Shubman Gill: 21 ರನ್ ಬಾರಿಸುತ್ತಲೇ ಗಿಲ್ ದಾಖಲೆ
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಟೀಮ್ ಇಂಡಿಯಾದ ಟೆಸ್ಟ್ ನಾಯಕ ಜವಾಬ್ದಾರಿ ಅವರ ಹೆಗಲು ಏರಿದ ಮೇಲೆನಿಂದ ಅವರ ಲಕ್ ಬದಲಾಗಿದೆ. ಮೂರನೇ ಕ್ರಮಾಂಕದಿಂದ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಮೇಲಂತೂ ಅವರು ಇನ್ನು ಅಬ್ಬರಿಸುತ್ತಿದ್ದಾರೆ. ಪ್ರಸಕ್ತ ವರ್ಷ ಎದುರಾಳಿಗಳ ಪಾಲಿನ ದುಸ್ವಪ್ನವಾಗಿರುವ ಶುಭಮನ್ ಗಿಲ್, ತವರಿನಲ್ಲಿ ಎರಡನೇ ಸರಣಿಯನ್ನು ಆಡಲಿದ್ದಾರೆ.
ಈಗಾಗಲೇ ಶುಭಮನ್ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಸರಣಿಯನ್ನು ಆಡಿ ಜಯ ಸಾಧಿಸಿದ್ದಾರೆ. ಈ ಜಯದ ಹೊರತಾಗಿಯೂ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನ.14 ರಿಂದ ಆರಂಭವಾಗುವ ಸರಣಿಯಲ್ಲಿ ಭಾರತ ಜಯ ಸಾಧಿಸಿದಲ್ಲಿ ನಿಶ್ಚಿತವಾಗಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಈ ವೇಳೆ ಶುಭಮನ್ ಗಿಲ್ ಸಹ ಹೊಸ ಮೈಲಿಗಲ್ಲು ತಲುಪಲು ಸಿದ್ಧರಾಗಿದ್ದಾರೆ. ಈ ಮೂಲಕ ಈ ವರ್ಷವನ್ನು ಸ್ಮರಣೀಯವಾಗಿಸುವ ಇರಾದೆ ಗಿಲ್‌ದ್ದಾಗಿದೆ.

ಈ ಸಾಲಿನಲ್ಲಿ ವಿಶ್ವದಾದ್ಯಂತ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್‌ಗೆ ಅಗ್ರ ಸ್ಥಾನ. ಇವರು 2025ರಲ್ಲಿ ಆಡಿದ 8 ಪಂದ್ಯಗಳಲ್ಲಿ 69.92 ಸರಾಸರಿಯಲ್ಲಿ 979 ರನ್ ಸಿಡಿಸಿದ್ದಾರೆ. ಈ ವೇಳೆ 5 ಶತಕ ಹಾಗೂ 1 ಅರ್ಧಶತಕಗಳು ಸೇರಿವೆ. ಗಿಲ್ ಅಕ್ಕಪಕ್ಕದಲ್ಲೂ ಯಾವೊಬ್ಬ ಪ್ಲೇಯರ್ ಇಲ್ಲ.
ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ 21 ರನ್ ಬಾರಿಸುವಲ್ಲಿ ಸಫಲರಾದರೆ, ಟೆಸ್ಟ್ ಫಾರ್ಮೆಟ್‌ನಲ್ಲಿ ಒಂದೇ ವರ್ಷ ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಇದು ಅವರ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಆಗಲಿದೆ. ಅಲ್ಲದೆ ಬಹುದಿನಗಳ ಕಾಲ ಟಿ20 ತಂಡದಿಂದಲೂ ಹೊರಗುಳಿದಿದ್ದ ಗಿಲ್, ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಕಂ ಬ್ಯಾಕ್ ಮಾಡಿದ್ದಾರೆ. ಈ ಮೂಲಕ ಮೂರು ಫಾರ್ಮೆಟ್‌ನಲ್ಲೂ ತಮ್ಮ ಖದರ್ ತೋರಿಸಲು ರೆಡಿಯಾಗಿದ್ದಾರೆ.

2 ಜವಾಬ್ದಾರಿ ನಿರ್ವಹಣೆ
ಟೀಮ್ ಇಂಡಿಯಾದನಾಯಕ ಶುಭಮನ್ ಗಿಲ್ 2020ರ ಅಂತ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಆರಂಭದಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡಿದರೆ, ಕ್ರಮೇಣ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಮಿಂಚು ಹರಿಸಿದರು. ಆ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಂದ ತೆರವಾದ ಎರಡೂ ಸ್ಥಾನವನ್ನು ಗಿಲ್ ತುಂಬಿದ್ದಾರೆ. ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕನ ಸ್ಥಾನವನ್ನು ತುಂಬಿರುವ ಗಿಲ್, ವಿರಾಟ್ ಕೊಹ್ಲಿಯ ನಾಲ್ಕನೇ ಕ್ರಮಾಂಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಎರಡೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications