For Quick Alerts
ALLOW NOTIFICATIONS  
For Daily Alerts
 

ICC ODI Ranking: ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕ ತಲುಪಿದ ಶುಭ್ಮನ್ ಗಿಲ್; ಇಶಾನ್ ಕಿಶನ್ ಸ್ಥಾನದಲ್ಲೂ ಏರಿಕೆ!

ಬುಧವಾರ, ಸೆಪ್ಟೆಂಬರ್ 6ರಂದು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನವೀಕರಣದ ನಂತರ ಭಾರತದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರು ವೃತ್ತಿಜೀವನದ ಅಗ್ರ 3ನೇ ಸ್ಥಾನ ಗಳಿಸಿದ್ದಾರೆ.

ಸೋಮವಾರ ಕ್ಯಾಂಡಿಯಲ್ಲಿ ನಡೆದ ಏಷ್ಯಾ ಕಪ್‌ನ ಗೆಲ್ಲಲೇಬೇಕಾದ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ 62 ಎಸೆತಗಳಲ್ಲಿ ಅಜೇಯ 67 ರನ್ ಗಳಿಸಿದ ಶುಭ್ಮನ್ ಗಿಲ್ ಹೊಸ ಮೈಲಿಗಲ್ಲು ಸ್ಥಾಪಿಸಿದರು.

ಮೂರನೇ ಸ್ಥಾನ ತಲುಪಿದ ಅತ್ಯಂತ ಕಿರಿಯ ಬ್ಯಾಟರ್
23 ವರ್ಷದ ಶುಭ್ಮನ್ ಗಿಲ್ ಈ ವರ್ಷ 50 ಓವರ್‌ಗಳ ಸ್ವರೂಪದಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಮೂರನೇ ಸ್ಥಾನ ತಲುಪಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು.

46ಕ್ಕಿಂತ ಹೆಚ್ಚಿನ ಸರಾಸರಿಯೊಂದಿಗೆ 1361 ರನ್ ಗಳಿಸಿರುವ ಶುಭ್ಮನ್ ಗಿಲ್, ಈ ವರ್ಷದ ಎಲ್ಲಾ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

shubman-gill-reaches-career-high-odi-ranking

ಏಕದಿನ ಕ್ರಿಕೆಟ್‌ಗೆ ಬಂದರೆ, ಭಾರತೀಯ ಆರಂಭಿಕ ಬ್ಯಾಟರ್ 14 ಪಂದ್ಯಗಳಿಂದ 827 ರನ್ ಬಾರಿಸಿದ್ದಾರೆ. ಇದರಲ್ಲಿ ನ್ಯೂಜಿಲೆಂಡ್ ವಿರುದ್ಧ 208 ರನ್ ಕೂಡ ಸೇರಿದೆ.

ಶುಭ್ಮನ್ ಗಿಲ್ ಅವರು 2023ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಭರ್ಜರಿ ದ್ವಿಶತಕ ಸೇರಿದಂತೆ ಐದು ಶತಕಗಳನ್ನು ಬಾರಿಸುವ ಮೂಲಕ ಗಮನಾರ್ಹ ಫಾರ್ಮ್ ಅನ್ನು ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಗಿಲ್ ಅವರ ಇದೇ ರೀತಿ ಸ್ಥಿರ ಪ್ರದರ್ಶನ ಈ ವರ್ಷದ ಅಂತ್ಯದ ವೇಳೆಗೆ ಹಲವು ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಅನುಮಾನವಿಲ್ಲ ಮತ್ತು ಹಲವು ದಾಖಲೆಗಳನ್ನು ಮುರಿಯಬಹುದು ಅಂದಾಜಿಸಲಾಗಿದೆ. ಇದು ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸ್ಟಾರ್ ಆಗಿ ಶುಭ್ಮನ್ ಗಿಲ್ ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಆದರೆ, ಶುಭ್ಮನ್ ಗಿಲ್ ಅವರು ಕಳೆದ ಎಂಟು ಪಂದ್ಯಗಳಿಂದ ಕೇವಲ ಎರಡು ಅರ್ಧಶತಕಗಳೊಂದಿಗೆ ಫಾರ್ಮ್ ಕುಸಿತ ಕಂಡಿದ್ದಾರೆ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. 2023ರ ಏಷ್ಯಾ ಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್‌ಗಳನ್ನು ಗಳಿಸಲಷ್ಟೇ ಶಕ್ತರು.

ಇದರ ಹೊರತಾಗಿಯೂ, ನೇಪಾಳ ವಿರುದ್ಧದ ಅವರ ಅಜೇಯ ಅರ್ಧಶತಕದ ಇನ್ನಿಂಗ್ಸ್ ಅವರು 750 ರೇಟಿಂಗ್ ಪಾಯಿಂಟ್‌ಗಳ ಮೂಲಕ ವೃತ್ತಿಜೀವನದ ಅತ್ಯುನ್ನತ ರೇಟಿಂಗ್ ಅನ್ನು ತಲುಪಲು ಸಹಾಯ ಮಾಡಿತು ಮತ್ತು ಅಗ್ರ ಮೂರರೊಳಗೆ ಪ್ರವೇಶಿಸಲು ಸಾಧ್ಯವಾಯಿತು.

Shubman Gill Reaches Career High ODI Ranking: Youngest Player Achieves Milestone

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು 882 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 777 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಭಾರತದ ಮತ್ತೊಬ್ಬ ಭರವೆಸಯ ಬ್ಯಾಟರ್ ಇಶಾನ್ ಕಿಶನ್ ಕೂಡ 12 ಸ್ಥಾನಗಳ ಜಿಗಿತವನ್ನು ಕಂಡಿದ್ದು, ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 82 ರನ್ ಗಳಿಸಿದ ನಂತರ 24ನೇ ಸ್ಥಾನಕ್ಕೆ ತಲುಪಿದ್ದಾರೆ.

ಶುಭ್ಮನ್ ಗಿಲ್ ಹೊರತಪಡಿಸಿ ಟಾಪ್ 10ರಲ್ಲಿರುವ ಮತ್ತೊಬ್ಬ ಭಾರತೀಯ ಆಟಗಾರನೆಂದರೆ ಹತ್ತನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ. ಭಾರತ ತಂಡದ ನಾಯಕ ರೋಹಿತ್ ಶರ್ಮಾ 11ನೇ ಸ್ಥಾನದಲ್ಲಿದ್ದಾರೆ.

Story first published: Wednesday, September 6, 2023, 16:15 [IST]
Other articles published on Sep 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+