For Quick Alerts
ALLOW NOTIFICATIONS  
For Daily Alerts
 

Shubman Gill: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾಗೆ "ಶುಭ" ಸುದ್ದಿ: ಗಿಲ್ ಶತಕ

ಇನ್ನೇನು ಕೆಲವೇ ದಿನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಐಸಿಸಿ ಮೆಗಾ ಟೂರ್ನಿಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಭರ್ಜರಿ ಲಯಕ್ಕೆ ಮರಳಿದ್ದಾರೆ. ಕಟಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಶತಕ ಬಾರಿಸಿ ಅಬ್ಬರಿಸಿದ್ದರು. ಇನ್ನು ಅಹಮದಾಬಾದ್‌ನಲ್ಲಿ ಶುಭಮನ್‌ ಗಿಲ್‌ ಅಬ್ಬರಿಸಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್‌ ಗಿಲ್‌ ಶತಕ ಬಾರಿಸಿ ಆರ್ಭಟಿಸಿದ್ದಾರೆ.

ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ನಿರಾಸೆ ಅನುಭವಿಸಿದರು. ಆದರೆ ತಂಡದ ಉಪನಾಯಕ ಶುಭಮನ್‌ ಗಿಲ್‌ ಮನಮೋಹಕ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ತಮ್ಮ ಎರಡನೇ ತವರು ಎಂದೇ ಗುರುತಿಸಿಕೊಳ್ಳುವ ಮೋದಿ ಅಂಗಳದಲ್ಲಿ ಗಿಲ್‌ ಆರ್ಭಟ ನಡೆಸಿ ಎದುರಾಳಿಗಳನ್ನು ಕಾಡಿದರು.

Shubman Gill s Century Boosts Team India s Confidence Ahead of ICC Champions Trophy

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶುಭಮನ್‌ ಗಿಲ್‌, ಕಳೆದ ಎರಡು ಪಂದ್ಯಗಳಲ್ಲಿ ಸಾಧಿಸಲು ಅಸಾಧ್ಯವಾಗದನ್ನು ಮೂರನೇ ಪಂದ್ಯದಲ್ಲಿ ಮಾಡಿದರು. ಈ ಮೂಲಕ ಶುಭಮನ್‌ ಗಿಲ್‌ 7ನೇ ಶತಕ ಬಾರಿಸಿ ಸಂಭ್ರಮಿಸಿದರು. ತಮ್ಮ 50ನೇ ಏಕದಿನ ಪಂದ್ಯದಲ್ಲಿ ಸ್ಮರಣೀಯ ಇನಿಂಗ್ಸ್ ಕಟ್ಟಿದ ಶುಭಮನ್‌ ಗಿಲ್‌, ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮುನ್ನವೇ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಗಿಲ್ ಆರ್ಭಟ

ಶುಭಮನ್‌ ಗಿಲ್‌ ತಾವು ಎದುರಿಸಿದ 52 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ವೇಳೆ ಇವರ ಬ್ಯಾಟ್‌ನಿಂದ 9 ಬೌಂಡರಿ, ಒಂದು ಸಿಕ್ಸರ್‌ ಸೇರಿದೆಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ಶುಭಮನ್‌ ಗಿಲ್‌ 95 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ವೇಳೆ 14 ಬೌಂಡರಿ, 2 ಸಿಕ್ಸರ್‌ ಬಾರಿಸಿ ಮಿಂಚಿದರು.

ಟೀಮ್ ಇಂಡಿಯಾದ ಪರ ಆರಂಭಿಕರಾಗಿ ಆಡುವ ಗಿಲ್‌ ಅಹಮದಾಬಾದ್‌ ಅಂಗಳದಲ್ಲಿ ಕ್ಲಾಸಿಕ್‌ ಬ್ಯಾಟಿಂಗ್‌ ನಡೆಸಿದರು. ಗುಜರಾಟ್‌ ಟೈಟಾನ್ಸ್ ತಂಡದ ಪರ ಬ್ಯಾಟ್ ಮಾಡುವ ಗಿಲ್‌ ಅವರಿಗೆ ಇದು ತವರಿನ ಅಂಗಳ. ಮೈದಾನದಲ್ಲಿ ತಮ್ಮ ಭರ್ಜರಿ ಶಾಟ್‌ಗಳನ್ನು ಪ್ರಯೋಗಿಸಿ ರನ್‌ಗಳನ್ನು ಕಲೆ ಹಾಕುತ್ತಾ ಸಾಗಿದರು. ಅಲ್ಲದೆ ಗಿಲ್‌ ಒಂದೇ ಅಂಗಳದಲ್ಲಿ ಮೂರು ಫಾರ್ಮೆಟ್‌ನಲ್ಲಿ ಶತಕ ಸಿಡಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.

ವಿಶ್ವ ದಾಖಲೆ

ಈ ಶತಕದ ಇನ್ನಿಂಗ್ಸ್‌ ಮೂಲಕ ಶುಭಮನ್‌ ಗಿಲ್‌ ನೂತನ ವಿಶ್ವ ದಾಖಲೆಯನ್ನು ಬರೆದರು. ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 2500 ರನ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ, ಗಿಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 2500 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ ಗಿಲ್, ಹಾಶೀಮ್ ಆಮ್ಲಾ ಅವರ ದಾಖಲೆಯನ್ನು ಮುರಿದರು. ಹಾಶೀಮ್ ಆಮ್ಲಾ 2500 ರನ್‌ ಸಿಡಿಸಲು 51 ಏಕದಿನ ಪಂದ್ಯಗಳನ್ನು ತೆಗೆದುಕೊಂಡಿದ್ದರು. ಈಗ ಈ ದಾಖಲೆ ಶುಭಮನ್‌ ಗಿಲ್‌ ಅವರ ಮುಡಿಗೆ ಸೇರಿತು.

Story first published: Wednesday, February 12, 2025, 15:46 [IST]
Other articles published on Feb 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+