For Quick Alerts
ALLOW NOTIFICATIONS  
For Daily Alerts
 

IND vs ENG ODI: ಹಾಶೀಮ್ ಆಮ್ಲಾ ದಾಖಲೆಯ ಮೇಲೆ ಶುಭಮನ್‌ ಗಿಲ್ ಕಣ್ಣು

ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬಾರ್ಡರ್ ಗವಾಸ್ಕರ್‍‌ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದ ಭಾರತ, 1-3 ರಿಂದ ಸರಣಿಯನ್ನು ಕೈ ಚೆಲ್ಲಿದೆ. ಇನ್ನು ಟೀಮ್ ಇಂಡಿಯಾ ಈಗ ಚಾಂಪಿಯನ್ಸ್‌ ಟ್ರೋಫಿಯ ಮೇಲೆ ಚಿತ್ತವನ್ನು ನೆಟ್ಟಿದೆ. ಈ ಮೆಗಾ ಐಸಿಸಿ ಟೂರ್ನಿಗೂ ಮೊದಲು ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿ ಚಾಂಪಿಯನ್ಸ್‌ ಟ್ರೋಫಿಗೆ ಪೂರ್ವ ಭಾವಿಯಾಗಿರಲಿದೆ.

ಈ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾದ ಯುವ ಆಟಗಾರರ ಶುಭಮನ್‌ ಗಿಲ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಇವರು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಇವರು ಸಹ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಈಗ ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶನ ನೀಡುವ ಪ್ಲ್ಯಾನ್‌ನ್ನು ಶುಭಮನ್‌ ಗಿಲ್‌ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ವೇಳೆ ಗಿಲ್‌ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

Shubman Gill Eyes Record as He Aims for 2500 Runs in ODI Series Against England

ಯಾವ ದಾಖಲೆಯ ಮೇಲೆ ಗಿಲ್ ಕಣ್ಣು?

ಶುಭಮನ್‌ ಗಿಲ್‌ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡುವ ಆಟಗಾರ. ಅದರಲ್ಲೂ ಏಕದಿನ ಪಂದ್ಯಗಳಲ್ಲೂ ಇವರು ರನ್‌ ಕಲೆ ಹಾಕಬಲ್ಲ ಪ್ಲೇಯರ್. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಶುಭಮನ್‌ ಗಿಲ್‌ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಗಿಲ್ ಈ ವರೆಗೆ ಏಕದಿನ ಕ್ರಿಕೆಟ್‌ನಲ್ಲಿ 47 ಪಂದ್ಯಗಳನ್ನು ಆಡಿದ್ದು, 58.2ರ ಸರಾಸರಿಯಲಲ್ಇ 2328 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 6 ಶತಕ, 13 ಅರ್ಧಶತಕಗಳು ಸೇರಿವೆ. ಇದಲ್ಲದೆ ಗಿಲ್ ಏಕದಿನ ಕ್ರಿಕೆಟ್‌ನಲ್ಲೂ ದ್ವಿಶಕ ಬಾರಿಸಿ ಸಂಭ್ರಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಗಿಲ್ ಸ್ಥಿರ ಪ್ರದರ್ಶನ ನೀಡಿ 172 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಬರೆಯಬಹುದು.

ಗಿಲ್ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ 2500 ರನ್‌ಗಳ ಗಡಿಯನ್ನು ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಬಹುದು. ಈ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಹಾಶೀಮ್ ಆಮ್ಲಾ ಅವರ ಹೆಸರಿನಲ್ಲಿತ್ತು. ಹಾಶೀಮ್ 53 ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್‌ ಒಂದು ವೇಳೆ ಇನ್ನು 5 ಪಂದ್ಯಗಳಲ್ಲಿ 172 ರನ್‌ ಕಲೆ ಹಾಕುವಲ್ಲಿ ಸಫಲರಾದರೆ, ಈ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.

Shubman Gill Eyes Record as He Aims for 2500 Runs in ODI Series Against England

ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಗಿಲ್‌ ಅವರಿಗೆ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇದು ಸದಾವಕಾಶ ಆಗಿರಲಿದೆ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಕನಸು ಕಾಣುತ್ತಿದೆ.

ವನ್ನು ಗಳಿಸಲು ಗಿಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಾರೆ.

Story first published: Saturday, January 11, 2025, 19:47 [IST]
Other articles published on Jan 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+