ಜನವರಿಯಿಂದ ಭಾರತ ಗೆದ್ದಿಲ್ಲ ಟಾಸ್: ದಾಖಲೆ ಪುಟಕ್ಕೆ ಎಂಟ್ರಿ
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮೈದಾನಕ್ಕೆ ಇಳಿಯುತ್ತಲೇ ಎಲ್ಲರ ಕಣ್ಣುಗಳು, ನಾಲ್ಕನೇ ಟೆಸ್ಟ್‌ಗೆ ತಂಡ ಏನಿರಲಿದೆ ಎಂಬತ್ತ ಚಿತ್ತ ನೆಟ್ಟಿದ್ದವು. ಆದರೆ ಬೆನ್‌ಸ್ಟೋಕ್ಸ್ ಹಾಗೂ ಗಿಲ್ ಟಾಸ್‌ಗೆ ಮೈದಾನದ ತಲುಪಿದಾಗ, ದಾಖಲೆಯ ಪುಟ ಸಹ ಈ ಇಬ್ಬರೂ ಆಟಗಾರರನ್ನು ಒಮ್ಮೆ ದಿಟ್ಟಿಸಿ ನೋಡ್ತಾ ಇತ್ತು. ಬುಧವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಟಾಸ್ ಸೋಲುತ್ತಲೇ ದೊಡ್ಡ ದಾಖಲೆಯನ್ನು ಬರೆದರು.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಲೇ, ನಾಯಕತ್ವವನ್ನು ಶುಭಮನ್ ಗಿಲ್ ವಹಿಸಿಕೊಂಡರು. ಅಲ್ಲಿಂದ ಈ ವರೆಗೆ ಅವರು ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಗಿಲ್ ಒಮ್ಮೆಯೂ ಟಾಸ್ ಗೆದ್ದಿಲ್ಲ. ಈ ಮೂಲಕ ಟೀಮ್ ಇಂಡಿಯಾ ವಿಶಿಷ್ಟ ಸಾಧನೆ ಮಾಡಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಹೇಗೆ ಇರಲಿ. ಟೀಮ್ ಇಂಡಿಯಾ ಈ ಪ್ರವಾಸದಲ್ಲಿ ಒಂದೇ ಒಂದು ಪಂದ್ಯದಲ್ಲಿ ಟಾಸ್ ಗೆದ್ದಿಲ್ಲ. ಇದೇ ಪ್ರವೃತ್ತಿಯನ್ನು ಶುಭಮನ್ ಗಿಲ್ ಮ್ಯಾಂಚೆಸ್ಟರ್ ಪಂದ್ಯದಲ್ಲೂ ಮುಂದುವರೆಸಿದ್ದಾರೆ. ಈ ಮೂಲಕ ಇವರು ವಿಶೇಷ ದಾಖಲೆಗೆ ಭಾಜನರಾಗಿದ್ದಾರೆ. ಭಾರತದ ನಾಯಕರಾದ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಜನವರಿಯಿಂದ ಇಲ್ಲಿಯವರೆಗೆ ಒಂದೇ ಒಂದು ಬಾರಿ ಟಾಸ್ ಗೆದ್ದಿಲ್ಲ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆದಿತ್ತು. ಆಗ ಭಾರತ ಕೊನೆಯ ಬಾರಿಗೆ ಟಾಸ್ ಗೆದ್ದುಕೊಂಡಿತ್ತು. ಅಲ್ಲಿಂದ ಭಾರತ ತಂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 14 ಬಾರಿ ಟಾಸ್ ಸೋತಿದೆ. ಭಾರತವನ್ನು ಈ ಏಳು ತಿಂಗಳಲ್ಲಿ ಮೂರು ನಾಯಕರು ಮುನ್ನಡೆಸಿದರೂ, ಒಮ್ಮೆಯೂ ಟಾಸ್ ಗೆದ್ದಿಲ್ಲ. ಇನ್ನು ಶುಭಮನ್ ಗಿಲ್ ಇಲ್ಲಿಯವರೆಗೆ ನಾಯಕರಾಗಿ ಒಂದೇ ಒಂದು ಟಾಸ್ ಗೆದ್ದಿಲ್ಲ.
ಟಾಸ್ ಗೆದ್ದ ಇಂಗ್ಲೆಂಡ್
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತನ್ನದಾಗಿಸಿಕೊಂಡಿತು. ಪಂದ್ಯದ ವೇಳೆ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಆತಿಥೇಯ ತಂಡ ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಇದರಿಂದ ಮೊದಲಾವಧಿಯಲ್ಲಿ ಇಂಗ್ಲೆಂಡ್ ಬೌಲರ್‌ಗಳಿಗೆ ಲಾಭ ಸಿಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಟೀಮ್ ಇಂಡಿಯಾಕ್ಕೆ ಆರಂಭಿಕ ಪೆಟ್ಟು ನೀಡುವ ಆಸೆ ಇಂಗ್ಲೆಂಡ್ ತಂಡದ್ದಾಗಿತ್ತು. ಇನ್ನು ಭಾರತದ ನಾಯಕ ಗಿಲ್ ಟಾಸ್ ಗೆದ್ದಿದ್ದರೆ ಏನು ಮಾಡಬೇಕು ಎಂಬುದು ತಿಳಿದಿದ್ದಿಲ್ಲ ಎಂದು ತಿಳಿಸಿದರು. ಆದ್ದರಿಂದ ಟಾಸ್ ಸೋತಿದ್ದು ಅವರಿಗೆ ಒಳ್ಳೆಯದು ಎಂದು ಭಾರತದ ನಾಯಕ ಶುಭಮನ್ ಗಿಲ್ ಹೇಳಿದರು.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಭೋಜನ ವಿರಾಮದ ವೇಳೆ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications