Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Siraj: ಸಿರಾಜ್‌ ಕಮಾಲ್‌ ಫೀಲ್ಡಿಂಗ್‌: ಒಂದೇ ಕೈನಲ್ಲಿ ಹಿಡಿದ ಸೂಪರ್ ಕ್ಯಾಚ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್‌ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಇತಿಹಾಸ ಬರೆದಿದೆ. ಈ ಮೈದಾನದಲ್ಲಿ ಗೆಲುವು ದಾಖಲಿಸಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ 336 ರನ್‌ ಜಯ ದಾಖಲಿಸುವ ಮೂಲಕ, ಆಂಡರ್ಸನ್‌, ತೆಂಡುಲ್ಕರ್ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಈ ಗೆಲುವಿನಲ್ಲಿ ಟೀಮ್ ಇಂಡಿಯಾದ ಪರ ಸ್ಟಾರ್ ಆಟಗಾರರು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಈ ಮೂಲಕ ತಂಡ ಐತಿಹಾಸಿಕ ಸಾಧನೆ ಮಾಡುವಲ್ಲಿ ಶ್ರಮಿಸಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ಆಕಾಶ್ ದೀಪ್ 99 ರನ್‌ ನೀಡಿ ಆರು ವಿಕೆಟ್‌ ಪಡೆದರು. ಉಳಿದ ಬೌಲರ್‌ಗಳು ತಲಾ ಒಂದು ವಿಕೆಟ್‌ ಪಡೆದರು.

Siraj s Stunning Catch Seals Historic Win for India in Birmingham

ಇಂಗ್ಲೆಂಡ್ ವಿರುದ್ಧದ ಇನ್ನಿಂಗ್ಸ್‌ನ 64 ನೇ ಓವರ್ ರವೀಂದ್ರ ಜಡೇಜಾ ಬೌಲ್ ಮಾಡಿದರು. ಈ ಓವರ್‌ನ ಐದನೇ ಎಸೆತವನ್ನು ಅವರು ಜೋಸ್ ಟಂಗ್‌ ಎದುರಿಸಿದರು. ಕಾಲು ಮೇಲೆ ಬರುತ್ತಿದ್ದ ಚೆಂಡನ್ನು ಟಂಗ್ ಫ್ಲಿಕ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ನ ಅಂಚಿಗೆ ತಾಗಿ ಗಾಳಿಯಲ್ಲಿ ಸಾಗಿತು. ಈ ವೇಳೆ ಈ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಸಿರಾಜ್‌ ಅಮೋಘ ಕ್ಯಾಚ್ ಪಡೆದರು. ಮಿಡ್‌ ವಿಕೆಟ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್‌ ತಮ್ಮ ಬಲಗಡೆಗೆ ಡೈವ್ ಮಾಡಿ ಅಮೋಘ ಕ್ಯಾಚ್ ಪಡೆದರು.

ಮೊಹಮ್ಮದ್‌ ಸಿರಾಜ್‌ ಈ ಕ್ಯಾಚ್ ಪಡೆಯುತ್ತಿದ್ದಂತೆ ಎಲ್ಲರೂ ಬಂದು ಸಿರಾಜ್‌ ಅವರಿಗೆ ಅಭಿನಂದಿಸಿದರು. ಈ ಮೂಲಕ ಟೀಮ್ ಇಂಡಿಯಾ ಗೆಲುವಿನ ಹತ್ತಿರಕ್ಕೆ ಬಂದು ನಿಲ್ಲುವಲ್ಲಿ ಸಿರಾಜ್ ಅವರ ಈ ಕ್ಯಾಚ್ ಅನುಕೂಲವಾಯಿತು. ವೇಗಿ ಮೊಹಮ್ಮದ್‌ ಸಿರಾಜ್‌ ಈ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದು ಬೀಗಿದರು. ಈ ಮೂಲಕ ತಂಡದ ಗೆಲವಿಗೆ ತಮ್ಮದೇ ಪಾತ್ರವನ್ನು ನೀಡಿದರು.

ಸರಣಿ ಸಮಬಲ

ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್‌ಗಳಿಂದ ಸೋತು ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೆ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದಿಂದ ವೇಗಿ ಜಸ್ಪ್ರೀತ್ ಬುಮ್ರಾ ದೂರ ಉಳಿದಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಗೆಲುವು ದಾಖಲಿಸುವುದು ಹೇಗೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆಗ ತಂಡವನ್ನು ಸೇರಿಕೊಂಡ ಆಕಾಶ್ ದೀಪ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲ್ ಮಾಡಿದರು. ಹಾಗೆಯೇ ಎಲ್ಲ ಆಟಗಾರರು ಎರಡನೇ ಟೆಸ್ಟ್‌ ಪಂದ್ಯದಲ್ಲಿ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಆಟವಾಡಿದರು. ಪರಿಣಾಮ ಭಾರತ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಮೈದಾನದಲ್ಲಿ ಈ ಮೊದಲು ಭಾರತ 7 ಸೋಲು ಹಾಗೂ 1 ಡ್ರಾ ಸಾಧಿಸಿತ್ತು.

Story first published: Monday, July 7, 2025, 8:15 [IST]
Other articles published on Jul 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+