For Quick Alerts
ALLOW NOTIFICATIONS  
For Daily Alerts
 

ODI World Cup 2023: ಕಣಕ್ಕೆ ಇಳಿಯಲಿರುವ ಐಪಿಎಲ್‌ನ 'ಈ 6' ನಾಯಕರು

By ನಾಗೇಶ್

ಈ ಬಾರಿ ವಿಶ್ವಕಪ್ ನಲ್ಲಿ ಕಣಕ್ಕೆ ಇಳಿಯಲಿದ್ದಾರೆ ಐಪಿಎಲ್ ನ ಆರು ನಾಯಕರು, ಯಾರು ಎಷ್ಟು ಬಾರಿ ಪ್ರಶಸ್ತಿ ಗೆದ್ದಿದ್ದಾರೆ ಗೊತ್ತಾ?

ಭಾರತದಲ್ಲಿ ಈ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಪಂದ್ಯಾವಳಿಯು ಅಕ್ಟೋಬರ್ 5 ರಂದು ಆರಂಭಗೊಳ್ಳಲಿದೆ. ನವೆಂಬರ್ 19 ರಂದು ಅಹಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ವಿಶ್ವಕಪ್ ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಈ ಪೈಕಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ತಂಡಗಳನ್ನು ಪ್ರಕಟಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವಕಪ್ ನಲ್ಲೂ ಪ್ರಾಬಲ್ಯ ಸಾಧಿಸಲಿದೆ ಎಂಬುದು ಸ್ಪಷ್ಟವಾಗಿದೆ. ಒಟ್ಟು 6 ಐಪಿಎಲ್ ನಾಯಕರು ವಿಶ್ವಕಪ್ ನಲ್ಲಿ ಭಾಗವಹಿಸಲಿದ್ದಾರೆ. ಅವರಲ್ಲಿ ಒಬ್ಬರು ಮಾತ್ರ ನಾಯಕರಾಗಿ ಆಡಲಿದ್ದಾರೆ. ಇವರೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ.

Six IPL Teams Captains Playing For ODI World Cup 2023 For Their Nation

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಮುನ್ನಡೆಸುತ್ತಾರೆ. ಅವರ ನಾಯಕತ್ವದಲ್ಲಿ, ಮುಂಬೈ 5 ಬಾರಿ ಪ್ರಶಸ್ತಿ ಗೆದ್ದಿದೆ. ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ.

ರೋಹಿತ್ ಶರ್ಮಾ ಅಲ್ಲದೆ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರು ಐಪಿಎಲ್ ನಲ್ಲೂ ನಾಯಕರಾಗಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಒಮ್ಮೆ ಪ್ರಶಸ್ತಿ ಗೆದ್ದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ವಹಿಸಿಕೊಂಡಿದ್ದಾರೆ. ಗಾಯದ ಕಾರಣ ಶ್ರೇಯಸ್ ಕಳೆದ 2023ರ ಋತುವಿನಲ್ಲಿ ಆಡಲಿಲ್ಲ. ಅವರ ಸ್ಥಾನದಲ್ಲಿ ನಿತೀಶ್ ರಾಣಾ ತಂಡವನ್ನು ಮುನ್ನಡೆಸಿದ್ದರು.

ರಾಹುಲ್ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ

ಕೆ.ಎಲ್. ರಾಹುಲ್ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ. ಇವರಲ್ಲದೆ, ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಈ ವಿಶ್ವಕಪ್ ನಲ್ಲಿ ಆಡಲಿದ್ದಾರೆ. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಮರ್ಕ್ರಂ ನಿಭಾಯಿಸಿದ್ದಾರೆ. ಕಳೆದ 2023ರ ಋತುವಿನಲ್ಲಿ ಅವರನ್ನು ಹೊಸ ನಾಯಕನನ್ನಾಗಿ ಮಾಡಲಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಗಾಯಕ್ಕೆ ತುತ್ತಾಗಿದ್ದರಿಂದ, ಡೇವಿಡ್ ವಾರ್ನರ್ ಅವರು ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಇದಕ್ಕೂ ಮೊದಲು, ಅವರ ನಾಯಕತ್ವದಲ್ಲಿ, ವಾರ್ನರ್ 2016 ರಲ್ಲಿ ಹೈದರಾಬಾದ್ ತಂಡಕ್ಕಾಗಿ ಪ್ರಶಸ್ತಿಯನ್ನು ಗೆಲ್ಲಿಸಿಕೊಡುವಲ್ಲಿ ಸಫಲರಾಗಿದ್ದರು. ಈ ಮೂಲಕ ಒಟ್ಟು 6 ನಾಯಕರ ಪೈಕಿ ರೋಹಿತ್, ಪಾಂಡ್ಯ ಮತ್ತು ವಾರ್ನರ್ ಮಾತ್ರ ತಮ್ಮ ನಾಯಕತ್ವದಲ್ಲಿ ತಂಡವನ್ನು ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ.

ಐಪಿಎಲ್ ತಂಡಗಳ ನಾಯಕರುಗಳು:

1. ಮುಂಬೈ ಇಂಡಿಯನ್ಸ್ - ರೋಹಿತ್ ಶರ್ಮಾ
2. ಕೋಲ್ಕತ್ತಾ ನೈಟ್ ರೈಡರ್ಸ್ - ಶ್ರೇಯಸ್ ಅಯ್ಯರ್
3. ಗುಜರಾತ್ ಟೈಟಾನ್... ಹಾರ್ದಿಕ್ ಪಾಂಡ್ಯ
4. ಲಕ್ನೋ ಸೂಪರ್ ಜೈಂಟ್ಸ್ - ಕೆಎಲ್ ರಾಹುಲ್
5. ಸನ್ ರೈಸರ್ಸ್ ಹೈದರಾಬಾದ್- ಏಡನ್ ಮಾರ್ಕ್ರಾಮ್
6. ಡೆಲ್ಲಿ ಕ್ಯಾಪಿಟಲ್ಸ್ - ಡೇವಿಡ್ ವಾರ್ನರ್

Story first published: Friday, September 8, 2023, 12:40 [IST]
Other articles published on Sep 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+