For Quick Alerts
ALLOW NOTIFICATIONS  
For Daily Alerts
 

Shubman Gill: ಗಿಲ್‌ ಟಾರ್ಗೆಟ್‌ ಏನು ಗೊತ್ತಾ? ನಾಯಕತ್ವ ಸಿಕ್ಕ ಬಳಿಕ ಮೊದಲ ಪ್ರತಿಕ್ರಿಯೆ

ಟೀಮ್ ಇಂಡಿಯಾದ ನೂತನ ನಾಯಕ ಶುಭಮನ್‌ ಗಿಲ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಿಲ್‌ ತಂಡವನ್ನು ಮುನ್ನಡೆಸಲಿದ್ದು, ಶನಿವಾರ ಈ ತಂಡವನ್ನು ಪ್ರಕಟಿಸಲಾಗಿದೆ. ಬಿಸಿಸಿಐ ರೋಹಿತ್ ಶರ್ಮಾ ಅವರಿಂದ ನಾಯಕತ್ವ ಕಸಿದುಕೊಂಡು ಶುಭಮನ್‌ ಗಿಲ್ ಅವರಿಗೆ ನೀಡಿದೆ. ಇನ್ನು ರೋಹಿತ್ ಒಬ್ಬ ನುರಿತ ಬ್ಯಾಟರ್‌ ರೀತಿಯಲ್ಲಿ ಮಾತ್ರ ಆಡಲಿದ್ದಾರೆ. ತಮಗೆ ನಾಯಕತ್ವ ಸಿಕ್ಕ ಬಳಿಕ ಗಿಲ್‌ ಮೊದಲ ರಿಯಾಕ್ಷನ್‌ ನೀಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್‌ ಹಾಗೂ 146 ರನ್‌ಗಳ ಜಯ ಸಾಧಿಸಿತು. ಈ ಜಯದ ಬಳಿಕ ಗಿಲ್‌ ಹಲವು ವಿಚಾರಗಳ ಬಗ್ಗೆ ಬೆಳಕು ಹರಿಸಿದ್ದಾರೆ. ಅಂತೆಯೇ ತಮಗೆ ನೀಡಿದ ನಾಯಕತ್ವದ ಬಗ್ಗೆಯೂ ಅವರು ಮಾತನಾಡಿದ್ದಾರೆ.

Shubman Gill s First Reaction as New India ODI Captain Focus on 2027 World Cup

ಏಕದಿನ ತಂಡದ ನಾಯಕರಾಗಿರುವುದಕ್ಕೆ ಗಿಲ್ ಸಂತೋಷ ವ್ಯಕ್ತ ಪಡಿಸಿದ್ದಾರೆ. ಭಾರತದ ಏಕದಿನ ತಂಡವನ್ನು ಮುನ್ನಡೆಸುವುದು ಗೌರವದ ಸಂಗತಿ ಎಂದಿದ್ದಾರೆ. "ನನ್ನ ದೇಶವನ್ನು ಈ ಮಾದರಿಯ ಕ್ರಿಕೆಟ್‌ನಲ್ಲಿ ಮುನ್ನಡೆಸುವುದು ನಿಜಕ್ಕೂ ಅತ್ಯಂತ ದೊಡ್ಡ ಗೌರವವಾಗಿದೆ. ಇದು ನನಗೆ ಹೆಮ್ಮೆಯ ವಿಷಯ. ನಾನು ಸಹ ಉತ್ತಮವಾಗಿ ಪ್ರದರ್ಶನ ನೀಡಬಲ್ಲೆ ಎಂದು ತಿಳಿಸಿದ್ದಾರೆ.

ಗಿಲ್‌ ಹೇಳಿದ್ದೇನು?

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ನಮ್ಮ ತಂಡದ ದೊಡ್ಡ ಗುರಿ. ಏಕದಿನ ವಿಶ್ವಕಪ್‌ಗೂ ಮುನ್ನ ನಮಗೆ ಸರಿಸುಮಾರು 20 ಪಂದ್ಯಗಳು ಆಡಲ ಸಿಗಲಿವೆ. ಈ ದೊಡ್ಡ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡೇ ನಾವು ಪೂರ್ವಸಿದ್ಧತೆಯನ್ನು ನಡೆಸುತ್ತೇವೆ. ಅಲ್ಲದೆ ಪ್ರತಿ ಸರಣಿಯನ್ನು ಆಡುತ್ತೇವೆ. ಎಲ್ಲರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಪೂರೈಸಲು ನಾನು ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಗಿಲ್ ತಿಳಿಸಿದ್ದಾರೆ.

ಭಾರತ ಸದ್ಯ ತವರಿನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಈ ಟೆಸ್ಟ್‌ ಸರಣಿ ಮುಗಿದ ಬಳಿಕ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸಕ್ಕಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಅನುಭವಿ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಆಟಗಾರರು ಸುಮಾರು 7 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಆರಂಭದಲ್ಲಿ ಏಕದಿನ ಸರಣಿ ಹಾಗೂ ಟಿ20 ಸರಣಿಗಳನ್ನು ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಜುಪರ್ ಕೃಷ್ಣ, ಧ್ರುವ್ ಜುರೇಲ್‌, ಯಶಸ್ವಿ ಜೈಸ್ವಾಲ್‌

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ವೇಳಾಪಟ್ಟಿ

ಅ.19, ಮೊದಲ ಏಕದಿನ ಪಂದ್ಯ, ಪರ್ತ್, ಬೆಳಗ್ಗೆ 11ಕ್ಕೆ
ಅ.23, ಎರಡನೇ ಏಕದಿನ ಪಂದ್ಯ, ಆಡಿಲೇಡ್, ಬೆಳಗ್ಗೆ 9.30ಕ್ಕೆ
ಅ.25, ಮೂರನೇ ಏಕದಿನ ಪಂದ್ಯ, ಸಿಡ್ನಿ, ಬೆಳಗ್ಗೆ 9ಕ್ಕೆ

Story first published: Sunday, October 5, 2025, 8:27 [IST]
Other articles published on Oct 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+