ತ್ರಿಕೋನ ಸರಣಿ: ಅಂತಾರಾಷ್ಟ್ರೀಯ ಟಿ20 ಇತಿಹಾಸ ಬರೆದ ಸಿಂಗಾಪುರ!

ಸಿಂಗಾಪುರ, ಸೆಪ್ಟೆಂಬರ್ 30: ಮುಂದಿನ ತಿಂಗಳಿನಲ್ಲಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯಲಿರುವಾಗಲೇ, ಸಿಂಗಾಪುರ ಕ್ರಿಕೆಟ್ ತಂಡ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಐಸಿಸಿ ಪೂರ್ಣ ಸದಸ್ಯ ತಂಡವಾದ ಜಿಂಬಾಬ್ವೆ ವಿರುದ್ಧ ಸಿಂಗಾಪುರ ಚೊಚ್ಚಲ ಜಯ ದಾಖಲಿಸಿದೆ.
ಸಿಂಗಾಪುರದ ಇಂಡಿಯನ್ ಅಸೋಸಿಯೇಷನ್ ಗ್ರೌಂಡ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 29) ಸಿಂಗಾಪುರ-ಜಿಂಬಾಬ್ವೆ-ನೇಪಾಳ ನಡುವಿನ ತ್ರಿಕೋನ ಸರಣಿಯ 3ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸಿಂಗಾಪುರ 4 ರನ್ ರೋಚಕ ಜಯ ಗಳಿಸಿದೆ.
ಸೆಪ್ಟೆಂಬರ್ 28ರಂದು ನಡೆದಿದ್ದ ಪಂದ್ಯದಲ್ಲಿ ನೇಪಾಳ ವಿರುದ್ಧ ಸೋತಿದ್ದ ಸಿಂಗಾಪುರ, ಈ ಟಿ20ಐ ಜಯದೊಂದಿಗೆ ವಿಶ್ವದ ಗಮನ ಸೆಳೆದಿದೆ.

18 ಓವರ್‌ಗೆ 181 ರನ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸಿಂಗಾಪುರ, ಆರಂಭಿಕ ಆಟಗಾರ ರೋಹನ್ ರಂಗರಾಜನ್ 39, ಸುರೇಂದ್ರನ್ ಚಂದ್ರಮೋಹನ್ 23, ಟಿಮ್ ಡೇವಿಡ್ 41, ಮನ್‌ಪ್ರೀತ್ ಸಿಂಗ್ 41, ಜನಕ್ ಪ್ರಕಾಶ್ 10 ರನ್ ನೊಂದಿಗೆ 18 ಓವರ್‌ಗೆ 9 ವಿಕೆಟ್ ಕಳೆದು 181 ರನ್ ಮಾಡಿತು.

ಫುಲ್ ಮೆಂಬರ್ಸ್ ತಂಡಗಳು ಎಂದರೇನು?
ಐಸಿಸಿ ಪೂರ್ಣ ಸದಸ್ಯರು ಎಂದರೆ ಒಂದು ದೇಶದಲ್ಲಿನ ಕ್ರಿಕೆಟ್ ಆಡಳಿತ ಮಂಡಳಿಗಳು ಅಥವಾ ಭೌಗೋಳಿಕ ಪ್ರದೇಶವನ್ನು ಪ್ರತಿನಿಧಿಸುವುದಕ್ಕೆ ಸಂಬಂಧಿಸಿದ ದೇಶಗಳ ಗುಂಪು. ಐಸಿಸಿ ಪೂರ್ಣ ಸದಸ್ಯರಿಗೆ ಅಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಲು ಒಂದು ಪ್ರತಿನಿಧಿ ತಂಡವನ್ನು ಕಳುಹಿಸುವ ಹಕ್ಕಿದೆ ಮತ್ತು ಐಸಿಸಿಯ ಸಭೆಗಳಲ್ಲಿ ಪೂರ್ಣ ಮತದಾನದ ಹಕ್ಕಿರುತ್ತದೆ.

ವಿಲಿಯಮ್ಸ್ ಅರ್ಧ ಶತಕ ವ್ಯರ್ಥ
ಗುರಿ ಬೆನ್ನಟ್ಟಿದ ಜಿಂಬಾಬ್ವೆ, ರೆಗಿಸ್ ಚಕಾಬ್ವಾ 48, ಸೀನ್ ವಿಲಿಯಮ್ಸ್ 66 (35 ಎಸೆತ), ಟಿನೋಟೆಂಡಾ ಮುಟೊಂಬೊಡ್ಜಿ 32 ರನ್ ಕೊಡುಗೆಯೊಂದಿಗೆ 18 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 177 ರನ್ ಪೇರಿಸಿ ಶರಣಾಯಿತು (ಪಂದ್ಯವನ್ನು 18 ಓವರ್‌ಗೆ ಸೀಮಿತಗೊಳಿಸಲಾಗಿತ್ತು).

ಐಸಿಸಿ ಫುಲ್ ಮೆಂಬರ್ಸ್ ತಂಡಗಳು
ಐಸಿಸಿ ಫುಲ್ ಮೆಂಬರ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳಿವೆ. ಸಿಂಗಾಪುರ, ಜಾಂಬಿಯಾ ಇತ್ಯಾದಿ ಅನೇಕ ದೇಶಗಳು ಐಸಿಸಿ ಸಹ ಸದಸ್ಯರ ಪಟ್ಟಿಯಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications