For Quick Alerts
ALLOW NOTIFICATIONS  
For Daily Alerts
 

Year Ender 2025: 2025ರಲ್ಲಿ ಭಾರತದ ಪರ ಅತಿ ಹೆಚ್ಚು ರನ್

ಇನ್ನೇನು ಕೆಲವೇ ದಿನಗಳಲ್ಲಿ 2025 ಮುಕ್ತಾಯವಾಗಲಿದೆ. ಮುಂದಿನ ವರ್ಷಕ್ಕೆ ಕಾಲಿಡಲು ಎಲ್ಲರೂ ತಯಾರಿ ನಡೆಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲೂ ಈ ವರ್ಷ ಹರ್ಷವನ್ನೇ ತಂದಿದೆ. ಪ್ರಸಕ್ತ ವರ್ಷದಲ್ಲಿ ಐಸಿಸಿ ಟೂರ್ನಿ ಸೇರಿದಂತೆ, ದ್ವಿಪಕ್ಷೀಯ ಸರಣಿಗಳು ನಡೆದಿವೆ. ಈ ವೇಳೆ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಹಾಗಿದ್ದರೆ ಭಾರತದ ಪರ 2025ರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್‌ 5 ಆಟಗಾರರು ಯಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಈ ವರ್ಷದಲ್ಲಿ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ವೇಳೆ ಜವಾಬ್ದಾರಿ ಪಡೆದು, ತಮ್ಮ ಕ್ಷಮತೆಗೆ ತಕ್ಕ ಆಟವಾಡಿದ ಆಟಗಾರರ ಪಟ್ಟಿಯಲ್ಲಿ ಶುಭಮನ್‌ ಗಿಲ್‌ಗೆ ಮೊದಲ ಸ್ಥಾನ. ರೋಹಿತ್‌ ಶರ್ಮಾ ಅವರಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ಶುಭಮನ್‌ ಗಿಲ್‌ ಆಯ್ಕೆ ಆದರು. ಅಲ್ಲಿಂದ ಗಿಲ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಂತೂ ರನ್‌ ಮಹಲು ಕಟ್ಟಿರುವ ಗಿಲ್‌ ಅಬ್ಬರಿಸಿದ್ದಾರೆ. ಪ್ರಸ್ತುತ ವರ್ಷ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಗಿಲ್‌ಗೆ ಮೊದಲ ಸ್ಥಾನ.

Shubman Gill Leads India s Run-Scorers in 2025 KL Rahul Jaiswal in Top 5 List

ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್ ಗಿಲ್, ಈ ವರ್ಷ ಮೂರು ಸ್ವರೂಪದಲ್ಲಿ ಮಿಂಚಿದ್ದಾರೆ. ಒಟ್ಟಾರೆ 33 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶುಭಮನ್‌ ರನ್‌ಗಳ ಸರದಾರನಂತೆ ಕಂಡಿದ್ದಾರೆ. ಈ ವೇಳೆ ಗಿಲ್‌ 42ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದು, 5 ಶತಕ, 9 ಅರ್ಧಶತಕದ ಸಹಾಯದಿಂದ 1736 ರನ್‌ ಬಾರಿಸಿದ್ದಾರೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಗಿಲ್‌ಗೆ ಎರಡನೇ ಸ್ಥಾನ. ಇವರಿಗಿಂತಲೂ ಮೊದಲು ಈ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್ ತಂಡದ ಶಾಯ್ ಹೋಪ್‌ ಇದ್ದು, ಇವರು ಆಡಿದ 41 ಪಂದ್ಯಗಳಲ್ಲಿ 1749 ರನ್‌ ಕಲೆ ಹಾಕಿದ್ದಾರೆ.

ರಾಹುಲ್‌ಗೂ ಸ್ಥಾನ

ಟೀಮ್ ಇಂಡಿಯಾದ ಪರ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್‌ಗೂ ಸ್ಥಾನವಿದೆ. ಇವರು ಆಡಿದ 24 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 1180 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 3 ಶತಕ ಹಾಗೂ 5 ಅರ್ಧಶತಕಗಳು ಸಹ ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಸಾಧಕರು

ಶುಭಮನ್‌ ಗಿಲ್‌, 33 ಪಂದ್ಯ, 1736 ರನ್‌
ಕೆಎಲ್ ರಾಹುಲ್, 24 ಪಂದ್ಯ, 1180 ರನ್‌
ಯಶಸ್ವಿ ಜೈಸ್ವಾಲ್‌, 14 ಪಂದ್ಯ, 916 ರನ್‌
ರವೀಂದ್ರ ಜಡೇಜಾ, 20 ಪಂದ್ಯ, 870 ರನ್‌
ಅಭಿಷೇಕ್‌ ಶರ್ಮಾ, 18 ಪಂದ್ಯ, 773 ರನ್‌

ಸೂಚನೆ: ಈ ಅಂಕಿ ಅಂಶಗಳು ಬುಧವಾರ (ಡಿಸೆಂಬರ್ 11) ತನಕ ನಡೆದ ಪಂದ್ಯಗಳದ್ದಾಗಿದೆ.

Story first published: Thursday, December 11, 2025, 11:15 [IST]
Other articles published on Dec 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+