Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಿಲ್‌ ಗಾಯದ ಬಗ್ಗೆ ಬಿಸಿಸಿಐ ಅಪ್‌ಡೇಟ್‌: ಟೀಮ್ ಇಂಡಿಯಾಕ್ಕೆ ಟೆನ್ಷನ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಟೆಸ್ಟ್‌ ಪಂದ್ಯಗಳ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶುಭಮನ್‌ ಗಿಲ್‌ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಲು ಬಂದರು. ಆದರೆ ಇವರು ಕೇವಲ ಮೂರು ಎಸೆತಗಳನ್ನು ಎದುರಿಸಿದರು. ಈ ವೇಳೆ ಇವರಿಗೆ ಕತ್ತಿಗೆ ಗಾಯ ಕಾಣಿಸಿಕೊಂಡಿತು. ಹೀಗಾಗಿ ಇವರು ಮೈದಾನದಿಂದ ಹೊರ ನಡೆದರು. ಅಲ್ಲದೆ ಟೀಮ್ ಇಂಡಿಯಾ ಪರ ಗಿಲ್‌ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸಹ ಮಾಡಲಿಲ್ಲ.

ಶುಭಮನ್‌ ಗಿಲ್‌ ಗಾಯದ ಬಗ್ಗೆ ಬಿಸಿಸಿಐ ಬಿಗ್ ಅಪ್‌ಡೇಟ್‌ ನೀಡಿದೆ. ಟೀಮ್‌ ಇಂಡಿಯಾದ ನಾಯಕ ಶುಭಮನ್‌ ಗಿಲ್‌ ಇನ್ನು ಮುಂದೆ ಕೋಲ್ಕತ್ತಾ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಗಿಲ್‌ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಗಿಲ್ ಇನ್ನು ಮುಂದೆ ಮೊದಲ ಟೆಸ್ಟ್‌ನಲ್ಲಿ ಭಾಗವಹಿಸುವುದಿಲ್ಲ. ಗಾಯದಿಂದ ಹೊರ ಬಂದ ಬಳಿಕ ಶುಭಮನ್‌ ಗಿಲ್‌ ನೇರವಾಗಿ ಮೈದಾನದಿಂದ ಹೊರ ಬಂದು ಆಸ್ಪತ್ರೆಗೆ ದಾಖಲಾದರು.

Shubman Gill Ruled Out of Kolkata Test with Neck Injury BCCI Monitoring Status

ಟೀಮ್ ಇಂಡಿಯಾದ ಪರ ಮೊದಲ ಇನಿಂಗ್ಸ್‌ನಲ್ಲಿ ಶುಭಮನ್‌ ಗಿಲ್‌ ಬ್ಯಾಟಿಂಗ್ ಮಾಡಲು ಬಾರಲಿಲ್ಲ. ಇದರಿಂದ ಟೀಮ್ ಇಂಡಿಯಾಕ್ಕೆ ಪೆಟ್ಟು ಬಿದ್ದಿದೆ. ಇವರು ಮೈದಾನಕ್ಕೆ ಇಳಿಯದೇ ಇದ್ದಿದ್ದರಿಂದ ಭಾರತ 189 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದಗ ಆಲೌಟ್‌ ಆಯಿತು. ಕಾರಣ ಶುಭಮನ್‌ ಗಿಲ್ ಗಾಯದ ಕಾರಣದಿಂದ ಮೈದಾನಕ್ಕೆ ಇಳಿಯಲಿಲ್ಲ. ಇವರು ಭಾರತದ ಪರ ಎರಡನೇ ಟೆಸ್ಟ್‌ನಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ. ಶುಭಮನ್‌ ಗಿಲ್ ಪ್ರಸಕ್ತ ವರ್ಷ ಅಮೋಘ ಫಾರ್ಮ್‌ನಲ್ಲಿದ್ದು ರನ್‌ಗಳನ್ನು ಕಲೆ ಹಾಕಿ ಮಿಂಚಿದ್ದರು.

Story first published: Sunday, November 16, 2025, 10:17 [IST]
Other articles published on Nov 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+