Shubman Gill: ಶುಭ್‌ಮನ್ ಗಿಲ್‌ಗೆ ಅಂಪೈರ್ ಎಚ್ಚರಿಕೆ: ಏಕೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡವುಣ ಮೊದಲ ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡಿತು. ಈ ವೇಳೆ ನಾಯಕ ಸ್ಟೀವನ್ ಸ್ಮಿತ್ ಅವರ ತೀರ್ಮಾನವನ್ನು ಆರಂಭಿಕರು ಸಮರ್ಥಿಸಿಕೊಳ್ಳುವಲ್ಲಿ ಸಫಲರಾದರು. ಈ ವೇಳೆ ಟೀಮ್ ಇಂಡಿಯಾಕ್ಕೆ ಮತ್ತೊಮ್ಮೆ ಟ್ರಾವಿಸ್ ಹೆಡ್ ತಲೆ ನೋವಾಗುವ ಸೂಚನೆ ಕಂಡು ಬಂದಿತ್ತು. ಆದರೆ ಈ ನೋವು ಹೆಚ್ಚು ಹೊತ್ತು ತಂಡಕ್ಕೆ ಕಾಟ ನೀಡಲಿಲ್ಲ.
ಟ್ರಾವಿಸ್ ಹೆಡ್ ಆರಂಭದಲ್ಲಿ ತಮ್ಮ ನೈಜ್ಯ ಆಟವನ್ನು ಆಡಿದರು. ಈ ವೇಳೆ ಕುಲ್‌ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ತಲಾ ಒಂದು ಸಿಕ್ಸರ್ ಬಾರಿಸಿ ಒತ್ತಡವನ್ನು ಹೇರುವ ತಂತ್ರವನ್ನು ಅನುಸರಿಸಿದರು. ಆದರೆ ಈ ತಂತ್ರ ಹೆಚ್ಚು ಹೊತ್ತು ನಡೆಯಲಿಲ್ಲ. ಕಾರಣ ಟೀಮ್ ಇಂಡಿಯಾದ ಬತ್ತಳಿಕೆಯಲ್ಲಿದ್ದ ಮಿಸ್ಟ್ರಿ ಸ್ಪಿನ್ ಬೌಲರ್ ಖ್ಯಾತಿಯ ವರುಣ್ ಚಕ್ರವರ್ತಿ ಅಮೋಘ ದಾಳಿ ನಡೆಸಿ ಟ್ರಾವಿಸ್ ಹೆಡ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ವಾರ್ನಿಂಗ್ ಏಕೆ?
ವರುಣ್ ಅವರ ಎಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ಟ್ರಾವಿಸ್ ಹೆಡ್ ಬಿಗ್ ಹಿಟ್‌ಗೆ ಮುಂದಾದರು. ಈ ವೇಳೆ ಲಾಂಗ್ ಆನ್‌ನಲ್ಲಿದ್ದ ಶುಭಮನ್ ಗಿಲ್ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಕಂಪ್ಲೀಟ್ ಮಾಡ್ತಾ ಇದ್ದಂತೆ ಮೈದಾನದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಆಗ ಅಂಪೈರ್ ಶುಭಮನ್ ಗಿಲ್ ಅವರನ್ನು ಕರೆದು ವಾರ್ನಿಂಗ್ ನೀಡಿದರು. ಅಸಲಿಗೆ ಹೀಗೆ ವಾರ್ನಿಂಗ್ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿದ್ದವು. ಮರು ಪ್ರಸಾರದ ವೇಳೆ ಆದ ತಪ್ಪಿನ ಬಗ್ಗೆ ಅಭಿಮಾನಿಗಳ ಅರಿವಿಗೆ ಬಂದಿತು.
ಟ್ರಾವಿಸ್ ಹೆಡ್ ಅವರು ನೀಡಿದ್ದ ಕ್ಯಾಚ್ ಪಡೆದ ಗಿಲ್, ತಕ್ಷಣವೇ ಗಾಳಿಯಲ್ಲಿ ತೂರಿ ಸಂಭ್ರಮಿಸಿದರು. ಗಿಲ್ ಅವರ ಈ ನಡೆಯನ್ನು ಕಂಡು ಅಂಪೈರ್ ಸಿಟ್ಟಾದರು. ಹೆಡ್ ಔಟ್ ಆಗಿ ಪೆವಿಲಿಯನ್‌ಗೆ ಹೋಗುತ್ತಿದ್ದಂತೆ ಅಂಪೈರ್ ಗಿಲ್ ಅವರನ್ನು ಕರೆದು ಎಚ್ಚರಿಕೆ ನೀಡಿದರು. ಗಿಲ್ ಕ್ಯಾಚ್‌ನ್ನು ಪಡೆದು ಕೈಯಲ್ಲಿ ಹೆಚ್ಚಿನ ಹೊತ್ತು ಹಿಡಿದುಕೊಳ್ಳಲಿಲ್ಲ ಹೀಗಾಗಿ ಅಂಪೈರ್ ಗಿಲ್‌ಗೆ ಎಚ್ಚರಿಕೆ ನೀಡಿದರು.

ಚೆಂಡನ್ನು ಹಿಡಿದ ನಂತರ ಕೆಲವು ಕ್ಷಣಗಳ ಕಾಲ ಅದನ್ನು ಕೈಯಲ್ಲಿ ಇಟ್ಟುಕೊಳ್ಳಲು ಗಿಲ್‌ಗೆ ಹೇಳಲಾಯಿತು. ಗಿಲ್ ಅಂಪೈರ್ ಸಲಹೆಯನ್ನು ಸ್ವೀಕರಿಸಿದರು ಮತ್ತು ವಿಷಯ ಅಲ್ಲಿಗೆ ಮುಗಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications