For Quick Alerts
ALLOW NOTIFICATIONS  
For Daily Alerts
 

Adelaide Test: ಟೀಮ್ ಇಂಡಿಯಾಗೆ "ಶುಭ" ಸುದ್ದಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಟೆಸ್ಟ್‌ ಪಂದ್ಯ ಡಿಸೆಂಬರ್‌ 6ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ, ಪಿಎಂ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಎರಡನೇ ಟೆಸ್ಟ್‌ ಡೇ ಆಂಡ್ ನೈಟ್ ಇರಲಿದ್ದು, ರೋಚಕತೆ ಹೆಚ್ಚಿಸಿದೆ. ಈ ಟೆಸ್ಟ್‌ಗೆ ಟೀಮ್ ಇಂಡಿಯಾ ಗ್ರೌಂಡ್‌ಗೆ ಇಳಿಯುವ ಮುನ್ನವೇ ಶುಭ ಸುದ್ದಿಯೊಂದು ಸಿಕ್ಕಿದೆ.

ಶನಿವಾರದಿಂದ ಪಿಎಂ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಸ್ಟಾರ್ ಆಟಗಾರ ಅಂಗಳಕ್ಕೆ ಇಳಿದಿರುವ, ಸುದ್ದಿ ನಿಜಕ್ಕೂ ಭಾರತದ ಮ್ಯಾನೇಜ್ಮೆಂಟ್ ಹಾಗೂ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಅಭ್ಯಾಸ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರೊಬ್ಬರು ಎಂಟ್ರಿ ಪಡೆದಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೈದಾನಕ್ಕೆ ಇಳಿಯದ ಈ ಸ್ಟಾರ್‌, ಈಗ ಗಾಯದಿಂದ ಚೇತರಿಸಿಕೊಂಡಿದ್ದು ಫಿಟ್ ಆಗಿದ್ದಾರೆ.

Shubman Gill Likely to Return for Pink Ball Practice Match Against PM XI

ಸ್ಟಾರ್ ಪ್ಲೇಯರ್ ಅಭ್ಯಾಸ

ಪಿಎಂ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶುಭಮನ್‌ ಗಿಲ್ ಮೈದಾನ ಪ್ರವೇಶಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಇವರು ತಂಡದೊಂದಿಗೆ ಸೇರ್ಪಡೆಗೊಂಡಿದ್ದಾರೆ. ಮೊದಲು ಟೆಸ್ಟ್‌ಗೂ ಮುನ್ನ ನಡೆದ ಅಭ್ಯಾಸದ ವೇಳೆ ಇವರಿಗೆ ಗಾಯವಾಗಿತ್ತು. ಹೀಗಾಗಿ ಇವರು ಮೊದಲ ಇನಿಂಗ್ಸ್‌ನಲ್ಲಿ ಕಣಕ್ಕೆ ಇಳಿದಿರಲಿಲ್ಲ. ಇವರ ಅನುಪಸ್ಥಿತಿಯಲ್ಲಿ ದೇವದತ್ ಪಡಿಕ್ಕಲ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ನಿರಾಸೆ ಅನುಭವಿಸಿದ್ದರು. ಇವರು ಎರಡೂ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇದೀಗ ಶುಭಮನ್ ಗಿಲ್ ತಮ್ಮ ಸ್ಥಾನಕ್ಕೆ ಮರಳುವ ಸಾಧ್ಯತೆ ದಟ್ಟವಾಗಿವೆ.

ಪಿಎಂ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯ

ಭಾರತ ತಂಡ ಪ್ರಸ್ತುತ ಕ್ಯಾನ್‌ಬೆರಾದಲ್ಲಿ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಭಾರತ ಹಾಗೂ ಪಿಎಂ ಇಲೆವೆನ್ ಮಧ್ಯ ನವೆಂಬರ್ 30 ರಿಂದ ಅಭ್ಯಾಸ ಪಂದ್ಯ ಆಗಿರಲಿದೆ. ಈ ಪಂದ್ಯಕ್ಕೂ ಮುನ್ನ ಶುಭಮನ್ ಗಿಲ್ ನೆಟ್ಸ್‌ಗೆ ಬರುವ ಮೂಲಕ ಸಿದ್ಧತೆ ಆರಂಭಿಸಿದ್ದಾರೆ ಎಂದು ವರದಿಗಳಾಗಿವೆ. ಅಭ್ಯಾಸದ ವೇಳೆ ಇವರು ಕೆಲವು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅಲ್ಲದೆ ಪಿಂಕ್ ಬೌಲ್‌ನಿಂದ ಅಭ್ಯಾಸ ಮಾಡಿದರು. ಇನ್ನು ಎರಡನೇ ಟೆಸ್ಟ್‌ಗೆ ಅವಕಾಶ ಇದ್ದು, ಈ ವೇಳೆ ಶುಭಮನ್‌ ಗಿಲ್‌ ಪೂರ್ಣ ಫಿಟ್ ಆದಲ್ಲಿ, ತಂಡದ ಮುಖದಲ್ಲಿ ಮಂದಹಾಸ ಮೂಡಲಿದೆ.

Shubman Gill Likely to Return for Pink Ball Practice Match Against PM XI

ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಶುಭಮನ್‌ ಗಿಲ್ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಇವರು 2 ಟೆಸ್ಟ್ ಪಂದ್ಯಗಳ 4 ಇನಿಂಗ್ಸ್‌ನಲ್ಲಿ ಕೇವಲ 90 ರನ್‌ ಸಿಡಿಸಿ ನಿರಾಸೆ ಅನುಭವಿಸಿದ್ದರು. ಈ ಸರಣಿಯ ಮೊದಲ ಪಂದ್ಯದಲ್ಲೂ ಇವರು ತಂಡದಿಂದ ಹೊರಗುಳಿದಿದ್ದರು. ಆಸೀಸ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಗಿಲ್‌ ಲಯಕ್ಕೆ ಮರಳುವ ಅನಿವಾರ್ಯತೆ ಇದೆ.

Story first published: Friday, November 29, 2024, 14:01 [IST]
Other articles published on Nov 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+