ಟೀಮ್ ಇಂಡಿಯಾದ ಏಕದಿನ ಕ್ರಿಕೆಟ್‌ಗೆ ನೂತನ ನಾಯಕ ಸಿಕ್ಕಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಬಿಸಿಸಿಐ ಕಸಿದು ಕೊಂಡಿದೆ. ಅಲ್ಲದೆ ಇವರ ಸ್ಥಾನದಲ್ಲಿ 26 ವರ್ಷದ ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಲಾಗಿದೆ. ಹಾಗಿದ್ದಾರೆ ಈ ಬದಲಾವಣೆಗೆ ಕಾರಣ ಏನು? ಇದರ ಹಿಂದೆಯೂ ಹಿಂದಿನಂತೆ ಕೋಚ್ ಗೌತಮ್ ಗಂಭೀರ್ ಕೈವಾಡವಿದೆಯಾ? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದಕ್ಕೆ ಉತ್ತರ ಇಲ್ಲಿದೆ.
ಟೀಮ್ ಇಂಡಿಯಾದ ಯಶಸ್ವಿ ನಾಯಕರ ಸಾಲಿನಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ಥಾನ. ಇವರು ಈಗಾಗಲೇ ಟಿ20 ಹಾಗೂ ಟೆಸ್ಟ್ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸದ್ದರಿಂದ, ಭಾರತವನ್ನು ಏಕದಿನ ಫಾರ್ಮೆಟ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ. ರೋಹಿತ್‌ಗೆ ತಂಡಕ್ಕೆ ಏಕದಿನ ಟ್ರೋಫಿ ಕನಸು ಅಪಾರವಾಗಿದೆ. ಇದಕ್ಕಾಗಿ ಇವರು ಶ್ರಮಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕನಸು ರೋಹಿತ್ ಅವರದ್ದಾಗಿದೆ. ಆದರೆ ಈ ಕನಸು ಈಡೇರುತ್ತದಾ ಎಂಬ ಸಂಶಯ ಮೂಡಿದೆ. ರೋಹಿತ್ ಅವರಿಂದ ನಾಯಕತ್ವ ಕಸಿದು ಕೊಳ್ಳುವಲ್ಲಿ ಎದ್ದು ಕಾಣುವ ಅಂಶಗಳು ಇಲ್ಲಿವೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಾಗಿದೆ ಎಂದು ಹೇಳುವುದು ಕಷ್ಟ. ರೋಹಿತ್ ಶರ್ಮಾ ಅವರನ್ನು 2027ರ ವಿಶ್ವಕಪ್ ವರೆಗೆ ನಾಯಕತ್ವದಲ್ಲಿ ಇರಿಸಲು ಸಾಧ್ಯವಿಲ್ಲ ಹೊಸ ನಾಯಕ ಬೇಕು ಎಂದು ಗಂಭೀರ್ ತಿಳಿಸಿದ್ದರು. ಏಕದಿನ ವಿಶ್ವಕಪ್‌ಗೆ ಇನ್ನು 2 ವರ್ಷಗಳು ಮಾತ್ರ ಬಾಕಿ ಇದ್ದು, ಇದಕ್ಕಾಗಿ ತಂಡವನ್ನು ಕಟ್ಟುವ ಅನಿವಾರ್ಯತೆ ಇದೆ ಎಂದು ಗಂಭೀರ್ ಅಭಿಪ್ರಾಯವಾಗಿದೆ.
ರೋಹಿತ್, ಗಂಬೀರ್ ನಡುವೆ ಮನಸ್ತಾಪಗಳು ಮೊದಲಿನಿಂದಲೂ ಇವೆ. ಕ್ಯಾಮೆರಾಗಳ ಮುಂದೆ ಇಬ್ಬರೂ ನಗುತ್ತಾ ಮಾತನಾಡಿದರೂ, ಹಿಂಬದಿಯಲ್ಲಿ ಒಬ್ಬರ ಮುಖ ಕಂಡೆ ಒಬ್ಬರಿಗೆ ಆಗುತ್ತಿರಲಿಲ್ಲ. ಇನ್ನು ಕೋಚ್ ಗಂಭೀರ್ ತೆಗೆದುಕೊಳ್ಳು ನಿರ್ಣಯಗಳು ರೋಹಿತ್‌ಗೆ ಇರಿಸು ಮುರಿಸು ತಂದಿದ್ದವು. ಇನ್ನು ಹಿಟ್ ಮ್ಯಾನ್ ಬಗ್ಗೆ ಗಂಭೀರ್ ಒಳ್ಳೆಯ ಅಭಿಪ್ರಾಯವನ್ನು ಹೊಂದಿರಲಿಲ್ಲ. ಇನ್ನು ಇದೆಲ್ಲವುದಕ್ಕೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೇ ತಂಡದಿಂದ ಹೊರ ಹಾಕಿದ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರನ್ನು ರೋಹಿತ್ ಶರ್ಮಾ ಪ್ರಮೋಟ ಮಾಡುವಂತೆ ಕಾಣುತ್ತಿದೆ. ಇದರಿಂದ ಗಂಭೀರ್‌ಗೆ ಬೇಸರವಾಗಿರಬಹುದು.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಯಿತು. ಅಲ್ಲದೆ ಮುಂಬೈ ಟೆಸ್ಟ್ ಸೋಲಿನ ಹೊಣೆಯನ್ನು ಕೋಚ್ ತಲೆಗೆ ಕಟ್ಟಿದಾಗ ಇದನ್ನು ಗಂಭೀರ್ ಸಹಿಸಿಕೊಳ್ಳಲಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಹಾಗೂ ರೋಹಿತ್ ಶರ್ಮಾ ಅವರ ಪ್ರದರ್ಶನ ಕೋಚ್‌ಗೆ ಬೇಸರ ತರಿಸಿತ್ತು. ಈ ಕಾರಣಗಳನ್ನು ಗಂಭೀರ್, ರೋಹಿತ್ ಅವರನ್ನು ಪಟ್ಟದಿಂದ ಕೆಳಗಿಳಿಸಿದಂತೆ ಕಾಣುತ್ತದೆ.