ಟಿ20ಐ: ಬೇಡದ ದಾಖಲೆ ಬರೆದ ಲಂಕಾದ ಬೌಲರ್ ಕಸುನ್ ರಜಿತಾ

ಅಡಿಲೇಡ್, ಅಕ್ಟೋಬರ್ 27: ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. ಜೊತೆಗೆ ಶ್ರೀಲಂಕಾದ ಬೌಲರ್ ಕಸುನ್ ರಜಿತಾ ಅವರು ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.
ಟಿ20 ಕ್ರಿಕೆಟ್ ಪಂದ್ಯವೊಂದರಲ್ಲಿ ಅತಿ ಹಚ್ಚು ರನ್ ಚೆಚ್ಚಿಸಿಕೊಂಡ ಬೌಲರ್ ಎಂಬ ಅಪಕೀರ್ತಿ ಕಸುನ್ ಪಾಲಾಗಿದೆ. ಭಾನುವಾರ ನಡೆದ ಈ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳು ಅದರಲ್ಲೂ ಡೇವಿಡ್ ವಾರ್ನರ್ ಭರ್ಜರಿ ಪ್ರದರ್ಶನ ನೀಡಿ ಶ್ರೀಲಂಕಾ ಬೌಲರ್ ಗಳನ್ನು ಕಾಡಿದರು.
ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ 1ಟಿ20 ಸ್ಕೋರ್ ಕಾರ್ಡ್
ಕಸುನ್ 4 ಓವರ್ಗಳಲ್ಲಿ 75 ರನ್ ಹೊಡೆಸಿಕೊಂಡರು. 7 ಬೌಂಡರಿ ಹಾಗೂ 6 ಸಿಕ್ಸರ್ ಚೆಚ್ಚಿಸಿಕೊಂಡ ಕಸುನ್ ಯಾವುದೆ ವಿಕೆಟ್ ಪಡೆಯಲಿಲ್ಲ.
ಕಸುನ್ ಗೂ ಮುನ್ನ ಟರ್ಕಿ ಬೌಲರ್ ತುನಾಹನ್ ತರನ್ ಹೆಸರಿನಲ್ಲಿ ಅತ್ಯಧಿಕ ರನ್ ನೀಡಿದ ದಾಖಲೆಯಿತ್ತು. ತರನ್ 4 ಓವರ್ ಗಳಲ್ಲಿ 7ರನ್ ನೀಡಿದ್ದರು. ಈಗ ರಜಿತಾ ಹೊಸ ದಾಖಲೆ ಬರೆದಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಅವರ ಅಜೇಯ 100ರನ್ ಆಸರೆಯಾಯಿತು.
ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 233 ರನ್ಗಳ ಬಾರಿಸಿತು. ಬೃಹತ್ ಮೊತ್ತವನ್ನು ಚೇಸ್ ಮಾಡಲು ಯತ್ನಿಸಿದ ಶ್ರೀಲಂಕಾದ ಬ್ಯಾಟ್ಸ್ ಮನ್ ಗಳು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಲಷ್ಟೇ ಸಾಧ್ಯವಾಯಿತು.
Story first published: Sunday, October 27, 2019, 20:06 [IST]
Other articles published on Oct 27, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications