ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸದ ವೇಳೆ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಯುವ ಆಟಗಾರ ಶುಭ್‌ಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕತ್ವವನ್ನು ಶುಭಮನ್ ಗಿಲ್ ತುಂಬಿದ್ದಾರೆ. ಈ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಕ್ಯಾಂಪ್‌ನಿಂದ ಮತ್ತೊಂದು ಗುಡ್ ನ್ಯೂಸ್ ಹೊರ ಬಂದಿದೆ. ಈ ಮೂಲಕ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಭರ್ಜರಿ ತಯಾರಿ ನಡೆಸಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಡಿತು. ಈ ವೇಳೆ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಈ ವೇಳೆ ಬಿಸಿಸಿಐಯಿಂದ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆಗಳನ್ನು ಮಾಡಿತು. ಬದಲಾವಣೆಯ ಸಮಯದಲ್ಲಿ ಬಿಸಿಸಿಐ ದಿಲೀಪ್ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ತೆಗೆದುಹಾಕಿತ್ತು. ಈಗ ಬಿಸಿಸಿಐ ಈ ಸ್ಥಾನಗಳಿಗೆ ಸೂಕ್ತ ಆಯ್ಕೆ ಕಾಣದ ಕಾರಣ ಮತ್ತೆ ಈ ಜವಾಬ್ದಾರಿಯನ್ನು ದಿಲೀಪ್ ಅವರಿಗೆ ಹಸ್ತಾಂತರಿಸಲಾಗಿದೆ.

ಟಿ ದಿಲೀಪ್ ಅವರು ಟೀಮ್ ಇಂಡಿಯಾದ ಜೊತೆ ಕಳೆದ ಮೂರು ವರ್ಷಗಳಿಂದ ಇದ್ದಾರೆ. ಇವರೊಂದಿಗೆ ಟೀಮ್ ಇಂಡಿಯಾದ ಸಮನ್ವಯ ಚೆನ್ನಾಗಿದೆ. ಇವರ ಅನುಭವವನ್ನು ಪರಿಗಣಿಸಿ ಬಿಸಿಸಿಐ ಮತ್ತೆ ಇವರಿಗೆ ಮತ್ತೆ ಮಣೆ ಹಾಕಿದೆ. ಇವರ ಅನುಭವ ಇಂಗ್ಲೆಂಡ್ ಪ್ರವಾಸದಲ್ಲಿ ತಂಡಕ್ಕೆ ಅನುಕೂಲವಾಗಿದೆ. ಈ ಹುದ್ದೆಗೆ ಬಿಸಿಸಿಐ ಈ ಮೊದಲು ವಿದೇಶಿಯರನ್ನು ಕರೆತರಲು ಪ್ರಯತ್ನಿಸುತ್ತಿತ್ತು. ಆದರೆ ಸಮಯದ ಕೊರತೆಯಿಂದಾಗಿ ಇದು ಸಾಧ್ಯವೇ ಆಗಲಿಲ್ಲ.
ದಿಲೀಪ್ ಅವರ ಕಾರ್ಯವಿಧಾನ ಉತ್ತಮವಾಗಿತ್ತು. ದಿಲೀಪ್ ಪ್ರತಿ ಪಂದ್ಯದ ಬಳಿಕ ಉತ್ತಮ ಫಿಲ್ಡರ್ ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡುತ್ತಿದ್ದರು. ಈ ವೇಳೆ ಹಲವು ಸೆಲಬ್ರಿಟಿ ಕ್ರಿಕೆಟ್ ಆಟಗಾರರನ್ನು ಕರೆದು ಆಟಗಾರರಿಗೆ ಪದಕಗಳನ್ನು ನೀಡುತ್ತಿದ್ದರು. ಈ ಕ್ರಮ ಜನ ಮನ್ನಣೆ ಗಳಿಸಿತ್ತು.
ಭಾರತ "ಎ" ತಂಡಕ್ಕೆ ಹೆಡ್ ಮಾಸ್ಟರ್ ಆಗಿ ರಿಷಿಕೇಷ್ ಕಾನಿಟ್ಕರ್ ಆಯ್ಕೆಯಾಗಿದ್ದಾರೆ. ರಯಾನ್ ಟೆನ್ ಡೋಸ್ಚೇಟ್ (ಬ್ಯಾಟಿಂಗ್ ಕೋಚ್) ಮತ್ತು ಟ್ರಾಯ್ ಕೂಲಿ (ಬೌಲಿಂಗ್ ಕೋಚ್) ಅವರೊಂದಿಗೆ ಕೆಲಸ ಮಾಡುತ್ತಾರೆ.

ಭಾರತ ಎ ತಂಡ, ಇಂಗ್ಲೆಂಡ್ ಪ್ರವಾಸದಲ್ಲಿ ನಾಲ್ಕು ದಿನಗಳ ಪಂದ್ಯಗಳ ಸರಣಿ ಆಡಲಿದೆ. ಮೊದಲ ಪಂದ್ಯ ಮೇ 30 ರಂದು ವಿರುದ್ಧ ಆಡಲಿದೆ. ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಜೂನ್ 6 ರಂದು ನಡೆಯಲಿದೆ. ಈ ವೇಳೆ ಹಲವು ಸ್ಟಾರ್ ಆಟಗಾರರು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಾರಣ ಜೂನ್ 3 ರಂದು ಐಪಿಎಲ್ ಫೈನಲ್ ನಡೆಯಲಿದ್ದು, ಈ ವೇಳೆ ಸ್ಟಾರ್ ಆಟಗಾರರು ಹಲವು ಐಪಿಎಲ್ ಫ್ರಾಂಚೈಸಿಗಳಲ್ಲಿ ಸ್ಥಾನ ಪಡೆದಿದ್ದಾರೆ.