IND vs NZ Test: ಗಿಲ್ 90, ಪಂತ್ 60, ಭಾರತ ಮೊದಲ ಇನಿಂಗ್ಸ್‌ನಲ್ಲಿ 263, ರೋಹಿತ್ ಪಡೆಗೆ ಮುನ್ನಡೆ
ಭರವಸೆಯ ಆಟಗಾರ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ಮೂರನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳಿಂದ ಭಾರತ ಆಟವನ್ನು ಮುಂದುವರಿಸಿ 262 ರನ್‌ಗಳಿಗೆ ಆಲೌಟ್ ಆಯಿತು.

ಐದನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರ ಭರ್ಜರಿ ಆಟದ ಫಲವಾಗಿ ಟೀಮ್ ಇಂಡಿಯಾ ಇನಿಂಗ್ಸ್ ಮುನ್ನಡೆಯ ಕನಸನ್ನು ಕಂಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ನ್ಯೂಜಿಲೆಂಡ್ ಬೌಲರ್ ವಿಫಲರಾದರು. ಮುಂಬೈನ ಪಿಚ್ ಮರ್ಮ ಅರಿತು ಬ್ಯಾಟ್ ಮಾಡಿದ ಪಂತ್ ಹಾಗೂ ಗಿಲ್ ಜೊತೆಗೂಡಿ 114 ಎಸೆತಗಳಲ್ಲಿ 96 ರನ್ ಸೇರಿಸಿತು.
ರಿಷಭ್ ಪಂತ್ 60
ಭರವಸೆಯ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 59 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಶುಭಮನ್ ಗಿಲ್ 90
ಭಾರತದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್ ಅವರು ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಬ್ಯಾಟಿಂಗ್ ಕಲೆಯನ್ನು ಅನಾವರಣ ಮಾಡಿದರು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 90 ರನ್ ಸಿಡಿಸಿ ಔಟ್ ಆದರು.

ಕೆಳ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 38 ರನ್ ಸಿಡಿಸಿ ಔಟ್ ಆದರು. ರವೀಂದ್ರ ಜಡೇಜಾ 14 ರನ್ ಮಾಡಿದರು.
ಅಜಾಜ್ 5 ವಿಕೆಟ್
ನ್ಯೂಜಿಲೆಂಡ್ ಪರ ಅಜಾಜ್ ಪಟೇಲ್ ಕ್ಲಾಸಿಕ್ ಬೌಲಿಂಗ್ ಪ್ರದರ್ಶನ ನೀಡಿದರು. ಇವರು 103 ರನ್ ನೀಡಿ 5 ವಿಕೆಟ್ ಕಬಳಿಸಿದರು. ಉಳಿದಂತೆ ಮ್ಯಾಟ್ ಹ್ಯಾನ್ರಿ, ಗ್ಲೇನ್ ಫಿಲಿಪ್ಸ್, ಇಶ್ ಸೋದಿ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications