Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ಸ್ಟಾರ್ ರೊನಾಲ್ಡಿನೊ ಭೇಟಿಯಾದ ಶುಭಮನ್‌ ಗಿಲ್‌; ಫೋಟೋ ವೈರಲ್

ವಿಶ್ವದಲ್ಲಿ ಫಿಫಾ ವಿಶ್ವಕಪ್‌ ಜೋಶ್ ಹೆಚ್ಚಾಗಿದೆ. ಟೀಮ್ ಇಂಡಿಯಾದ ಆಟಗಾರರು ಸಹ ಈ ಮೆಗಾ ಇವೆಂಟ್‌ನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಸಹ ಫುಟ್ಬಾಲ್‌ ಪಂದ್ಯವನ್ನು ನೋಡಿ ಖುಷಿ ಪಟ್ಟಿದ್ದಾರೆ. ಇದೇ ವೇಳೆ ಇವರು ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ರೊನಾಲ್ಡಿನೊ ಅವರನ್ನು ಅಮೆರಿಕದಲ್ಲಿ ಭೇಟಿಯಾದರು.

ಶುಭಮನ್‌ ಗಿಲ್‌ ಹಾಗೂ ರೊನಾಲ್ಡಿನೊ ಅವರು ಫಿಫಾ ವಿಶ್ವಕಪ್‌ ವೇಳೆ ಭೇಟಿಯಾದರು. ಈ ವಿಶೇಷ ಫೋಟೋವನ್ನು ಗಿಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ರಿಕೆಟ್ ಮತ್ತು ಫುಟ್ಬಾಲ್ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಯಿತು.

Shubman Gill

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ನಾಯಕ ಶುಭಮನ್‌ ಗಿಲ್‌, ಅಫ್ಘಾನಿಸ್ತಾನ ವಿರುದ್ಧದ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ತವರಿನಲ್ಲಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್‌ ಸ್ವೀಪ್ ಸಾಧನೆ ಮಾಡಿದರು. ಗಿಲ್ ಎರಡು ಇನ್ನಿಂಗ್ಸ್‌ಗಳಲ್ಲಿ 232 ರನ್ ಗಳಿಸಿದರು, ಇದರಲ್ಲಿ 154 ರನ್‌ಗಳ ಅದ್ಭುತ ಇನ್ನಿಂಗ್ಸ್ ಸೇರಿದೆ. ಈ ಸರಣಿಯಲ್ಲಿ, ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 3,000 ರನ್ ಸಿಡಿಸಿ ದಾಖಲೆ ಬರೆದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000 ರನ್‌ಗಳನ್ನು ಮೀರಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ ನಂತರ ಶುಭಮನ್ ಗಿಲ್ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ರೊನಾಲ್ಡಿನೊ ಸಾಧನೆ

ಬ್ರೆಜಿಲ್ ಫುಟ್ಬಾಲ್ ಆಟಗಾರ ದಂತಕಥೆ ರೊನಾಲ್ಡಿನೊ ಮತ್ತೆ ಅಂಗಳಕ್ಕೆ ಇಳಿಯಲು ಸಜ್ಜಾಗಿದ್ದಾರೆ. 46 ವರ್ಷದ ರೊನಾಲ್ಡಿನೊ ಇಟಾಲಿಯನ್ ಸೀರಿ ಸಿ ಕ್ಲಬ್ ರವೆನ್ನಾ ಜೊತೆ ಸಹಿ ಹಾಕಿದ್ದಾರೆ. ರೊನಾಲ್ಡಿನೊ ಈ ಬಗ್ಗೆ ಮಾತನಾಡಿದ್ದು, ನಾನು ಮತ್ತೆ ಮೈದಾನಕ್ಕೆ ಬಂದು ಈ ಕ್ಲಬ್‌ನೊಂದಿಗೆ ಹೊಸ ಕಥೆಯನ್ನು ಬರೆಯಲು ಉತ್ಸುಕನಾಗಿದ್ದೇನೆ" ಎಂದು ಹೇಳಿದರು. ರೊನಾಲ್ಡಿನೊ 2015 ರಲ್ಲಿ ಫ್ಲುಮಿನೆನ್ಸ್ ಪರ ತಮ್ಮ ಕೊನೆಯ ವೃತ್ತಿಪರ ಪಂದ್ಯವನ್ನು ಆಡಿದರು.

ರೊನಾಲ್ಡಿನೊ ತಮ್ಮ ಅಪ್ರತಿಮ ಡ್ರಿಬ್ಲಿಂಗ್ ಚಾತುರ್ಯ ಹೊಂದಿದ ಆಟಗಾರ. ಇವರು ನೋ ಲುಕ್‌ ಪಾಸ್‌ಗಳ ಮೂಲಕ ಇವರು ಸುದ್ದಿಯಾದ ಆಟಗಾರ. ಸತತ ಎರಡು ಬಾರಿ 'ಫಿಫಾ ವರ್ಷದ ಅತ್ಯುತ್ತಮ ಆಟಗಾರ'ನಾಗಿ ಆಯ್ಕೆಯಾಗಿದ್ದಾರೆ.

Story first published: Sunday, June 28, 2026, 9:45 [IST]
Other articles published on Jun 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+