ಶ್ನೆಗಳು ಎದ್ದಿವೆ. ಇದೀಗ ಟೀಮ್ ಇಂಡಿಯಾಗೆ ಭವಿಷ್ಯದ ನಾಯಕನನ್ನು ಹುಡುಕುವತ್ತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಗಮನ ಹರಿಸಿದೆ. ಭಾರ ತಂಡ ಭವಿಷ್ಯದ ನಾಯಕನ ವಿಷಯಕ್ಕೆ ಬಂದರೆ, ಶುಭಮನ್ ಗಿಲ್ ಅವರ ಹೆಸರು ಪ್ರತಿಯೊಬ್ಬರು ನೆನಪಿಗೆ ಬರುತ್ತದೆ. ಆದರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ನಾಯಕತ್ವ ಯೋಜನೆಯಿಂದ ಶುಭಮನ್ ಗಿಲ್ ಅವರನ್ನು ಹೇಗೆ ಕೈಬಿಡಬಹುವುದು ಹೇಳದ್ದಾರೆ.
ಕಳೆದ ವರ್ಷ ಟೀಮ್ ಇಂಡಿಯಾದ ಉಪನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಿಸಲಾಗಿತ್ತು. ಆದರೆ ಈಗ ಅವರು ಕೇವಲ ಆಟಗಾರರಾಗಿದ್ದಾರೆ. ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿಯೂ ಗಿಲ್ ಯಶಸ್ವಿಯಾಗಿರಲಿಲ್ಲ. ಅಲ್ಲದೆ, ಇದೀಗ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿಯೂ ಅವರ ಪ್ರದರ್ಶನಗಳ ಮೇಲೆ ಪ್ರಶ್ನೆಗಳು ಮೂಡಿವೆ.

ಪ್ರಸ್ತುತ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನ ಸ್ಥಾನಕ್ಕೆ ಮೊದಲ ಆಯ್ಕೆಯಾಗಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ, ಅವರು ಗಾಯಗೊಂಡಿರುವುದು ಬಿಸಿಸಿಐ ಆಯ್ಕೆ ಸಮಿತಿ ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ಯೋಚಿಸುವಂತೆ ಮಾಡಿದೆ.ಮತ್ತೊಂದೆಡೆ ಶುಭಮನ್ ಗಿಲ್ ಕೂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೇಳಿಕೊಳ್ಳವಂತಹ ಪ್ರದರ್ಶನ ನೀಡಿಲ್ಲ.
ಶುಭಮನ್ ಗಿಲ್ ಅವರನ್ನು ಟೀಮ್ ಇಂಡಿಯಾದ ಮುಂದಿನ ನಾಯಕ ಎಂದು ಹೇಳಲಾಗುತ್ತಿತ್ತು. ಆದರೆ, ಟೀಮ್ ಇಂಡಿಯಾ ನಾಯಕತ್ವ ರೇಸ್‌ಗೆ ಇಬ್ಬರು ಸ್ಟಾರ್ ಆಟಗಾರರು ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಶುಭಮನ್ ಗಿಲ್ ಅವರೊಂದಿಗೆ ನೇರ ಪೈಪೋಟಿಗಿಳಿದಿದ್ದಾರೆ. ರಿಷಬ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಅವರು ಶುಭಮನ್ ಗಿಲ್ ಟೀಮ್ ಇಂಡಿಯಾ ನಾಯಕನಾಗಲು ಅಡ್ಡಿಯಾಗಿದ್ದಾರೆ.
ಇತ್ತೀಚೆಗೆ ಗಿಲ್ ಅವರಿಗೆ ಹೋಲಿಸಿದರ ರಿಷಬ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಪ್ರದರ್ಶನ ಉತ್ತಮವಾಗಿದೆ. ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ರಿಷಬ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
ಟೀಮ್ ಇಂಡಿಯಾ ಭವಿಷ್ಯದ ನಾಯಕನ ಕುರಿತು ಆಕಾಶ್ ಚೋಪ್ರಾ ಮಾತನಾಡಿದ್ದಾರೆ. 'ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ನಡುವೆ ಯಾರು ನಾಯಕರಾಗಬಹುದು?. ಇದು ಅದ್ಭುತ ಪ್ರಶ್ನೆಯಾಗಿದೆ. ವರದಿಗಳ ಪ್ರಕಾರ, ರೋಹಿತ್ ಅವರು ಕೆಲವು ತಿಂಗಳುಗಳವರೆಗೆ ತಂಡವನ್ನು ನಿರ್ವಹಿಸುವುದಾಗಿ ಹೇಳಿದ್ದಾರೆ. ಇದಾದ ನಂತರ, ಬಿಸಿಸಿಐ ತಮಗೆ ಬೇಕಾದವರನ್ನು ಆಯ್ಕೆ ಮಾಡಬಹುದು. ಇಂತಹ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಟೀಮ್ ಇಂಡಿಯಾ ಮುಂದಿನ ನಾಯಕನ ಬಗ್ಗೆ ಮಾತನಾಡಿರುವುದು ಅಚ್ಚರಿ ತರಿಸಿದೆ.
ಜಸ್ಪ್ರೀತ್ ಬುಮ್ರಾ ಇಡೀ ಇಂಗ್ಲೆಂಡ್ ಪ್ರವಾಸದ ನಾಯಕನಾಗಿದ್ದರೆ, ಉಪನಾಯಕನನ್ನು ಸರಿಯಾಗಿ ನೇಮಿಸಿ. ಏಕೆಂದರೆ ನೀವು ಅವರನ್ನು ಮುಂದಿನ ನಾಯಕನ್ನಾಗಿ ಸಿದ್ಧಪಡಿಸಬೇಕು. ನಿಜ ಹೇಳಬೇಕೆಂದರೆ, ನಾವು ಟಿ20 ವಿಶ್ವಕಪ್ ಗೆದ್ದಾಗ, ತಯಾರಿ ಪ್ರಕ್ರಿಯೆಯು ತುಂಬಾ ಚೆನ್ನಾಗಿ ನಡೆಯುತ್ತಿರುವುದು ತೋರುತ್ತಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಶುಭಮನ್ ಗಿಲ್ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮುಂದಿನ ತಿಂಗಳು ಐಸಿಸಿ ಚಾಂಪಿಯನ್ ಟ್ರೋಫಿ 2025ರ ಟೂರ್ನಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಗಿಲ್ ಆಯ್ಕೆಯಾಗುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ನಡೆಯಲಿದೆ. ಈ ಸರಣಿಗೆ ಗಿಲ್ ಆಯ್ಕೆಯಾಗುವ ಸಾಧ್ಯತೆಯಿದ್ದು, ಅವರಿಗೆ ಫಾರ್ಮ್ ಕಂಡುಕೊಳ್ಳಲು ಉತ್ತಮ ಅವಕಾಶವಾಗಿದೆ.