Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ.ಆಫ್ರಿಕಾ 'ಎ' ವಿರುದ್ಧ ಭಾರತ 'ಎ'ಗೆ ಶುಬ್‌ಮಾನ್‌, ಸಕ್ಸೇನಾ ರನ್ ಬಲ

Shubman Gill, Jalaj Saxena help India ‘A’ in tightening grip on South Africa ‘A’

ತಿರುವನಂತಪುರಂ, ಸೆಪ್ಟೆಂಬರ್ 11: ನಾಯಕ ಶುಬ್‌ಮಾನ್‌ ಗಿಲ್ ಮತ್ತು ಜಲಜ್ ಸಕ್ಸೇನಾ ಅವರ ಅರ್ಧಶತಕ ರನ್‌ ನೆರವಿನಿಂದ, ಕೇರಳದ ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ 'ಎ' ಮತ್ತು ದಕ್ಷಿಣ ಆಫ್ರಿಕಾ 'ಎ' ನಡುವಣ ಮೊದಲ ಅನಧಿಕೃತ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 139 ರನ್‌ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 'ಎ', ವಿಯಾನ್ ಮುಲ್ಡರ್ 21, ಡೇನ್ ಪೀಡ್ಟ್ 33, ಮಾರ್ಕೊ ಜಾನ್ಸೆನ್ 45 ರನ್‌ ಸೇರ್ಪಡೆಯೊಂದಿಗೆ 51.5 ಓವರ್‌ಗೆ 164 ರನ್‌ ಮಾಡಿತು. ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್ 3, ಶಬಾಝ್ ನದೀಮ್ 2, ಕೃಷ್ಣಪ್ಪ ಗೌತಮ್‌ಗೆ 3 ವಿಕೆಟ್‌ ಲಭಿಸಿತು.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರುತುರಾಜ್ ಗಾಯಕ್ವಾಡ್ 30, ಶುಬ್‌ಮಾನ್ ಗಿಲ್ 90, ರಿಕಿ ಭುಯಿ 26, ಶ್ರೀಕರ್ ಭರತ್ 33, ಸಕ್ಸೇನಾ 61, ಶಾರ್ದೂಲ್ 34 ರನ್ ನೆರವಿನೊಂದಿಗೆ 87.5 ಓವರ್‌ಗೆ 303 ರನ್ ಗಳಿಸಿತು.

ದ್ವಿತೀಯ ಇನ್ನಿಂಗ್ಸ್‌ ಆಡುತ್ತಿರುವ ದಕ್ಷಿಣ ಆಫ್ರಿಕಾ 'ಎ', ಅಬೀರ್ ಹಮ್ಜಾ 44, ಹೆನ್ರಿಕ್ ಕ್ಲಾಸೆನ್ 35 ರನ್‌ ನೊಂದಿಗೆ 35 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸಿದೆ. ಭಾರತದ ನದೀಮ್ 2, ಠಾಕೂರ್, ಮೊಹಮ್ಮದ್ ಸಿರಾಜ್, ಗೌತಮ್ ತಲಾ 1 ವಿಕೆಟ್ ಪಡೆದಿದ್ದರು.

Story first published: Tuesday, September 10, 2019, 22:41 [IST]
Other articles published on Sep 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+