For Quick Alerts
ALLOW NOTIFICATIONS  
For Daily Alerts
 

ರೋಹಿತ್‌ ಇಂಗ್ಲೆಂಡ್‌ನಲ್ಲಿ ಒಟ್ಟಾರೆ ಸಿಡಿಸಿದ ರನ್‌ = ಗಿಲ್‌ 2 ಟೆಸ್ಟ್‌ ಪಂದ್ಯಗಳಲ್ಲಿ ಕಲೆ ಹಾಕಿದ ರನ್

ಟೀಮ್ ಇಂಡಿಯಾದ ನಾಯಕ ಶುಭಮನ್‌ ಗಿಲ್‌ ಇಂಗ್ಲೆಂಡ್ ಪ್ರವಾಸದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 269 ರನ್‌ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 161 ರನ್‌ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಶುಭಮನ್‌ ಗಿಲ್ ಹಲವು ದಾಖಲೆಗಳಿಗೆ ತಮ್ಮ ಹೆಸರು ನಮೂದಿಸಿದರು. ಇವರ ಈ ಅಂಕಿ ಅಂಶಗಳನ್ನು, ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಅಂಕಿ ಅಂಶಗಳಿಗೆ ತಾಳೆ ಹಾಕಲಾಗಿದೆ.

ಶುಭಮನ್‌ ಗಿಲ್‌ ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಈ ಮೂಲಕ ತಾವು ನಾಯಕರಾಗಿ ಅಧಿಕಾರ ವಹಿಸಿಕೊಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು. ಆದರೆ ಇದೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಇವರು ದೊಡ್ಡ ಇನಿಂಗ್ಸ್‌ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಎರಡನೆ ಟೆಸ್ಟ್‌ನಲ್ಲಿ ಗಿಲ್‌ ಅಬ್ಬರಿಸಿದ್ದಾರೆ. ಈ ಎರಡು ಪಂದ್ಯಗಳಲ್ಲಿ, ಗಿಲ್ ಇಂಗ್ಲೆಂಡ್ ನೆಲದಲ್ಲಿ ರೋಹಿತ್ ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಲು ಸಾಧ್ಯವಾಗದಷ್ಟು ರನ್‌ಗಳನ್ನು ಸಿಡಿಸಿದ್ದಾರೆ.

Shubman Gill s England Test Spree Eclipses Rohit Sharma s Career Total

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ 2014ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್‌ ಪ್ರವಾಸ ಕೈಗೊಂಡರು. ಆದರೆ ಈ ಪ್ರವಾಸದಲ್ಲಿ ಇವರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆ ಬಳಿಕ ಇವರು ಇಂಗ್ಲೆಂಡ್ ಪ್ರವಾಸ ಮಾಡಲು 7 ವರ್ಷ ಕಾಯಬೇಕಾಯಿತು. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್ ಫೈನಲ್‌ 2021ರಲ್ಲಿ ಪಂದ್ಯವನ್ನು ಆಡಿದಾಗ 64 ರನ್‌ಗಳನ್ನು ಗಳಿಸಿದರು. ಆ ಬಳಿಕ ಅದೇ ವರ್ಷ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯನ್ನು ಆಡಿದರು. ಈ ವೇಳೆ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ 368 ರನ್‌ಗಳನ್ನು ಗಳಿಸಿದರು. ಆ ಬಳಿಕ ಟೀಮ್ ಇಂಡಿಯಾ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಅನ್ನು ಸಹ ಆಡಿತು. ಈ ವೇಳೆ ರೋಹಿತ್‌ 58 ರನ್‌ ಸಿಡಿಸಿದರು. ರೋಹಿತ್ ಇಂಗ್ಲೆಂಡ್‌ನಲ್ಲಿ ಒಟ್ಟ 7 ಟೆಸ್ಟ್‌ಗಳನ್ನು ಆಡಿದ್ದು, 524 ರನ್‌ಗಳನ್ನು ಸಿಡಿಸಿದ್ದಾರೆ.

ಗಿಲ್‌ ದಾಖಲೆ

ಯಂಗ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಶುಭಮನ್ ಗಿಲ್ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಣಕ್ಕೆ ಇಳಿಸಿದರು. ಇವರು ನಾಯಕರಾಗಿ ಬಡ್ತಿ ಪಡೆದ ಇವರ ಬ್ಯಾಟಿಂಗ್‌ ಪ್ರದರ್ಶನ ಸುಧಾರಿಸಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 147 ರನ್‌ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 8 ರನ್‌ ಸಿಡಿಸಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 269 ರನ್‌ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 161 ರನ್‌ ಸಿಡಿಸಿದ್ದಾರೆ. ಗಿಲ್ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 585 ರನ್‌ಗಳನ್ನು ಗಳಿಸಿದ್ದಾರೆ.

Shubman Gill s England Test Spree Eclipses Rohit Sharma s Career Total

ಇಂಗ್ಲೇಂಡ್ ನೆಲದಲ್ಲಿ ರೋಹಿತ್ ಶರ್ಮಾ ಅವರ ವೃತ್ತಿ ಜೀವನದ ಒಟ್ಟಾರೆ ರನ್‌ಗಳನ್ನು ಸೇರಿಸಿದರೆ, ಶುಭಮನ್‌ ಗಿಲ್‌ ಅವರ ಎರಡು ಟೆಸ್ಟ್‌ ಪಂದ್ಯಗಳ ರನ್‌ಗಿಂತ ಹೆಚ್ಚಿವೆ. ರೋಹಿತ್‌ ಇಂಗ್ಲೆಂಡ್‌ ನೆಲದಲ್ಲಿ ಒಂದು ಶತಕ ಬಾರಿಸಿದರೆ, ಗಿಲ್ 3 ಶತಕ ಬಾರಿಸಿದ್ದಾರೆ.

Story first published: Tuesday, July 8, 2025, 8:35 [IST]
Other articles published on Jul 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+