For Quick Alerts
ALLOW NOTIFICATIONS  
For Daily Alerts
 

ಡಿಸೆಂಬರ್‌ನಲ್ಲಿ 9 ವರ್ಷ ಹಿರಿಯ ನಟಿ ಜೊತೆಗೆ ಶುಭ್ಮನ್‌ ಗಿಲ್‌ ಮದುವೆ?; ಇಲ್ಲಿದೆ ಮಾಹಿತಿ!

ಜೂನ್‌ 1 ಶನಿವಾರ, ಟೀಮ್‌ ಇಂಡಿಯಾ ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್ ಅವರು 2024ರ ಟಿ20 ವಿಶ್ವಕಪ್‌ನ 15 ಜನರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಆದರೂ ಮೀಸಲು ಆಟಗಾರನಾಗಿ ಟೀಮ್‌ ಇಂಡಿಯಾ ಜೊತೆ ಅಮೆರಿಕಾಕ್ಕೆ ತೆರಳಿದ್ದಾರೆ.

ಅಮೆರಿಕಾದಲ್ಲಿ ಟೀಮ್‌ ಇಂಡಿಯಾ ಜೊತೆಗೆ ಶುಭ್ಮನ್‌ ಗಿಲ್ ಕೂಡ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಫೋಟೋ ಶೂಟ್‌ನಲ್ಲಿಯು ಭಾಗವಹಿಸಿದ್ದಾರೆ. ಈ ಮಧ್ಯೆ ತಮ್ಮ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದ ಹೊರತಾಗಿಯೂ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದಾರೆ.

Shubman Gill marriage with senior actress in December

ಈ ಹಿಂದೆ ಸಾರಾ ತೆಂಡೂಲ್ಕರ್ ಮತ್ತು ಬಾಲಿವುಡ್‌ ನಟಿ ಸಾರಾ ಆಲಿ ಖಾನ್‌ ಅವರೊಂದಿಗೆ ಶುಭ್ಮನ್‌ ಗಿಲ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ವಂದತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿರಲಿಲ್ಲ. ಇದೀಗ ಮತ್ತೊಮ್ಮೆ ಶುಭ್ಮನ್‌ ಗಿಲ್‌ ಅವರ ಮದುವೆ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವರ್ಷ ಕೊನೆಯಲ್ಲಿ ಅಂದರೆ ಡಿಸೆಂಬರ್‌ ತಿಂಗಳಿನಲ್ಲಿ ಶುಭ್ಮನ್‌ ಗಿಲ್‌ ಮದುವೆಯಾಗಲಿದ್ದಾರೆ. ತನಗಿಂತ 9 ವರ್ಷ ದೊಡ್ಡವರಾದ ಕಿರುತರೆ ನಟಿ ರಿದ್ಧಿಮಾ ಪಂಡಿತ್‌ ಅವರನ್ನು ಶುಭ್ಮನ್‌ ಗಿಲ್ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಶುಭ್ಮನ್‌ ಗಿಲ್ಲ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಿದ್ದಿಮಾ ಪಂಡಿತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಬಳಿಕ ಡಿಲೀಟ್‌ ಮಾಡಿದ್ದಾರೆ.

ರಿದ್ಧಿಮಾ ಪಂಡಿತ್‌ ಹೇಳಿದ್ದೇನು?

ನಾನು ಬೆಳ್ಳಿಗೆ ಎದ್ದಾಗ ಆನೇಕ ಪತ್ರಕರ್ತರಿಂದ ಮದುವೆ ಬಗ್ಗೆ ನನಗೆ ಆನೇಕ ಕರೆಗಳು ಬರುತ್ತಿದ್ದವು. ಆದರೆ ಯಾವ ಮದುವೆ? ಈಗಲೇ ನಾನು ಮದುವೆಯಾಗುತ್ತಿಲ್ಲ. ನನ್ನ ಜೀವನದಲ್ಲಿ ಅಂತಹದ್ದೇನಾದರೂ ನಡೆದರೆ, ನಾನು ನಿಮಗೆ ಹೇಳುತ್ತೇನೆ. ಈಗ ವೈರಲ್‌ ಆಗಿರುವ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ರಿದ್ದಿಮಾ ಪಂಡಿತ್‌ ಹೇಳಿದ್ದಾರೆ.

ರಿದ್ದಿಮಾ ಪಂಡಿತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಅನ್ನು ಡಿಲೀಟ್‌ ಮಾಡಿರುವುದು ಸಾಕಷ್ಟು ಚರ್ಚೆಗೆ ದಾರಿಯಾಗಿದೆ. ಅಲ್ಲದೆ ಅಭಿಮಾನಿಗಳು ಮದುವೆ ವಿಚಾರ ನಿಜ ಇರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ರಿದ್ಧಿಮಾ ಪಂಡಿತ್ ಯಾರು?

33 ವರ್ಷದ ರಿದ್ಧಿಮಾ ಪಂಡಿತ್ ನಟಿ ಮತ್ತು ರೂಪದರ್ಶಿ. ಕಿರುತರೆಯಲ್ಲಿ ನಟಿಯಾಗಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ರಿದ್ಧಿಮಾ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಖತ್ರೋನ್ ಕಾ ಕಿಲಾಡಿ ಸೀಸನ್ 9 ರಲ್ಲಿ ಕಾಣಿಸಿಕೊಂಡಿದ್ದರು. ಆಗ 2ನೇ ರನ್ನರ್ ಅಪ್ ಆಗಿದ್ದರು.

ಶುಭ್ಮನ್‌ ಗಿಲ್‌ ಕ್ರಿಕೆಟ್‌ ವೃತ್ತಿ ಜೀವನ

24 ವರ್ಷದ ಶುಭ್ಮನ್‌ ಗಿಲ್‌ ಟೀಮ್‌ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್‌ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಳೆದ ವರ್ಷಗಳಿಂದ ತಮ್ಮ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ.

ಶುಭ್ಮನ್‌ ಗಿಲ್‌ ಈವರೆಗೆ ಒಟ್ಟು 25 ಟೆಸ್ಟ್‌ ಪಂದ್ಯಗಳಿಂದ 35.52ರ ಸರಾಸರಿಯಲ್ಲಿ 4 ಶತಕಗಳ ಮೂಲಕ 1492 ರನ್‌ ಗಳಿಸಿದ್ದಾರೆ. 44 ಏಕದಿನ ಪಂದ್ಯಗಳಲ್ಲಿ 2271 ರನ್‌ ಗಳಿಸಿರುವ ಗಿಲ್‌ 61.38ರ ಸರಾಸರಿಯಲ್ಲಿ 6 ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಗಿಲ್‌ 14 ಪಂದ್ಯಗಳಿಂದ 25.77ರ ಸರಾಸರಿಯಲ್ಲಿ 335 ರನ್‌ ಬಾರಿಸಿದ್ದಾರೆ.‌

Story first published: Saturday, June 1, 2024, 16:01 [IST]
Other articles published on Jun 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+