ಮಿಂಚಿದ ಗಿಲ್, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ' ಉತ್ತಮ ಮೊತ್ತ

ಮೈಸೂರು, ಸೆಪ್ಟೆಂಬರ್ 17: ನಾಯಕ ಶುಬ್‌ಮಾನ್ ಗಿಲ್, ಕರುಣ್ ನಾಯರ್ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ' ತಂಡ ಉತ್ತಮ ರನ್ ಕಲೆ ಹಾಕಿದೆ. ಮಂಗಳವಾರ (ಸೆಪ್ಟೆಂಬರ್ 17) ಮೊದಲ ದಿನದಾಟದ ಅಂತ್ಯದ ವೇಳೆ ಭಾರತ 74 ಓವರ್‌ಗೆ 3 ವಿಕೆಟ್ ಕಳೆದು 233 ರನ್ ಗಳಿಸಿತ್ತು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಈ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 'ಎ' ತಂಡದಿಂದ ಅಭಿಮನ್ಯು ಈಶ್ವರನ್ 5, ಶುಬ್‌ಮಾನ್ ಗಿಲ್ 92, ಪ್ರಿಯಾಂಕ್ ಪಾಂಚಲ್ 6 ರನ್ ಗಳಿಸಿ ಔಟಾಗಿದ್ದಾರೆ.
ಕರುಣ್ ನಾಯರ್ 78, ವೃದ್ಧಿಮಾನ್ ಸಹಾ 32 ರನ್‌ಗಳಿಸಿ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ 'ಎ' ತಂಡದ ಲುಂಗಿ ಸಾನಿ ಎನ್‌ಗಿಡಿ, ವಿಯಾನ್ ಮುಲ್ಡರ್ ಮತ್ತು ಲೂತೊ ಸಿಪಂಮ್ಲಾ ತಲಾ 1 ವಿಕೆಟ್ ಪಡೆದಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಭಾರತ ದೊಡ್ಡ ರನ್ ಕಲೆ ಹಾಕುವ ನಿರೀಕ್ಷೆಯಿದೆ.
ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಭಾರತ 'ಎ' ತಂಡ 7 ವಿಕೆಟ್ ಗೆಲುವನ್ನಾಚರಿಸಿತ್ತು. ಅದಕ್ಕೂ ಮುನ್ನ ಐದು ಪಂದ್ಯಗಳ ಏಕದಿನ ಸರಣಿಯನ್ನೂ ಭಾರತ 4-1ರಿಂದ ಜಯಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications