Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಿಲ್‌ಗೆ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಡೌಟ್‌: ಇಶಾನ್‌ಗೆ ಸ್ಥಾನ ಸಾಧ್ಯತೆ

ಟೀಮ್ ಇಂಡಿಯಾ ಸದ್ಯ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಗೆ ತಯಾರಿ ನಡೆಸಿದೆ. ಸೆಪ್ಟೆಂಬರ್ 19 ರಿಂದ ನಡೆಯಲಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ, ಪ್ರವಾಸಿ ಬಾಂಗ್ಲಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಒಂದು ಸಿಕ್ಕಿದೆ.

ಈ ಸರಣಿಗೆ ಟೀಮ್ ಇಂಡಿಯಾದ ಫ್ಯೂಚರ್ ಸೂಪರ್ ಸ್ಟಾರ್ ಎಂದೇ ಕರಿಸಿಕೊಳ್ಳುವ ಶುಭಮನ್‌ ಗಿಲ್‌ ತಂಡ ಸೇರುವುದು ಡೌಟ್‌. ಹಾಗಿದ್ದರೆ ಬಾಂಗ್ಲಾ ವಿರುದ್ಧ ಟಿ20 ಸರಣಿಯನ್ನು ಗಿಲ್ ಮಿಸ್ ಮಾಡಿಕೊಳ್ಳಲು ಕಾರಣ ಏನು ಇಲ್ಲಿದೆ ನೋಡಿ.

Shubman Gill to Rest for Bangladesh T20 Series Ishan Kishan Expected to Replace Him

ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಿಂದ ಕೈ ಬಿಡುತ್ತಿಲ್ಲ. ಆದರೆ ಟಿ20 ವಿರುದ್ಧ ಸರಣಿಯ ವೇಳೆ ಗಿಲ್‌ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಶುಭಮನ್ ಗಿಲ್‌ಗೆ ವಿಶ್ರಾಂತಿ ನೀಡಲಾಗಿದೆ.

ಬಾಂಗ್ಲಾ ವಿರುದ್ಧದ ಟಿ20 ಸರಣಿಯ ತಂಡದಿಂದ ಗಿಲ್ ಅವರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟಿ 20 ಸರಣಿಯ ಪಂದ್ಯಗಳು ಅಕ್ಟೋಬರ್ 7 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಸರಣಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಸಿಸಿಐ ಚಿಂತನೆ ನಡೆಸಿದೆ.

ಶುಭಮನ್‌ ಗಿಲ್‌ ಬದಲಿಗೆ ಯಾರು?

ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಲ್ಲಿ ಶುಭಮನ್‌ ಗಿಲ್‌ ತಂಡ ಸೇರುವುದು ಡೌಟ್‌. ಹೀಗಾಗಿ ಇವರ ಸ್ಥಾನದಲ್ಲಿ ದುಲೀಪ್ ಟ್ರೋಫಿಯಲ್ಲಿ ಮಿಂಚು ಹರಿಸುತ್ತಿರುವ ಜಾರ್ಖಂಡ್‌ ಪ್ಲೇಯರ್‌ಗೆ ಸ್ಥಾನ ಸಿಬಹುದು. ಇಶಾನ್‌ ಕಿಶನ್‌ ದುಲೀಪ್ ಟ್ರೋಫಿಯಲ್ಲಿ ಸತತ ಸ್ಥಿರ ಪ್ರದರ್ಶನವನ್ನು ನೀಡಿ ಆಯ್ಕೆದಾರರ ಮನ ಗೆದ್ದಿದ್ದಾರೆ. ಇವರು ಎರಡನೇ ಸುತ್ತಿನ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.

Shubman Gill to Rest for Bangladesh T20 Series Ishan Kishan Expected to Replace Him

ಸುಮಾರು 10 ತಿಂಗಳಿನಿಂದ ಇಶಾನ್‌ ಕಿಶನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಇವರು ವೈಯಕ್ತಿಕ ಕಾರಣಗಳನ್ನು ತಿಳಿಸಿ, ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ವೇಳೆ ತಂಡದಿಂದ ದೂರ ಸರೆದಿದ್ದರು. ಒಂದು ವೇಳೆ ಶುಭಮನ್‌ ಗಿಲ್‌ ಟಿ20 ಸರಣಿಯಿಂದ ದೂರ ಉಳಿದರೆ, ಇಶಾನ್‌ ಕಿಶನ್‌ ಮತ್ತೊಮ್ಮೆ ಬ್ಲ್ಯೂ ಜೆರ್ಸಿ ಧರಿಸಬಹುದು.

Story first published: Monday, September 16, 2024, 16:52 [IST]
Other articles published on Sep 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+