IND vs ENG Test: ಚೆಂಡನ್ನು ಬದಲಿಸುವಂತೆ ಮನವಿ ತಿರಸ್ಕಾರ: ಅಂಪೈರ್ ವಿರುದ್ಧ ಗಿಲ್ ಕೋಪ
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಶುಕ್ರವಾರ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 251 ರನ್ ಗಳಿಂದ ಆಟ ಮುಂದುವರೆಸಿತು. ಎರಡನೇ ದಿನದಾಟದ 10 ಓವರ್‌ಗಳ ಬಳಿಕ ಟೀಮ್ ಇಂಡಿಯಾ ಚೆಂಡನ್ನು ಬದಲಾವಣೆ ಮಾಡಲು ಮನವಿ ಸಲ್ಲಿಸಿತು. ಆದರೆ ಅಂಪೈರ್ ಟೀಮ್ ಇಂಡಿಯಾದ ಮನವಿಯನ್ನು ತಿರಸ್ಕರಿಸಿದರು. ಈ ವೇಳೆ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಫೀಲ್ಡ್ ಅಂಪೈರ್ ಮೇಲೆ ಕೋಪಗೊಂಡರು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
10 ಓವರ್ ಹಳೆಯದಾದ ಚೆಂಡು ಹೇಗೆ ವರ್ತಿಸಬೇಕೋ ಹಾಗೆ ವರ್ತಿಸುತ್ತಿಲ್ಲ ಎಂಬುದು ನಾಯಕ ಶುಭಮನ್ ಗಿಲ್ ಅವರ ವಾದವಾಗಿತ್ತು. ಹೀಗಾಗಿ ಚೆಂಡನ್ನು ಬದಲಿಸುವಂತೆ ಅಂಪೈರ್ ಅವರಲ್ಲಿ ಮನವಿಯನ್ನು ಮಾಡಿದರು. ಅಂಪೈರ್ ಆ ಚೆಂಡನ್ನು ತಮ್ಮ ಕೈಯಲ್ಲಿದ್ದ ಅಳತೆ ಮಾಪನದಲ್ಲಿ ಅಳೆದು ಚೆಂಡು ಇನ್ನು ಆಡಲು ಯೋಗ್ಯವಾಗಿದೆ ಎಂಬುದಾಗಿ ತಿಳಿಸಿದರು. ಅಲ್ಲದೆ ಚೆಂಡನ್ನು ಬದಲಿಸುವ ಶುಭಮನ್ ಗಿಲ್ ಬೇಡಿಕೆಯನ್ನು ತಿರಸ್ಕರಿಸಿದರು.

ಶುಭಮನ್ ಗಿಲ್ ಬೇಡಿಕೆಯನ್ನು ಅಂಪೈರ್ ತಿರಸ್ಕರಿಸುತ್ತಿದಂತೆ ಅವರು ಕೋಪಗೊಂಡರು. ಇದೇ ವೇಳೆ ಅಂಪೈರ್ ಹಾಗೂ ಟೀಮ್ ಇಂಡಿಯಾ ನಾಯಕರ ನಡುವೆ ಕೊಂಚ ವಾಗ್ವಾದವೂ ಆಯಿತು. ಇದನ್ನು ನೋಡ್ತಾ ಇದ್ದ ಮೊಹಮ್ಮದ್ ಸಿರಾಜ್ ಸಹ ಇದಕ್ಕೆ ಧ್ವನಿ ಗೂಡಿಸಿ. ನಿಜಕ್ಕೂ ಈ ಚೆಂಡು 10 ಓವರ್ ಹಳೆಯದಾಗಿದೆ ಎಂದು ಸ್ಟಂಪ್ ಮೈಕಲ್‌ನಲ್ಲಿ ಕೇಳಲಾಯಿತು. ಅಂಪೈರ್ ಮತ್ತೆ ಸಿರಾಜ್ ಅವರಿಗೆ ನಿಮ್ಮ ಬೌಲಿಂಗ್ ಲೈನ್ ಅಪ್ ಕಡೆಗೆ ಹೋಗುವಂತೆ ತಿಳಿಸಿದರು. ಸಿರಾಜ್ ಸಿಟ್ಟಿನಿಂದಲೇ ಬೌಲಿಂಗ್ ಮಾಡಲು ಮುಂದಾದರು.
ವೀಕ್ಷಕ ವಿವರಣೆಗಾರರ ಸಂದೇಹ
ಇದೇ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ಕ್ರಿಕೆಟ್ ಆಟಗಾರರು ಸಹ ಈ ಚೆಂಡನ್ನು ನೋಡಿದರೆ, 10 ಓವರ್‌ಗಳ ಹಳೆಯದಾದ ಚೆಂಡು ಎಂದು ಏನು ಅನಿಸ್ತಾ ಇಲ್ಲ. ಇದನ್ನು ನೋಡಿದರೆ 25 ರಿಂದ 30 ಓವರ್ ಮಾಡಲ್ಪಟ್ಟಿರುವ ಚೆಂಡು ಎಂದು ಎನಿಸುತ್ತಿದೆ ಎಂದು ತಿಳಿಸಿದ್ದರು.
ಆಗಿದ್ದೇನು?
ಎರಡನೇ ದಿನದಾಟದಲ್ಲಿ ಜಸ್ಪ್ರಿತ್ ಬುಮ್ರಾ ಅಮೋಘವಾಗಿ ಬೌಲ್ ಮಾಡಿದರು. ಇದೇ ವೇಳೆ ಜಸ್ಪ್ರಿತ್ ಬುಮ್ರಾ ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ಅವರ ವಿಕೆಟ್‌ಗಳನ್ನು ಬೇಗನೆ ಪಡೆದರು. ಇದಾದ ಬಳಿಕ ಚೆಂಡು ಆಕಾದ ಕಳೆದುಕೊಂಡಿತ್ತು. ಹೀಗಾಗಿ ಟೀಮ್ ಇಂಡಿಯಾ ಆ ಚೆಂಡನ್ನು ಬದಲಿಸಬೇಕಾಯಿತು. ಆದರೆ ಅಂಪೈರ್ ನೀಡಿದ ಹೊಸ ಚೆಂಡು ಟೀಮ್ ಇಂಡಿಯಾದ ಆಟಗಾರರಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿತು. ಭಾರತ ತಂಡದಿಂದ ಅಂಪೈರ್‌ಗೆ ದೂರು ನೀಡಲಾಯಿತು ಮತ್ತು ಈ ಚೆಂಡು ಸುಮಾರು 10 ಓವರ್‌ಗಳು ಹಳೆಯದು ಎಂದು ಹೇಳಲಾಯಿತು. ಎರಡನೇ ದಿನದಾಟದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 353 ರನ್ ಸೇರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications