For Quick Alerts
ALLOW NOTIFICATIONS  
For Daily Alerts
 

ತಿಂದು ಆಡುವ ವಯಸ್ಸಿನಲ್ಲಿ ಸಾಧನೆಯತ್ತ ಗುರಿ: ಕ್ರಿಕೆಟ್‌ಗಾಗಿ ಮಟನ್‌, ಪಿಜ್ಜಾ ಬಿಟ್ಟ ಯಂಗ್ ಪ್ಲೇಯರ್

ಯಾವುದೇ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಲು ತ್ಯಾಗ ಭಾರೀ ಇಂಪಾರ್ಟೆಂಟ್‌. ತಾನು ಹಾಕಿಕೊಂಡಿದ್ದ ಗುರಿಯನ್ನು ಮುಟ್ಟಲು ಆಟಗಾರ ತ್ಯಾಗವನ್ನು ಮಾಡುವುದು ಬಹಳ ಮುಖ್ಯ. ಅಂದಾಗ ಮಾತ್ರ ದೊಡ್ಡ ಸಾಧನೆಯ ಹಾದಿ ಓಪನ್ ಆಗುತ್ತದೆ. ಇಂಹತದ್ದೇ ದೊಡ್ಡ ಸಾಧನೆಯನ್ನು ಮಾಡುವ ಕನಸನ್ನು ಕಂಡು, ಈಗ ಮೊದಲ ಬಾರಿಗೆ ಮೈದಾನಕ್ಕೆ ಐಪಿಎಲ್‌ನಲ್ಲಿ ಅಂಗಳಕ್ಕೆ ಇಳಿದ ಯಂಗ್ ಪ್ಲೇಯರ್ ಆಟಗಾರ ಸಾಧನೆಯ ಬಗ್ಗೆ ವರದಿ ಇಲ್ಲಿದೆ.

ಇತ್ತೀಚಿಗೆ ಎಲ್‌ಎಸ್‌ಜಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಗುರಿಯನ್ನು ಬೆನ್ನಟ್ಟಿದಾಗ ರಾಜಸ್ಥಾನ ರಾಯಲ್ಸ್‌ ಇಂಪ್ಯಾಕ್ಟ್‌ ಪ್ಲೇಯರ್‌ ರೂಪದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಮಣೆ ಹಾಕಿತು. ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ತಾವು ಎದುರಿಸಿದ ಮೊದಲ ಎಸೆತದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇವರು ತಾವು ಎದುರಿಸದ ಮೊದಲ ಎಸೆತದಲ್ಲಿ ಎಕ್ಸ್‌ಟ್ರಾ ಕವರ್‌ ಮೇಲಿನಿಂದ ಸಿಕ್ಸರ್‌ ಬಾರಿಸಿ ತಮ್ಮಲ್ಲಿರುವ ಕ್ಷಮತೆಯ ಟೀಸರ್‌ ತೋರಿಸಿದರು.

Skipped Mutton and Pizza for Cricket 14-Year-Old Vaibhav Suryavanshi s Fiery IPL Debut Journey

ವೈಭವ್‌ ಸೂರ್ಯವಂಶಿ ಎಂಬ ಯಂಗ್ ಪ್ಲೇಯರ್‌ ಐಪಿಎಲ್‌ ಎಂಬ ದೊಡ್ಡ ವೇದಿಕೆ ಮೇಲೆ ತನ್ನನ್ನು ತೋರಿಸಿಕೊಂಡಿದ್ದು, ಸಿಕ್ಸರ್‌ಗಳ ಮೂಲಕ. ಇವರು ತಾವು ನಿಂತು ತಡೆದು ಆಡುವ ಆಟಗಾರ ಅಲ್ಲವೇ ಅಲ್ಲ ಎಂದು ತಾವು ಎದುರಿಸಿದ ಮೂರನೇ ಎಸೆತದಲ್ಲಿ ಮತ್ತೆ ಸಾಬೀತು ಪಡಿಸಿದರು. ಆವೇಶ್ ಖಾನ್‌ ಎಸೆತದಲ್ಲಿ ಆಗಸದೆತ್ತರಕ್ಕೆ ಚೆಂಡನ್ನು ಅಟ್ಟಿ ಅಬ್ಬರಿಸಿದರು. ಇನ್ನು ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರಿಗೆ ತಮ್ಮ ಸ್ಪಿನ್ ಪಿರ್ಕಿಯಿಂದಲೇ ಕಾಟ ನೀಡಿರುವ ದಿಗ್ವೇಶ್ ರಾಠಿ ಅವರಿಗೂ ಸಿಕ್ಸರ್ ಬಾರಿಸಿದರು. ಆಗಲೇ ಇವರ ಬಗ್ಗೆ ಚರ್ಚೆಗಳು ಆರಂಭವಾದವು.

ಮೊದಲ ಬೌಲ್‌ನಿಂದಲೇ ಅಟ್ಯಾಕ್‌

ವೈಭವ್‌ ಸೂರ್ಯವಂಶಿ ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್ ಝಲಕ್ ನೀಡಿರುವ ಆಟಗಾರ. ಅಂಡರ್ 19 ವಿಶ್ವಕಪ್‌ನಲ್ಲಿ ವೈಭವ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿರುವ ಪ್ರತಿಭೆ. ಅಂದಾಹಾಗೆ ಇವರ ಈ ಸಾಧನೆಯ ಹಿಂದೆ ತ್ಯಾಗವೂ ಇದೆ. ಇವರ ಸ್ಟ್ರೀಕ್ಟ್‌ ಡಯೇಟ್‌ ಪ್ಲ್ಯಾನ್ ಇವರನ್ನು ಇಷ್ಟೊಂದು ಫಿಟ್ ಆಗಿರಲು ಪ್ರೇರೆಪಿಸಿದೆ. ವೈಭವ್‌ ಸೂರ್ಯವಂಶಿ ಅಸಲಿಗೆ ಫುಡಿ ಆದರೆ ಈಗ ತನ್ನ ಇಷ್ಟದ ಆಹಾರಗಳನ್ನು ತಿನ್ನುವುದನ್ನೇ ಬಿಟ್ಟಿದ್ದಾರೆ.

ತ್ಯಾಗದ ಸಾಧನೆ

ವೈಭವ್ ಕುಟುಂಬಸ್ಥರು ಹೇಳುವಂತೆ ವೈಭವ್‌ಗೆ ಮಟನ್‌ ಅಂದ್ರೆ ತುಂಬ ಇಷ್ಟ ಆದರೆ, ಕ್ರಿಕೆಟ್‌ ಆಟಗಾರ ಎಂಬ ಬಯಕೆಯಿಂದಾಗಿ ಅವರು ಮಟನ್‌ ತಿನ್ನುವುದನ್ನೇ ಬಿಟ್ಟಿದ್ದಾರೆ. ಇನ್ನು ಚಿಕ್ಕ ವಯಸ್ಸಿನ ಕ್ರಿಕೆಟ್ ಆಟಗಾರನಿಗೆ ಜಂಗ್ ಫುಡ್‌ಗಳ ಮೇಲೆ ಎಲ್ಲಿಲ್ಲದ ಪ್ರೀತಿ ಫಿಜ್ಜಾ ಅಂದರೆ ವೈಭವ್‌ಗೆ ಪಂಚ್ ಪ್ರಾಣ ಆದರೆ, ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಹೊಂದಿರುವ ವೈಭವ್ ಫಿಜ್ಜಾ ತಿನ್ನುವುದನ್ನು ಬಿಟ್ಟಿದ್ದಾರೆ. ಇವರ ಕ್ರೀಡೆಯ ಮೇಲಿನ ಪ್ರೀತಿ ಹಾಗೂ ಶ್ರದ್ಧೆಯನ್ನು ಕಂಡೆ ರಾಜಸ್ಥಾ ರಾಯಲ್ಸ್ ತಂಡದ ಕೋಚ್ ರಾಹುಲ್ ದ್ರಾವಿಡ್ ಇವರನ್ನು ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ರಾಹುಲ್‌, ವೈಭವ್ ಸೂರ್ಯವಂಶಿ ಅವರೊಂದಿಗೆ ದಿನವೂ ನೆಟ್ಸ್‌ನಲ್ಲಿ ರಾಹುಲ್‌ ದ್ರಾವಿಡ್ ಬೆವರು ಹರಿಸಿದ್ದಾರೆ. ಅದರ ಪರಿಣಾಮವೇ ಇಂದು ವೈಭವ್ ತನ್ನ ಬ್ಯಾಟಿಂಗ್ ಝಲಕ್‌ ದೊಡ್ಡ ವೇದಿಕೆಯಲ್ಲಿ ತೋರಿಸಿದ್ದಾರೆ.

Story first published: Monday, April 21, 2025, 18:52 [IST]
Other articles published on Apr 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+