಿಲ್ಲಬಹುದು. ಈ ಮೂಲಕ ಗಿಲ್‌ 19 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕುವ ಕನಸಿಲ್ಲಿದ್ದಾರೆ.

Shubman Gill Eyes Ponting s Historic Test Captaincy Century Record vs South Africa

ರಿಕ್ಕಿ ಪಾಂಟಿಂಗ್‌ 2006ರಲ್ಲಿ ನಾಯಕನಾಗಿ ಅಮೋಘ ಫಾರ್ಮ್‌ ಹೊಂದಿದ್ದರು. ಈ ವೇಳೆ ಪಾಂಟಿಂಗ್ ಒಟ್ಟು 10 ಪಂದ್ಯಗಳನ್ನು ಆಡಿದ್ದು ಇದರಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ. ಈ ದಾಖಲೆಯನ್ನು ಮೀರಿ ನಿಲ್ಲುವ ಅವಕಾಶ ಶುಭಮನ್‌ ಗಿಲ್ ಅವರಿಗೆ ಇದೆ. ಗಿಲ್‌ ನಾಯಕನಾಗಿ 2025ರಲ್ಲಿಈ ವರೆಗೆ 5 ಶತಕಗಳನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ ಗಿಲ್‌ ಶತಕ ಬಾರಿಸಿದರೆ ದೊಡ್ಡ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಈ ಮೂಲಕ ನಾಯಕನಾಗಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ವಿರಾಟ್‌ ಕೊಹ್ಲಿ ನಾಯಕನಾಗಿ 2017 ಹಾಗೂ 2018ರಲ್ಲಿ ತಲಾ ಐದು ಶತಕಗಳನ್ನು ಬಾರಿಸಿದ್ದಾರೆ.

ಹೇಗಿದೆ ದಕ್ಷಿಣ ಆಫ್ರಿಕಾ ವಿರುದ್ಧ ಸಾಧನೆ?

ಶುಭಮನ್‌ ಗಿಲ್ ಪ್ರದರ್ಶನ ದಕ್ಷಿಣ ಆಫ್ರಿಕಾ ವಿರುದ್ಧ ಹೇಳಿಕೊಳ್ಳುವಂತಿಲ್ಲ. ಗಿಲ್ ಈ ವರೆಗೆ ಆಫ್ರಿಕಾ ತಂಡದ ವಿರುದ್ಧ ಒಟ್ಟು 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 18.50ರ ಸರಾಸರಿಯಲ್ಲಿ ಕೇವಲ 74 ರನ್‌ ಕಲೆ ಹಾಕಿದ್ದಾರೆ. ಈ ಎರಡೂ ಟೆಸ್ಟ್‌ಗಳನ್ನು ಗಿಲ್‌ 2023ರಲ್ಲಿ ಆಡಿದ್ದರು. ಇದಾದ ಬಳಿಕ ಗಿಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಗಿಲ್‌ ಪ್ರಸಕ್ತ ವರ್ಷವಂತೂ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದ್ದಾರೆ. ಅಲ್ಲದೆ 78.83ರ ಸರಾಸರಿಯಲ್ಲಿ 946 ರನ್‌ ಕಲೆ ಹಾಕಿದ್ದಾರೆ. ಇದು ಭಾರತಕ್ಕೆ ಪ್ರಸಕ್ತ ವರ್ಷದ ಕೊನೆಯ ಟೆಸ್ಟ್ ಸರಣಿ ಆಗಿರಲಿದೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಗಿಲ್ ಹೊಂದಿದ್ದಾರೆ.

Shubman Gill Eyes Ponting s Historic Test Captaincy Century Record vs South Africa

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್‌ ಕೋಲ್ಕತ್ತಾದಲ್ಲಿ ನ.14 ರಿಂದ ನಡೆಯಲಿದ್ದು, ಎರಡನೇ ಟೆಸ್ಟ್‌ ನ.22 ರಿಂಧ ಗುವಾಹಟಿಯಲ್ಲಿ ನಡೆಯಲಿದೆ.

Story first published: Wednesday, November 12, 2025, 19:05 [IST]
Other articles published on Nov 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+