ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೂ ಮುನ್ನ ಕುತ್ತಿಗೆಯ ಗಾಯಕ್ಕೆ ತುತ್ತಾಗಿದ್ದ ಶುಭಮನ್ ಗಿಲ್ ಚೇತರಿಸಿಕೊಂಡಂತೆ ಕಾಣುತ್ತಿದೆ. ಗುರುವಾರದಿಂದ ಪುಣೇಯಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇವರು ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದರೆ ಭಾರತ ಯಾರನ್ನು ಕೈ ಬಿಡುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ.
ಕುತ್ತಿಗೆ ಗಾಯಕ್ಕೆ ತುತ್ತಾಗಿದ್ದ ಗಿಲ್ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ವೈದ್ಯರು ಇವರಿಗೆ ಅಂಗಳಕ್ಕೆ ಇಳಿಯಲು ಅನುಮತಿ ನೀಡುವ ಸಾಧ್ಯತೆ ಇದೆ. ಗಿಲ್ ತಂಡವನ್ನು ಸೇರಿಕೊಂಡಲ್ಲಿ ಮತ್ತೆ ಮೂರನೇ ಕ್ರಮಾಂಕಕ್ಕೆ ಆನೆ ಬಲ ಬರಲಿದೆ. ಇವರು ತಂಡಕ್ಕೆ ಎಟ್ರಿ ಆದರೆ ಯಾರು ಬೆಂಚ್ ಕಾಯುತ್ತಾರೆ ಎಂಬ ಪ್ರಶ್ನೆಗಳು ಮೂಡಿವೆ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ 150 ರನ್ ಸಿಡಿಸಿ ಭರವಸೆ ಮೂಡಿಸಿರುವ ಸರ್ಫರಾಜ್ ಖಾನ್ ಅವರನ್ನು ಬೆಂಚ್ ಕಾಯಿಸುವ ಯೋಚನೆಯಲ್ಲಂತೂ ಮ್ಯಾನೇಜ್ಮೆಂಟ್ ಇರುವುದಿಲ್ಲ. ಇನ್ನು ಪುಣೆಯಲ್ಲಿ ಸ್ಪಿನ್ ಬೌಲರ್‌ಗಳಿಗೆ ಸಹಾಯವಾಗುವ ಪಿಚ್ ಇರಲಿದ್ದು, ಈ ವೇಳೆ ಸರ್ಫರಾಜ್ ಸ್ಪಿನರ್ಸ್‌ಗಳಿಗೆ ಕಾಟ ನೀಡಬಲ್ಲರು.
ಒಂದು ವೇಳೆ ಸರ್ಫರಾಜ್‌ಗೆ ಮ್ಯಾನೇಜ್ಮೆಂಟ್ ಮಣೆ ಹಾಕಿದರೆ ರಾಹುಲ್ ಹಾಗೂ ಗಿಲ್ ಅವರತ್ತ ಮುಖ ಮಾಡಲಿದೆ. ಈ ಇಬ್ಬರೂ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಬ್ಬರಲ್ಲೂ ಅಘಾದವಾದ ಟ್ಯಾಲೆಂಟ್ ಇದ್ದು, ಸರಿಯಾದ ಸಮಯದಲ್ಲಿ ತಂಡದ ಉಪಯೋಗಕ್ಕೆ ಬರುತ್ತಿಲ್ಲ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ರಾಹುಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಕಳೆದ 10 ಇನಿಂಗ್ಸ್‌ಗಳಲ್ಲಿ ಇವರು ಚೇತೋಹಾರಿ ಪ್ರದರ್ಶನ ನೀಡಿದ್ದಾರೆ. ವಿಶೇಷವಾಗಿ ವಿದೇಶಿ ಪಿಚ್‌ಗಳಲ್ಲಿ ಇವರು ತಾಳ್ಮೆಯಿಂದ ಆಟವಾಡು ಆಟಗಾರ. ಇವರನ್ನು ಗಾಯವೂ ಸಹ ಬಹುವಾಗಿ ಕಾಡಿದೆ.

ಶುಭಮನ್ ಗಿಲ್ ಫಿಟ್ ಆಗಿ ತಂಡಕ್ಕೆ ಮರಳಿದ್ದೇ ಆದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಬಲ ಬರಲಿದೆ. ಇವರು ಮೂರನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಈ ಕ್ರಮಾಂಕದಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ಭರವಸೆ ಮೂಡಿಸಿದ್ದಾರೆ. ಇವರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ಟೀಮ್ ಇಂಡಿಯಾ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ತಮ್ಮ ನೈಜ ಸ್ಥಾನ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ಈ ಮೂಲಕ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲರು. ಅಲ್ಲದೆ ಕಿವೀಸ್ ತಂಡದ ಬೌಲರ್‌ಗಳನ್ನು ಕಾಡಬಲ್ಲರು. ಐದನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎಂಬ ಪ್ರಶ್ನೆ ಪ್ರಶ್ನೆ ಆಗಿಯೇ ಉಳಿದಿದೆ. ಇದಕ್ಕೆ ಗುರುವಾರ ಉತ್ತರ ಸಿಗಲಿದೆ.