IND vs SL: 'ಗೆಲುವಿಗಾಗಿ ಏನೂ ಮಾಡಲಾಗಲಿಲ್ಲ' ಎಂದ ಶುಭಮನ್ ಗಿಲ್; ಮನವ್ ಸುತಾರ್ ಪ್ರಭಾವಕ್ಕೆ ಮೆಚ್ಚುಗೆ
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಡ್ರಾ ಮೂಲಕ ಅಂತ್ಯಗೊಂಡ ನಂತರ, ಫಾಲೋ-ಆನ್ ನೀಡುವ ನಿರ್ಧಾರದ ಬಗ್ಗೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಸುಮಾರು 250 ಓವರ್‌ಗಳ ಕಾಲ ಮೈದಾನದಲ್ಲಿದ್ದ ತಂಡವು ಫಲಿತಾಂಶವನ್ನು ಪಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡಿದೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾದ ಪ್ರತಿರೋಧದಿಂದ ಭಾರತ ತಂಡವು ನಿರಾಶೆಗೊಂಡಿತು, ಆದರೆ ಪರಿಸ್ಥಿತಿಯನ್ನು ಗಮನಿಸಿದರೆ ತಮ್ಮ ತಂಡವು ಅದಕ್ಕಿಂತ ಹೆಚ್ಚು ಏನನ್ನೂ ಮಾಡಲಾಗುತ್ತಿರಲಿಲ್ಲ ಎಂದು ಗಿಲ್ ಅಭಿಪ್ರಾಯಪಟ್ಟರು. ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವು ಸೋನಲ್ ದಿನುಶ ಅವರ ಅದ್ಭುತ ಶತಕದ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಗಿಲ್, "ನಿಜ ಹೇಳಬೇಕೆಂದರೆ, ಏನೂ ಇಲ್ಲ. ನಾವು ಸತತ ಮೂರು ದಿನಗಳ ಕಾಲ, ಸುಮಾರು 250 ಓವರ್‌ಗಳಷ್ಟು ಫೀಲ್ಡಿಂಗ್ ಮಾಡಿದ್ದೇವೆ ಮತ್ತು ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇವೆ. ಅವರು ಅದ್ಭುತವಾಗಿ ಆಡಿದರು. ಬ್ಯಾಟರ್‌ಗಳು ಉತ್ತಮವಾಗಿ ಆಟವಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಸಾಕಷ್ಟು ಕೌಶಲ್ಯವಿತ್ತು ಹಾಗೂ ಸ್ವಲ್ಪ ಅದೃಷ್ಟವೂ ಅವರೊಂದಿಗೆ ಇತ್ತು. ಆದ್ದರಿಂದ ನಾವು ಏನನ್ನೂ ವಿಭಿನ್ನವಾಗಿ ಮಾಡಬಹುದಿತ್ತು ಎಂದು ನಾನು ಭಾವಿಸುವುದಿಲ್ಲ," ಎಂದರು.
ಮಳೆಯ ಅನಿಶ್ಚಿತತೆ ಮತ್ತು ಅಂತಿಮ ದಿನದ ಅಮೂಲ್ಯವಾದ ಆಟದ ಸಮಯವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಉಲ್ಲೇಖಿಸಿ, ಫಾಲೋ-ಆನ್ ನೀಡುವ ಭಾರತದ ನಿರ್ಧಾರವನ್ನು ಗಿಲ್ ಸಮರ್ಥಿಸಿಕೊಂಡರು.
ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡರೂ, ಭಾರತದ 1-0 ಸರಣಿ ಗೆಲುವಿನಲ್ಲಿ ಅನೇಕ ಸಕಾರಾತ್ಮಕ ಅಂಶಗಳನ್ನು ಗಿಲ್ ಗುರುತಿಸಿದರು, ಅದರಲ್ಲೂ ಯುವ ಆಟಗಾರರ ಪ್ರದರ್ಶನ ಎದ್ದು ಕಾಣುತ್ತಿತ್ತು. ಇವರಲ್ಲಿ, ಎಡಗೈ ಸ್ಪಿನ್ನರ್ ಮನವ್ ಸುತಾರ್ ಹೆಚ್ಚು ಗಮನ ಸೆಳೆದವರಲ್ಲಿ ಒಬ್ಬರಾಗಿದ್ದಾರೆ.
ಸುತಾರ್ ಬಗ್ಗೆ ಮಾತನಾಡಿರುವ ಗಿಲ್ "ನನಗೆ ಇಷ್ಟವಾದದ್ದು ಎಲ್ಲವೂ. ಅವರು ಎಷ್ಟು ಸ್ಥಿರರಾಗಿದ್ದಾರೆ ಮತ್ತು ಬಾಲ್ ಎಸೆಯುವಾಗ ಎಷ್ಟು ಚೆನ್ನಾಗಿ ನಿಭಾಯಿಸಿದರು. ಅವರು ಅತ್ಯುತ್ತಮ ಬೌಲರ್ ಮತ್ತು ಮುಂಬರುವ ವರ್ಷಗಳಲ್ಲಿ ಅವರು ನಮಗೆ ಅತ್ಯಂತ, ಅತ್ಯಂತ ನಿರ್ಣಾಯಕ ವ್ಯಕ್ತಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಭಾರತ ಟೆಸ್ಟ್ ತಂಡದಲ್ಲಿ ಮೂಡುತ್ತಿರುವ ಬದಲಾವಣೆಯನ್ನು ಗಿಲ್ ಹೈಲೆಟ್ ಮಾಡಿದರು. ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್, ಧ್ರುವ್ ಜುರೇಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಪ್ರದರ್ಶನಗಳನ್ನು ಸಹ ಹೈಲೈಟ್ ಮಾಡಿದರು.
"ಇಲ್ಲಿಯವರೆಗೆ ನಮಗೆ ಅನೇಕ ಸಕಾರಾತ್ಮಕ ಅಂಶಗಳು ಸಿಕ್ಕಿವೆ ಎಂದು ನಾನು ಭಾವಿಸುತ್ತೇನೆ. ಪಡಿಕ್ಕಲ್ ಅದ್ಭುತವಾಗಿದ್ದರು, ಕೆಎಲ್ ರಾಹುಲ್ ಅವರು ತುಂಬಾ ಚೆನ್ನಾಗಿ ಆಟವಾಡಿದರು. ಮನವ್ ಅದ್ಭುತವಾಗಿ ಬೌಲಿಂಗ್ ಮಾಡಿದರು, ಮತ್ತು ಪ್ರಸಿದ್ಧ್ ಎರಡೂ ಇನ್ನಿಂಗ್ಸ್‌ಗಳಲ್ಲಿ, ವೇಗದ ಬೌಲರ್‌ಗಳಿಬ್ಬರೂ ತಮ್ಮ ಶ್ರಮವನ್ನು ಹಾಕಿದರು. ಆದ್ದರಿಂದ ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ," ಎಂದು ಭಾರತ ನಾಯಕ ಗಿಲ್ ವಿವರಿಸಿದರು.
ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಲಿರುವ ಮತ್ತು ನಂತರ ಬಲಿಷ್ಠ ತವರಿನ ಸರಣಿಯನ್ನು ಎದುರಿಸಲಿರುವ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕನಸನ್ನು ಜೀವಂತವಾಗಿರಿಸಿಕೊಳ್ಳುವ ಬಗ್ಗೆ ಗಿಲ್ ಆಶಾವಾದಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications