IND vs ENG Test: ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಕೈ ಚೆಲ್ಲಿದ ಸಿರಾಜ್, ಆಕಾಶ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 180 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ತಂಡಕ್ಕೆ ನೆರವಾದರು. ಭಾರತ ಎರಡನೇ ಇನಿಂಗ್ಸ್ ಆರಂಭಿಸಿದ್ದು 1 ವಿಕೆಟ್‌ಗೆ 64 ರನ್ ಸೇರಿಸಿದೆ.
ಶುಕ್ರವಾರ ನಡೆದ ಆಟದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 77 ರನ್‌ಗಳಿಗೆ ಆಟ ಮುಂದುವರೆಸಿ, 407 ರನ್ ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಇಬ್ಬರು ವೇಗಿಗಳು ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಕೈ ಚೆಲ್ಲಿದರು.

ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಎರಡು ಬಾರಿ ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಕೈ ಚೆಲ್ಲಿದರು. ಈ ಪಂದ್ಯದ ನಾಲ್ಕನೇ ಓವರ್‌ನಲ್ಲಿ ಆಕಾಶ್ ದೀಪ್ ಬೌಲಿಂಗ್ ಮಾಡಿದರು. ಈ ವೇಳೆ ನಾಲ್ಕನೇ ಎಸೆತವನ್ನು ಬೆನ್ ಡಕೆಟ್ ಕಟ್ ಮಾಡಿ ಬೌಂಡರಿ ಪಡೆಯಲು ಮುಂದಾದರು. ಆದರೆ ಶುಭಮನ್ ಗಿಲ್ ತಮ್ಮ ಎಡಗಡೆ ನೆಗೆದು ಅದ್ಭುತ ಕ್ಯಾಚ್ ಪಡೆದರು. ಇದಾದ ನಂತರದ ಎಸೆತದಲ್ಲಿ ಒಲಿ ಪೋಪ್ ಫ್ಲಿಕ್ ಮಾಡಲು ಮುಂದಾದರು. ಇವರು ಸ್ಲೀಪ್‌ನಲ್ಲಿ ನಿಂತಿದ್ದ ಕೆಎಲ್ ರಾಹುಲ್ ಅಮೋಘ ಕ್ಯಾಚ್ ಹಿಡಿದರು. ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಆಕಾಶ್ ದೀಪ್‌ಗೆ ಹ್ಯಾಟ್ರಿಕ್ ಪಡೆಯುವ ಅವಕಾಶ ಇತ್ತು. ಆಗ ಜೋ ರೂಟ್ ಬ್ಯಾಟಿಂಗ್ ಬಂದರು. ಆದರೆ ಆರನೇ ಎಸೆತವನ್ನು ರೂಟ್ ಎಚ್ಚರಿಕೆಯಿಂದ ಆಡಿ ಹ್ಯಾಟ್ರಿಕ್ ನೀಡದಂತೆ ತಡೆದರು.
ಹ್ಯಾಟ್ರಿಕ್ ಅವಕಾಶ ಕೈ ಚೆಲ್ಲಿದ ಸಿರಾಜ್
ಮೂರನೇ ದಿನದಾಟದಲ್ಲಿ ಸಿರಾಜ್ ಸಹ ಇಂತಹದ್ದೇ ಅವಕಾಶವನ್ನು ಪಡೆದರು. ಇನಿಂಗ್ಸ್‌ನ 22ನೇ ಓವರ್ ಮೊಹಮ್ಮದ್ ಸಿರಾಜ್ ಬ್ಯಾಟ್ ಮಾಡಿದರು. ಈ ವೇಳೆ ಸಿರಾಜ್ ಸಹ ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಪಡೆದರು. ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್ ಜೋ ರೂಟ್ ಅವರಿಗೆ ಸಿರಾಜ್ 22ನೇ ಓವರ್‌ನ ಮೂರನೇ ಎಸೆತದಲ್ಲಿ ಖೆಡ್ಡಾ ತೋಡಿದರು. ಈ ಚೆಂಡು ಲೆಗ್ ಸೈಡ್ ಆಚೆ ಹೊರಟಿತ್ತು. ಆಗ ಜೋ ರೂಟ್ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಸಹ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಆದರೆ ನಂತರದ ಎಸೆತವನ್ನು ವಿಕೆಟ್ ಕೀಪರ್ ಜೇಮಿ ಸ್ಮಿತ್ ಎದುರಿಸಿದರು. ಈ ವೇಳೆ ಸ್ಮಿತ್ ಬೌಂಡರಿ ಬಾರಿಸಿ ಮಿಂಚಿದರು. ಟೀಮ್ ಇಂಡಿಯಾದ ಇಬ್ಬರು ಬೌಲರ್‌ಗಳು ಹ್ಯಾಟ್ರಿಕ್ ಪಡೆಯುವ ಸುವರ್ಣ ಅವಕಾಶ ಕೈಚೆಲ್ಲಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications