Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಮೌನ ಮುರಿದ ಉಪನಾಯಕ ಗಿಲ್‌

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಫೈಟ್‌ ಭಾನುವಾರ ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಲು ಉಭಯ ತಂಡಗಳು ಜಿದ್ದಾಜಿದ್ದಿನ ಫೈಟ್‌ ನಡೆಲಿವೆ. ಈ ಪಂದ್ಯದಲ್ಲಿ ಭಾರತದ ಅಭಿಮಾನಿಗಳ ಕಣ್ಣು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿರಲಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ನಿವೃತ್ತಿ ಘೋಷಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಈಗ ಉಪನಾಯಕ ಶುಭಮನ್‌ ಗಿಲ್‌ ಮೌನ ಮುರಿದಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಪಂದ್ಯಕ್ಕೂ ಮುನ್ನಾ ದಿನವಾದ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ಉಪನಾಯಕ ಶುಭಮನ್‌ ಗಿಲ್‌, ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಗಿಲ್‌, ರೋಹಿತ್‌ ನಿವೃತ್ತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಪ್ರಶ್ನೆಗೆ ಶುಭಮನ್‌ ಗಿಲ್‌ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.

Shubman Gill Reacts to Rohit Sharma s Retirement Speculations Ahead of Champions Trophy Final

ರೋಹಿತ್ ಶರ್ಮಾ ನಿವೃತ್ತಿ ತೆಗೆದುಕೊಳ್ಳುತ್ತಾರಾ?

ರೋಹಿತ್‌ ಶರ್ಮಾ ನಿವೃತ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್‌ ಉತ್ತರ ನೀಡಿದ್ದಾರೆ. ಸದ್ಯ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆಗಳು ಇಲ್ಲ. ನನ್ನ ಪರವಾಗಿ ರೋಹಿತ್ ಶರ್ಮಾ ಸಹ ಸದ್ಯ ಈ ಬಗ್ಗೆ ಹೆಚ್ಚಿನ ಯೋಚನೆಯನ್ನು ಮಾಡುತ್ತಿಲ್ಲ.

Shubman Gill Reacts to Rohit Sharma s Retirement Speculations Ahead of Champions Trophy Final

ನಮ್ಮ ತಂಡದ ಆಟಗಾರರ ಚಿತ್ತ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಮೇಲೆ ಕಣ್ಣು ನೆಟ್ಟಿದೆ. ಹೀಗಾಗಿ ನಮ್ಮ ತಂಡ ಸದ್ಯ ಬೇರೆ ಯಾವುದೇ ತರಹದ ಯೋಚನೆ ಮಾಡುತ್ತಿಲ್ಲ. ಆದರೆ ಈ ಬಗ್ಗೆ ರೋಹಿತ್ ಶರ್ಮಾ ನಮ್ಮ ಮುಂದೆ ಏನು ಮಾತನಾಡಿಲ್ಲ. ರೋಹಿತ್ ಶರ್ಮಾ ಸಹ ನಿವೃತ್ತಿಯ ಬಗ್ಗೆ ಯಾರೊಂದಿಗೆನೂ ಮಾತನಾಡಿಲ್ಲ. ಪಂದ್ಯದ ಬಳಿಕವೇ ರೋಹಿತ್‌ ತಮ್ಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಸದ್ಯ ನಾನು ನನ್ನ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ. ಇನ್ನು ಸಾಕಷ್ಟು ಕಲಿಯುವುದು ಬಾಕಿ ಇದೆ ಎಂದು ಶುಭಮನ್ ಗಿಲ್‌ ತಿಳಿಸಿದ್ದಾರೆ.

ಬಾರ್ಬಡೋಸ್‌ನಲ್ಲಿ ನಡೆದಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಬಳಿಕ ರೋಹಿತ್ ಶರ್ಮಾ ತನ್ನ ಮಹತ್ವದ ನಿರ್ಧಾರವನ್ನು ಪ್ರಕಟಿಸಬಹುದು ಎಂಬ ಚರ್ಚೆಗಳು ಆರಂಭವಾಗಿವೆ.

Story first published: Saturday, March 8, 2025, 19:40 [IST]
Other articles published on Mar 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+