ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ದಾಖಲೆ ಬೆಸ್ಟ್, ಟಿ20 ಕ್ರಿಕೆಟ್‌ನಲ್ಲಿ ಚಿಂತೆ ಹೆಚ್ಚಿಸಿದೆ ನಂಬರ್
ಶುಭಮನ್ ಗಿಲ್ ಭಾರತದ ಸ್ಟಾರ್ ಆರಂಭಿಕ ಆಟಗಾರ. ಹಲವು ಸಮಯದಿಂದ, ಶುಭಮನ್ ಗಿಲ್ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭವನ್ನು ಹೊಣೆಯನ್ನು ಹೊತ್ತಿದ್ದಾರೆ. ಬಹುತೇಕ ಎಲ್ಲಾ ಮೂರು ಮಾದರಿಗಳಲ್ಲಿ ಗಿಲ್‌ಗೆ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದು ಸೈ ಎನಿಸಿಕೊಂಡಿದ್ದಾರೆ. ಆದರೆ ಭಾರತದ ಆರಂಭಿಕ ಆಟಗಾರನಿಗೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಿಲ್ ಸಾಧನೆ ಹೇಳಿಕೊಳ್ಳುವಂತಿಲ್ಲ.
ಗಿಲ್ ಇದುವರೆಗೆ ಆಡಿರುವ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ. ಏಕದಿನ ಮಾದರಿಯಲ್ಲಿ ಗಿಲ್ ಮಾಡಿದ ಸಾಧನೆ ಅಮೋಘ. ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದ್ದರು. ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಬದಲಿಗೆ ಶುಭಮನ್ ಗಿಲ್ ಅವರಿಗೆ ಸ್ಥಾನ ಲಭಿಸಿತು.

ಗಾಯಕ್ವಾಡ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಆಡಿದ T20 ಸರಣಿಯಲ್ಲಿ ಶತಕ ಗಳಿಸಿದ್ದರು. ಅಲ್ಲದೆ ಇನ್ನೂ ಅವರು ಆಫ್ರಿಕಾ ವಿರುದ್ಧದ ಎರಡನೇ T20 ನಲ್ಲಿ ಆಡಿಲ್ಲ. ಗಿಲ್ ಅಂಗಳಕ್ಕೆ ಇಳಿದಿದ್ದರಿಂದ ಗಾಯಕ್ವಾಡ್ ಬೆಂಚ್ ಕಾಯ ಬೇಕಾಯಿತು.
ಜನವರಿ 2023 ರಲ್ಲಿ ಟಿ 20 ಅಂತರಾಷ್ಟ್ರೀಯ ಪಂದ್ಯಕ್ಕೆ ಗಿಲ್ ಪದಾರ್ಪಣೆ ಮಾಡಿದರು. ಶುಭಮನ್ ಗಿಲ್ ಇದುವರೆಗೆ 12 ಪಂದ್ಯಗಳನ್ನು ಆಡಿದ್ದಾರೆ. ಅವರು 27.63 ಸರಾಸರಿ ಮತ್ತು 145.45 ಸ್ಟ್ರೈಕ್ ರೇಟ್‌ನಲ್ಲಿ 304 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ತಮ್ಮ ಬ್ಯಾಟ್‌ನಿಂದ 1 ಶತಕ ಮತ್ತು 1 ಅರ್ಧ ಶತಕ ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 126* ರನ್.

ಇದರ ಹೊರತಾಗಿ ಗಿಲ್ ಅವರ ಟಿ20 ಇನ್ನಿಂಗ್ಸ್‌ಗಳನ್ನು ಒಂದೊಂದಾಗಿ ನೋಡಿದರೆ, ಅವರು ಟಿ20 ಕ್ರಿಕೆಟ್ ನಲ್ಲಿ ಅಷ್ಟು ಸ್ಟ್ರಾಂಗ್ ಕಾಣುತ್ತಿಲ್ಲ. ಇದುವರೆಗೆ ಆಡಿದ ಇನಿಂಗ್ಸ್‌ಗಳಲ್ಲಿ ಗಿಲ್ ಕ್ರಮವಾಗಿ 07, 05, 46, 07, 11, 126*, 03, 07, 06, 77, 09, 00 ರನ್ ಗಳಿಸಿದ್ದಾರೆ. 12 ಇನ್ನಿಂಗ್ಸ್‌ಗಳಲ್ಲಿ 8 ರಲ್ಲಿ, ಗಿಲ್ ಎರಡಂಕಿಯನ್ನು ದಾಟಲು ಸಾಧ್ಯವಾಗಲಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗಿಲ್‌ಗೆ ಇದು ಇನ್ನೂ ಆರಂಭಿಕ ಹಂತವಾಗಿದ್ದು, ಅವರು T20I ವೃತ್ತಿಜೀವನದತ್ತ ಗಮನ ಹರಿಸಬೇಕಾಗಿದೆ.
ಋತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್‌ನಲ್ಲಿ 19 ಪಂದ್ಯಗಳನ್ನು ಆಡಿದ್ದು ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ. ಇವರು ಸಹ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದು, ಗಿಲ್ ಒಂದು ವೇಳೆ ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
Story first published: Wednesday, December 13, 2023, 18:27 [IST]
Other articles published on Dec 13, 2023
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications