ಅಂಪೈರಿಂಗ್‌ಗೆ ನಿವೃತ್ತಿ ಘೋಷಿಸಿದ ಸೈಮನ್ ಫ್ರೈ, ಜಾನ್ ವಾರ್ಡ್

ಸಿಡ್ನಿ, ಏಪ್ರಿಲ್ 17: ಆಸ್ಟ್ರೇಲಿಯಾದ ಸೈಮನ್ ಫ್ರೈ ಮತ್ತು ಜಾನ್ ವಾರ್ಡ್ ಅಂಪೈರಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಇದನ್ನು ಶುಕ್ರವಾರ ಘೋಷಿಸಿದೆ. ಇಬ್ಬರೂ ಆಸ್ಟ್ರೇಲಿಯಾ ದೇಸಿ ಕ್ರಿಕೆಟ್‌ನಲ್ಲಿ ಹೆಚ್ಚು ಅಂಪೈರಿಂಗ್ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ವಾರ್ಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಅಂಪೈರಿಂಗ್ ಮಾಡಿದ್ದಾರೆ.
ಸೌತ್ ಆಸ್ಟ್ರೇಲಿಯಾದ ಸೈಮನ್ ಫ್ರೈ ಒಟ್ಟು 100 ಪ್ರಥಮದರ್ಜೆ ಕ್ರಿಕೆಟ್‌ಗಳಿಗೆ, 130 ಲಿಸ್ಟ್ ಎ ಕ್ರಿಕೆಟ್‌ಗಳಿಗೆ ಮತ್ತು 93 ಟಿ20 ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು. ಅಲ್ಲದೆ ಫ್ರೈಗೆ 'ಕ್ರಿಕೆಟ್ ಆಸ್ಟ್ರೇಲಿಯಾ ಅಂಪೈರ್ ಪ್ರಶಸ್ತಿ ಒಟ್ಟು 4 ಬಾರಿ ಲಭಿಸಿತ್ತು. 20 ಸೀಸನ್‌ಗಳಲ್ಲಿ ಫ್ರೈ ಅಂಪೈರಿಂಗ್ ಮಾಡಿದ್ದರು.
ಇನ್ನು ಜಾನ್ ವಾರ್ಡ್ ಒಟ್ಟು 19 ಸೀಸನ್‌ಗಳಲ್ಲಿ ಅಂಪೈರಿಂಗ್ ಕರ್ತವ್ಯ ನಿರ್ವಹಿಸಿದ್ದಾರೆ. ವೈಟ್‌ಬಾಲ್‌ನಲ್ಲಿ 32 ಅಂತಾರಾಷ್ಟ್ರೀಯ ಪಂದ್ಯಗಳು, 87 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳು, 84 ಲಿಸ್ಟ್ ಎ ಮತ್ತು 117 ಟಿ20 ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು.
'ಮಾಜಿ ತಂಡದ ಸಹ ಆಟಗಾರನೊಂದಿಗೆ ನಾನು ಪ್ರೀತಿಸುವ ಆಟದಲ್ಲಿ ಇಪ್ಪತ್ತು ವರ್ಷಗಳ ವೃತ್ತಿಜೀವನ ನಡೆಸುವ ಅವಕಾಶ ಒದಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಬೇರೆಯವರಿಗೂ ಅವಕಾಶ ಬೇಕಿರುವುದರಿಂದ ಅಂಪೈರಿಂಗ್‌ನಿಂದ ಕೆಳಗಿಳಿಯಲು ಇದೇ ಒಳ್ಳೆಯ ಸಮಯ ಎಂದು ನಾನು ಭಾವಿಸುತ್ತೇನೆ,' ಎಂದು ಫ್ರೈ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications