For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್

Shubman Gill Youngest Indian openers to score 50+ outside Asia

ಸಿಡ್ನಿ: ಭಾರತದ ಯುವ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಅಪರೂಪದ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಿಲ್‌ ಈ ವಿಶೇಷ ಸಾಧನೆ ತೋರಿದ್ದಾರೆ. ಅರ್ಧ ಶತಕ ಬಾರಿಸುವ ಮೂಲಕ ಗಿಲ್ ದಾಖಲೆ ಪಟ್ಟಿ ಸೇರಿದ್ದಾರೆ. ಈ ದಾಖಲೆ ಕೆಲವೇ ಕೆಲವು ಭಾರತೀಯ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿದೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಬಂದಿದ್ದ ಶುಬ್ಮನ್ ಗಿಲ್ 101 ಎಸೆತಗಳಲ್ಲಿ ಭರ್ತಿ 50 ರನ್ ಬಾರಿಸಿದರು. ಇದರೊಂದಿಗೆ ಗಿಲ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿದೆ. ಏಷ್ಯಾಗಿಂತ ಹೊರಗೆ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಆರಂಭಿಕನಾಗಿ ಬಂದು 50+ ಸ್ಕೋರ್‌ ಗಳಿಸಿದ ದಾಖಲೆಗೆ ಗಿಲ್ ಪಾತ್ರರಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ, 3ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
48442

ಏಷ್ಯಾ ಖಂಡದ ಹೊರತಾಗಿ ಬೇರೆ ದೇಶಗಳಲ್ಲಿ ಭಾರತೀಯ ಅತೀ ಕಿರಿಯ ಆರಂಭಿಕ ಬ್ಯಾಟ್ಸ್‌ಮನ್‌ ಒಬ್ಬ 50+ ರನ್ ಗಳಿಸಿದ ದಾಖಲೆಗಳ ಪಟ್ಟಿ ಕೆಳಗಿದೆ.

ಗಿಲ್ ಹೆಸರಿಗೆ ದಾಖಲೆ

ಗಿಲ್ ಹೆಸರಿಗೆ ದಾಖಲೆ

ರೋಹಿತ್ ಶರ್ಮಾ ಅವರ ಜೊತೆಗೆ ಎರಡನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶುಬ್ಮನ್ ಗಿಲ್, 50 ರನ್ ಬಾರಿಸಿ 32.1ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಓವರ್‌ನಲ್ಲಿ ಕ್ಯಾಮರಾನ್ ಗ್ರೀನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಅಷ್ಟರಲ್ಲಾಗಲೇ ಗಿಲ್‌ ಹೆಸರಿನಲ್ಲಿ ಏಷ್ಯಾ ಖಂಡದ ಹೊರತಾಗಿ ಬೇರೆ ದೇಶಗಳಲ್ಲಿ ಭಾರತೀಯ ಅತೀ ಕಿರಿಯ ಆರಂಭಿಕ ಬ್ಯಾಟ್ಸ್‌ಮನ್‌ ಒಬ್ಬ 50+ ರನ್ ಗಳಿಸಿದ ದಾಖಲೆ ಸೃಷ್ಠಿಯಾಗಿತ್ತು.

ರವಿ ಶಾಸ್ತ್ರಿ ಮೊದಲಿಗ

ರವಿ ಶಾಸ್ತ್ರಿ ಮೊದಲಿಗ

ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಆಡಿದ ಅತೀ ಕಿರಿಯ ಭಾರತೀಯ ಬ್ಯಾಟ್ಸ್‌ಮನ್‌ ಒಬ್ಬ 50ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಪಟ್ಟಿಯಲ್ಲಿ ಈಗ ಭಾರತದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಮೊದಲಿಗ. 20 ವರ್ಷ 44 ದಿನ ಪ್ರಾಯದವರಾಗಿದ್ದ ಶಾಸ್ತ್ರಿ 1982ರಲ್ಲಿ ಇಂಗ್ಲೆಂಡ್ ವಿರುದ್ಧ 50+ ರನ್ ಗಳಿಸಿದ್ದರು. ಹೀಗಾಗಿ ಏಷ್ಯಾ ಹೊರತಾಗಿ ಬೇರೆ ದೇಶಗಳಿಗೆ ಪ್ರವಾಸ ಹೋಗಿದ್ದಾಗ ಭಾರತೀಯ ಕಿರಿಯ ಬ್ಯಾಟ್ಸ್‌ಮನ್‌ ಒಬ್ಬ 50+ ರನ್ ಬಾರಿಸಿದವರ ಪಟ್ಟಿಯಲ್ಲಿ ಶಾಸ್ತ್ರಿ ಮೊದಲ ಸ್ಥಾನದಲ್ಲಿದ್ದಾರೆ.

ಭಾರತೀಯ ಅತೀ ಕಿರಿಯ ಆರಂಭಿಕ ಬ್ಯಾಟ್ಸ್‌ಮನ್

ಭಾರತೀಯ ಅತೀ ಕಿರಿಯ ಆರಂಭಿಕ ಬ್ಯಾಟ್ಸ್‌ಮನ್

(ಏಷ್ಯಾ ಖಂಡದ ಹೊರತಾಗಿ ಬೇರೆ ದೇಶಗಳಲ್ಲಿ ಭಾರತೀಯ ಅತೀ ಕಿರಿಯ ಆರಂಭಿಕ ಬ್ಯಾಟ್ಸ್‌ಮನ್‌ ಒಬ್ಬ 50+ ರನ್ ಗಳಿಸಿದ ದಾಖಲೆಗಳ ಪಟ್ಟಿ)
* ರವಿ ಶಾಸ್ತ್ರಿ, 20 ವರ್ಷ 44 ದಿನ, ಇಂಗ್ಲೆಂಡ್‌ನಲ್ಲಿ 1982.
* ಮಾಧವ್ ಆಪ್ಟೆ, 20 ವರ್ಷ, 108 ದಿನ, ವೆಸ್ಟ್ ಇಂಡೀಸ್‌ನಲ್ಲಿ 1952/53 (ಇವರು ಒಟ್ಟಿಗೆ 4 ಸಾರಿ ಈ ಸಾಧನೆ ಮಾಡಿದ್ದರು).
* ಪೃಥ್ವಿ ಶಾ, 20 ವರ್ಷ 112 ದಿನ, ನ್ಯೂಜಿಲೆಂಡ್, 2019/20
* ಶುಬ್ಮನ್ ಗಿಲ್, 21 ವರ್ಷ 122 ದಿನ, ಆಸ್ಟ್ರೇಲಿಯಾದಲ್ಲಿ 2020/21.

Story first published: Friday, January 8, 2021, 18:56 [IST]
Other articles published on Jan 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+