For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ತಂಡ ಪ್ರಕಟ: ಸಿಕಂದರ್ ರಾಜ್‌ ನಾಯಕ

ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ದೇಶಗಳು ತಮ್ಮ ತಮ್ಮ ತಂಡಗಳು ಘೋಷಣೆ ಮಾಡುತ್ತಿವೆ. ಶುಕ್ರವಾರ ದಕ್ಷಿಣ ಆಫ್ರಿಕಾ ತಂಡವನ್ನು ಈ ಮೆಗಾ ಟೂರ್ನಿಗೆ ಘೋಷಣೆ ಮಾಡಲಾಯಿತು. ಈಗ ಜಿಂಬಾಬ್ವೆ ತಂಡವನ್ನು ಸಹ ಘೋಷಣೆ ಮಾಡಲಾಗಿದ್ದು, ಅನುಭವಿ ಆಲ್‌ರೌಂಡರ್‌ ಸಿಕಂದರ್ ರಾಜ್‌ಗೆ ನಾಯಕತ್ವ ನೀಡಲಾಗಿದೆ. ಜಿಂಬಾಬ್ವೆ ತಂಡ ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಟಿ20 ವಿಶ್ವಕಪ್‌ಗೆ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.

ಜಿಂಬಾಬ್ವೆ ತಂಡದಲ್ಲಿ ಭರವಸೆಯ ಆಟಗಾರರಾದ ಬ್ಯಾಟಿಂಗ್‌ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿರುವ ಬ್ರಿಯಾನ್ ಬೆನೆಟ್, ಬ್ಲೆಸಿಂಗ್ ಮುಜರಬಾನಿ ಮತ್ತು ರಿಚರ್ಡ್ ನ್ಗಾರವಾ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಟಗಾರರ ಫಾರ್ಮ್‌ ಮಹತ್ವದಾಗಿರುತ್ತದೆ. ಮುಜರಬಾನಿ, ಗ್ರೇಮ್ ಕ್ರೆಮರ್ ಮತ್ತು ನ್ಗಾರವಾ ಕೂಡ ತಮ್ಮ ವೇಗದ ಬೌಲಿಂಗ್‌ ನಿಂದ ಎದುರಾಳಿಗಳಿಗೆ ಕಾಡಬಲ್ಲರು.

Sikandar Raza to Lead Zimbabwe in T20 World Cup 2026 Brendan Taylor Returns to the Squad

ಜಿಂಬಾಬ್ವೆ ತಂಡದಲ್ಲಿ ಬ್ರೆಂಡನ್ ಟೇಲರ್ ಸ್ಥಾನ ಪಡೆದಿದ್ದಾರೆ. ಇವರು ಅಪಾರ ಅನುಭವ ಹೊಂದಿದ್ದು, ತಂಡಕ್ಕೆ ನೆರವಾಗಬಲ್ಲರು. ಇವರು ಹಲವು ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದರು. ಇವರು ಚುಟುಕು ಫಾರ್ಮೆಟ್‌ಗೆ ಮರಳಿದ್ದಾರೆ. ಇವರು ಈ ವರೆಗೆ 58 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1 ಶತಕ, 6 ಶತಕ ಬಾರಿಸಿದ್ದಾರೆ. ಈ ವೇಳೆ ಇವರು 1185 ರನ್‌ ಸಿಡಿಸಿದ್ದಾರೆ. ಜಿಂಬಾಬ್ವೆ ತಂಡ ಟಿ20 ವಿಶ್ವಕಪ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಸಿಕಂದರ್ ರಾಜ್ ಹಾಗೂ ಬ್ರೆಂಡನ್ ಟೇಲರ್ ಅವರ ಪ್ರದರ್ಶನದ ಮೇಲೆ ನಿಂತಿದೆ.

ಬಿ ಗುಂಪಿನಲ್ಲಿ ಸ್ಥಾನ ಪಡೆದ ಜಿಂಬಾಬ್ವೆ

ಜಿಂಬಾಬ್ವೆ ತಂಡ ಟಿ20 ವಿಶ್ವಕಪ್‌ನಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಜಿಂಬಾಬ್ವೆ ಜೊತೆಗೆ ಆಸ್ಟ್ರೇಲಿಯಾ, ಶ್ರೀಲಂಕಾ, ಐರ್ಲೆಂಡ್ ಮತ್ತು ಓಮನ್ ಸ್ಥಾನ ಪಡೆದಿವೆ. ಜಿಂಬಾಬ್ವೆ ಒಮ್ಮೆಯೂ ಟಿ20 ವಿಶ್ವಕಪ್‌ ಪಡೆದಿಲ್ಲ. ಜಿಂಬಾಬ್ವೆ ತಂಡ ಈ ಟೂರ್ನಿಯಲ್ಲಿ ಫೆಬ್ರವರಿ 9 ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಓಮನ್‌ ವಿರುದ್ಧ ಕಾದಾಟವನ್ನು ನಡೆಸಲಿದೆ.

Sikandar Raza to Lead Zimbabwe in T20 World Cup 2026 Brendan Taylor Returns to the Squad

ಟಿ 20 ವಿಶ್ವಕಪ್‌ಗಾಗಿ ಜಿಂಬಾಬ್ವೆ ತಂಡ: ಸಿಕಂದರ್ ರಜಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ಗ್ರೇಮ್ ಕ್ರೀಮರ್, ಬ್ರಾಡ್ಲಿ ಇವಾನ್ಸ್, ಕ್ಲೈವ್ ಮಡೆಂಡೆ, ಟಿನೊಟೆಂಡಾ ಮಾಫೋಸಾ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್‌ಟನ್ ಮಸಕಡ್ಜಾ, ಟೋನಿ, ಮುಶಿಂಗ್‌ಜಾನಿ, ಟಾನಿವಾ ಮುಶಿಂಗ್‌ನಾನಿ, ಟ್ಯಾನಿವಾ ಮುಶಿಂಗ್ಯಾನಿ ಡಿಯೋನ್ ಮೈಯರ್ಸ್, ರಿಚರ್ಡ್ ನಾಗರವ, ಬ್ರೆಂಡನ್ ಟೇಲರ್.

ಜಿಂಬಾಬ್ವೆ ತಂಡದ ವೇಳಾಪಟ್ಟಿ

ಫೆಬ್ರವರಿ 9, ಓಮನ್‌ ವಿರುದ್ಧ, ಕೊಲಂಬೊ, ಮಧ್ಯಾಹ್ನ 3ಕ್ಕೆ
ಫೆಬ್ರವರಿ 13, ಆಸ್ಟ್ರೇಲಿಯಾ ವಿರುದ್ಧ, ಕೊಲಂಬೊ, ಬೆಳಗ್ಗೆ 11ಕ್ಕೆ
ಫೆಬ್ರವರಿ 17, ಐರ್ಲೆಂಡ್‌ ವಿರುದ್ಧ, ಪಲ್ಲಿಕಲ್, ಮಧ್ಯಾಹ್ನ 3ಕ್ಕೆ
ಫೆಬ್ರವರಿ 19, ಶ್ರೀಲಂಕಾ ವಿರುದ್ಧ, ಕೊಲಂಬೊ, ಮಧ್ಯಾಹ್ನ 3ಕ್ಕೆ

Story first published: Saturday, January 3, 2026, 6:15 [IST]
Other articles published on Jan 3, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+