ಈ ತಂಡದ ನಾಯಕರಾಗಿ ಕಣಕ್ಕೆ ಇಳಿಯಲಿದ್ದಾರೆ ಶುಭಮನ್ ಗಿಲ್
ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿ ಸದ್ಯ ವಿಶ್ರಾಂತಿಯಲ್ಲಿದೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. 2025-26ರ ದುಲೀಪ್ ಟ್ರೋಫಿಯಲ್ಲಿ ಗಿಲ್ ಅಖಾಡ ಪ್ರವೇಶಿಸಲಿದ್ದಾರೆ. ಇವರಿಗೆ ಉತ್ತರ ವಲಯ ತಂಡದ ನಾಯಕತ್ವವನ್ನು ನೀಡಲಾಗಿದೆ. ಈ ಫಸ್ಟ್ ಕ್ಲಾಸ್ ಟೂರ್ನಿ ಆಗಸ್ಟ್ 28 ರಿಂದ ಸೆ.15ರ ವರೆಗೆ ನಡೆಯಲಿದೆ.
ಶುಭಮನ್ ಗಿಲ್ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡು ಅಬ್ಬರಿಸಿದ್ದಾರೆ. ಇವರು ತಂಡವನ್ನು ಮುನ್ನಡೆಸಿದ್ದು ಇಂಗ್ಲೆಂಡ್ ಪ್ರವಾಸದಲ್ಲಿ ಆಂಡರ್ಸನ್ ತೆಂಡುಲ್ಕರ್ ಸರಣಿಯಲ್ಲಿ ಸಮಬಲ ಸಾಧಿಸಯವಲ್ಲಿ ಯಶಸ್ವಿಯಾಗಿದೆ. ಈಗ ಶುಭಮನ್ ಗಿಲ್ ಮತ್ತೊಂದು ಸವಾಲಿಗೆ ಸಿದ್ಧರಾಗುದ್ದಾರೆ. ಈ ವೇಳೆ ಗಿಲ್ ದುಲೀಪ್ ಟ್ರೋಫಿಯಲ್ಲಿ 17 ಬಾರಿ ಚಾಂಪಿಯನ್ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ಋತುವಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಭಾರತ ಎ, ಭಾರತ ಬಿ, ಭಾರತ ಸಿ ಮತ್ತು ಭಾರತ ಡಿ ತಂಡಗಳು ಕಣಕ್ಕೆ ಇಳಿದಿದ್ದವು. ಆದರೆ ಈ ಬಾರಿ ಈ ತಂಡಗಳನ್ನು ವಲಯವಾರು ವಿಂಗಡಿಸಲಾಗಿದೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದೂ ಪಂದ್ಯವನ್ನು ಆಡದ ಅರ್ಷದೀಪ್ ಸಿಂಗ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನ್ಶುಲ್ ಕಾಂಬೋಜ್ ಮತ್ತು ಹರ್ಷಿತ್ ರಾಣಾ ಕೂಡ ಈ ತಂಡದ ಭಾಗವಾಗಿದ್ದಾರೆ.
ಇಂಗ್ಲೆಂಡ್‌ನಲ್ಲಿ ರನ್ ಮಹಲ್
ಉತ್ತರ ವಲಯ ತಂಡವು ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಪೂರ್ವ ವಲಯವನ್ನು ಎದುರಿಸಲಿದೆ. ಪೂರ್ವ ವಲಯವನ್ನು ಇಶಾನ್ ಕಿಶನ್ ಮುನ್ನಡೆಸಲಿದ್ದು, ಈ ಪಂದ್ಯ ಆಗಸ್ಟ್ 28 ರಂದು ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಗಿಲ್ ಉತ್ತರ ವಲಯವನ್ನು ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್ 754 ರನ್ ಬಾರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.

ದುಲೀಪ್ ಟ್ರೋಫಿಗಾಗಿ ಉತ್ತರ ವಲಯ ತಂಡ: ಶುಭಮನ್ ಗಿಲ್ (ನಾಯಕ), ಶುಭಂ ಖಜೂರಿಯಾ, ಅಂಕಿತ್ ಕುಮಾರ್ (ಉಪನಾಯಕ), ಆಯುಷ್ ಬಡೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಿಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್ವೀರ್ ಸಿಂಗ್ ಚರಕ್, ಅರ್ಷದೀಪ್ ಕಂಬಿಯಾ, ಹರ್ಷಿತ್‌ಬಿಯಾ ಸಿಂಗ್, ಹರ್ಷಿತ್‌ಬಿಯಾ ಸಿಂಗ್ ವಾಧವನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications