ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಅಂತಿಮ ಘಟ್ಟ ತಲುಪಿದೆ. ಪಂದ್ಯದ ಮೇಲೆ ಟೀಮ್ ಇಂಡಿಯಾ ತನ್ನ ಹಿಡಿತವನ್ನು ಇಟ್ಟುಕೊಂಡಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 357 ರನ್‌ಗಳ ಮುನ್ನಡೆ ಸಾಧಿಸಿದೆ.
ಕತ್ತಲು ಆದ ಕಾರಣ ದಿನದ ಆಟವನ್ನು ಸುಮಾರು 9 ಓವರ್‌ಗಳ ನಂತರ ಕೊನೆಗೊಳಿಸಬೇಕಾಯಿತು. ಬಾಂಗ್ಲಾದೇಶ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 158 ರನ್ ಗಳಿಸಿ ಸಂಕಷ್ಟದಲ್ಲಿದೆ. ಬಾಂಗ್ಲಾದೇಶ ತಂಡಕ್ಕೆ ಭಾರತ 515 ರನ್‌ಗಳ ಗುರಿ ನೀಡಿದೆ.

ಪಂದ್ಯದ ಮುಕ್ತಾಯದ ವೇಳೆಗೆ ನಾಯಕ ನಜ್ಮುಲ್ ಹುಸೇನ್ ಶಾಂಟೊ (51) ಮತ್ತು ಶಕೀಬ್ ಅಲ್ ಹಸನ್ (5) ಅಜೇಯರಾಗಿ ಉಳಿದಿದ್ದಾರೆ. ಮೊದಲ ಟೆಸ್ಟ್ ಗೆಲ್ಲಲು ಭಾರತಕ್ಕೆ 6 ವಿಕೆಟ್ ಗಳ ಅವಶ್ಯಕತೆ ಇದ್ದು, ಇನ್ನೂ ಎರಡು ದಿನಗಳ ಆಟ ಬಾಕಿ ಇದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಉತ್ತಮ ಆರಂಭ ಕಂಡಿತು. ಆರಂಭಿಕರಾದ ಜಾಕಿರ್ ಹಸನ್ ಮತ್ತು ಶದ್ಮನ್ ಇಸ್ಲಾಂ ಮೊದಲ ವಿಕೆಟ್‌ಗೆ 62 ರನ್‌ಗಳ ಜೊತೆಯಾಟವಾಡಿದರು. 17 ಓವರ್‌ಗಳ ಎರಡನೇ ಎಸೆತದಲ್ಲಿ ಜಾಕಿರ್ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ಭಾರತಕ್ಕೆ ಮೊದಲ ವಿಕೆಟ್ ತೆಗೆದು ಕೊಟ್ಟರು. ಜಾಕಿರ್ ಅವರ ಅದ್ಭುತ ಕ್ಯಾಚ್ ಅನ್ನು ಯಶಸ್ವಿ ಜೈಸ್ವಾಲ್ ಹಿಡಿದರು.
ಇದಾದ ಬಳಿಕ ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಮ್ಯಾಜಿಕ್ ಶುರು ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ಪಡೆಯುವಲ್ಲಿ ಎಡುವಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತಬವಾಗಿ ಬೌಲಿಂಗ್ ಪ್ರದರ್ಶಿಸಿದರು. ಶದ್ಮನ್ ಇಸ್ಲಾಂ (35), ಮೊಮಿನುಲ್ ಹಕ್ (15), ಮುಶ್ಫಿಕರ್ ರಹೀಮ್ (13) ವಿಕೆಟ್ ಪಡೆಯುವ ಮೂಲಕ ಭಾರತ ಪಂದ್ಯದ ಮೇಲೆ ಹಿಡಿದ ಸಾಧಿಸಿಲು ನೆರವಾದರು.
ಇದಕ್ಕೂ ಮುನ್ನ ಟೀಮ್ ಇಂಡಿಯಾ ವಿಕೆಟ್‌ಕೀಪರ್- ಬ್ಯಾಟರ್ ರಿಷಭ್ ಪಂತ್ ಭರ್ಜರಿ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದರು. ಮತ್ತೊಂದೆಡೆ ಶುಭಮನ್ ಗಿಲ್ ಕೂಡ ಶತಕ ಹೊಡೆದು ಮಿಂಚಿದರು. ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನವಾದ ಶನಿವಾರ, ಭಾರತ ತಂಡವು ಬಾಂಗ್ಲಾದೇಶದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಶುಕ್ರವಾರ ಮೂರು ವಿಕೆಟ್‌ಗೆ 81 ರನ್‌ಗಳಿಗೆ ಆಟವನ್ನು ನಿಲ್ಲಿಸಲಾಗಿತ್ತು. ಇಲ್ಲಿಂದ ಮುಂದೆ ಶನಿವಾರ ಆಡಿದ ಭಾರತ ನಾಲ್ಕು ವಿಕೆಟ್‌ಗೆ 287 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಅನ್ನು ಭಾರತ ಡಿಕ್ಲೇರ್ ಮಾಡಿಕೊಂಡಿತು.
ಪಂತ್ 129 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ ನೆರೆವಿನಿಂದ 109 ರನ್ ಹೊಡೆದು ಔಟಾದರೆ, ಶುಭಮನ್ ಗಿಲ್ 176 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಮೂಲಕ ಅಜೇಯ 119 ರನ್ ಗಳಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಇವರಿಬ್ಬರೂ 4ನೇ ವಿಕೆಟ್‌ಗೆ 217 ಎಸೆತಗಳಲ್ಲಿ 167 ರನ್ ಸೇರಿಸಿದರು. ವಿರಾಟ್ ಕೊಹ್ಲಿ (17) ರನ್, ಯಶಸ್ವಿ ಜೈಸ್ವಾಲ್ (10) ಮತ್ತು ರೋಹಿತ್ ಶರ್ಮಾ (5) ಬೇಗನೆ ಔಟಾದರು. ಕೆಎಲ್ ರಾಹುಲ್ 22 ರನ್ ಗಳಿಸಿ ಅಜೇಯರಾಗಿ ಉಳಿದರು.