ಟಿ20 ಕ್ರಿಕೆಟ್ ಅಂದರೆ ಅದು ಹೊಡಿ ಬಡಿ ಆಟ. ಬ್ಯಾಟರ್‌ಗಳ ಆರ್ಭಟ.. ಸ್ಟಾರ್‌ಗಳ ಮೆರೆದಾಟ.. ಇದ್ದೇ ಇರುತ್ತದೆ. ಬ್ಯಾಟರ್‌ಗಳ ನೆಚ್ಚಿನ ಫಾರ್ಮೆಟ್‌ನಲ್ಲಿ ಬೌಲರ್‌ಗಳು ಅಬ್ಬರಿಸುತ್ತಾರೆ. ಬೌಲರ್‌ಗಳು ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಟ್ಟಿ ಹಾಕುತ್ತಾರೆ. ಇಂತಹ ಪಂದ್ಯಗಳಿಗೆ ಬೆಸ್ಟ್ ಎಕ್ಸಾಮ್‌ಪಲ್ ಇಲ್ಲಿದೆ.
ಟಿ20 ಪಂದ್ಯದಲ್ಲಿ ಕಡಿಮೆ ರನ್‌ಗಳಿಗೆ ಆಲೌಟ್ ದಾಖಲೆಗೆ ಈ ಪಂದ್ಯ ಸೇರಿದೆ. ಗುರುವಾರ ಸಿಂಗಾಪುರ ಹಾಗೂ ಮಂಗೋಲಿಯಾದ ನಡುವಣ ಪಂದ್ಯ ಇತಿಹಾಸದ ಪುಟ ಸೇರಿದೆ. ಬಾಂಗಿಯಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಂಗೋಲಿಯಾ ತಂಡವು 10 ಓವರ್‌ಗಳಲ್ಲಿ ಕೇವಲ 10 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಸ್ಕೋರ್ ಮಾಡಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಮಂಗೋಲಿಯಾದ ವಿರುದ್ಧದ ಪಂದ್ಯದಲ್ಲಿ ಸಿಂಗಾಪುರ್‌ದ ಬೌಲರ್ ಒಬ್ಬರು ಇತಿಹಾಸ ಸೃಷ್ಟಿಸಿದ್ದಾರೆ. ಇವರು ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಎ 2024 ರ ಈ ಪಂದ್ಯದಲ್ಲಿ 6 ವಿಕೆಟ್ ಉರುಳಿಸಿದ್ದಾರೆ. ಸಿಂಗಾಪುರ್‌ದ ಹರ್ಷ ಭರದ್ವಾಜ್ 3 ರನ್ ನೀಡಿ 6 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಈ ಮೂಲಕ ಹರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸತತ ನಾಲ್ಕು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ಪರದಾಡಿದ ಮಂಗೋಲಿಯಾ ರನ್ ಗಳಿಸಲು ಪರದಾಟ ನಡೆಸಿದೆ. ಈಗಾಗಲೇ ನಡೆದ ಪಂದ್ಯದಲ್ಲಿ ಮಂಗೋಲಿಯಾ ಸಾಧನೆ ಕಳಪೆಯಾಗಿದೆ.
ಸಿಂಗಾಪುರ್ ವಿರುದ್ಧದ ಪಂದ್ಯದಲ್ಲಿ ಮಂಗೋಲಿಯಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಪರದಾಡಿದರು. ಮಂಗೋಲಿಯಾ ತಂಡದ ಪರ ಯಾವೊಬ್ಬ ಬ್ಯಾಟರ್ ಡಬಲ್ ಡಿಜಿಟ್ ಮುಟ್ಟಲಿಲ್ಲ. ಅಲ್ಲದೆ ತಂಡದ ಐವರು ಬ್ಯಾಟರ್‌ಗಳು ಖಾತೆಯನ್ನು ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಆರು ಬ್ಯಾಟರ್‌ಗಳು ಸೇರಿ ಒಟ್ಟು 8 ರನ್ ಕಾಣಿಕೆ ನೀಡಿದರು. ಇನ್ನು ಸಿಂಗಾಪುರ್‌ದ ಬೌಲರ್ 2 ಎಕ್ಸ್‌ಟ್ರಾ ರನ್ ನೀಡಿದರು.
ಇದಕ್ಕುತ್ತರವಾಗಿಸಿಂಗಾಪುರ 11 ರನ್‌ಗಳ ಗುರಿಯನ್ನು ಕೇವಲ 5 ಎಸೆತಗಳಲ್ಲಿ 1 ವಿಕೆಟ್ ಕಳೆದುಕೊಂಡು ಸಾಧಿಸಿತು. ಇದಕ್ಕೂ ಮೊದಲು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ 10 ರನ್ ಗಳಿಸಿದ ದಾಖಲೆಯನ್ನು ಐಲ್ ಆಫ್ ಮ್ಯಾನ್ ಹೊಂದಿದೆ. ಕಳೆದ ವರ್ಷ ಐಲ್ ಆಫ್ ಮ್ಯಾನ್ ತಂಡ ಸ್ಪೇನ್ ವಿರುದ್ಧ ಈ ದಾಖಲೆಯನ್ನು ಮಾಡಿತ್ತು. ಇದೀಗ ಈ ದಾಖಲೆ ಸರಿಗಟ್ಟಿದೆ.